ಹೇಮಾ ಪ್ರಭಾತ್ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ?? ಇವರ ಕುರಿತು ನಿಮಗೆ ತಿಳಿಯದ ಮಾಹಿತಿ.

ಹೇಮಾ ಪ್ರಭಾತ್ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ?? ಇವರ ಕುರಿತು ನಿಮಗೆ ತಿಳಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೇ ನಾವು ಬಾಲ್ಯದಲ್ಲಿ ಹಲವಾರು ಸಿನಿಮಾಗಳನ್ನು ನೋಡಿದ್ದೇವೆ ಕೆಲವು ಸಿನಿಮಾಗಳನ್ನು ಎಷ್ಟು ಬಾರಿ ನೋಡಿದರೂ ನಮಗೆ ಬೇಜಾರಾಗುವುದಿಲ್ಲ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಅಂತಹ ಸಿನಿಮಾಗಳಲ್ಲಿ ಅಮೆರಿಕ ಅಮೆರಿಕ ಎಂಬ ಸಿನಿಮಾ ಕೂಡ ಒಂದು. ಇಂದಿಗೂ ಕೂಡ ಅಮೆರಿಕ ಅಮೆರಿಕ ಚಿತ್ರದ ನೂರು ಜನ್ಮಕೂ ನೂರಾರು ಜನ್ಮಕೂ ಎಂಬ ಹಾಡು ಬಂದ ತಕ್ಷಣ ನಮ್ಮ ಕಿವಿ ನೆಟ್ಟಗಾಗುತ್ತದೆ, ಈ ಚಿತ್ರ ಕನ್ನಡದ ಚಿತ್ರರಂಗದಲ್ಲಿ ಒಂದು ಅಚ್ಚಳಿಯದೆ ಉಳಿದಿರುವ ಚಿತ್ರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು.

ಇನ್ನು ಈ ಸಿನಿಮಾದಲ್ಲಿನ ನಟಿ ಹೇಮಾ ಪ್ರಭಾತ್ ರವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಇವರ ಹೆಸರು ಹೇಳದೆ ತಕ್ಷಣ ನಿಮಗೆ ನೆನಪಾಗದೆ ಇದ್ದರೂ ಕೂಡ ನೂರು ಜನ್ಮಕೂ ನೂರಾರು ಜನ್ಮಕೂ ಎಂಬ ಹಾಡಿನಲ್ಲಿ ನಟನೆ ಮಾಡಿರುವ ನಟಿ ಎಂದ ತಕ್ಷಣ ನಿಮಗೆ ಹೇಮಾ ಪ್ರಭಾತ್ ರವರು ನೆನಪಾಗುತ್ತಾರೆ. ಈ ಹಾಡಿನ ಮೂಲಕ ಎಲ್ಲರಿಗೂ ಚಿರಪರಿಚಿತರಾದ ಹೇಮಾ ಪ್ರಭಾತ್ ರವರು ಮೊದಲಿಗೆ ಕಿರುತೆರೆಯ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಅಂದಿನ ಕಾಲದಲ್ಲಿ ರೈತ ಯೋಧ ಎಂಬ ಕಿರುತೆರೆಯ ಚಿಕ್ಕ ಧಾರವಾಹಿಯಲ್ಲಿ ಇವರು ಅಭಿನಯಿಸಿದರು ಆದರೆ ಈ ವಿಷಯ ಯಾರಿಗೂ ತಿಳಿದಿರಲಿಲ್ಲ.

ಇನ್ನು ಹೀಗೆ ಅಮೆರಿಕ ಅಮೆರಿಕ ಚಿತ್ರದ ನಂತರವೂ ಕೂಡ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಚಿತ್ರರಂಗದಲ್ಲಿ ಉತ್ತಮ ಯಶಸ್ಸು ಗಳಿಸಿದ ಹೇಮಾ ಪ್ರಭಾತ್ ರವರು 15 ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ, ಇತ್ತೀಚೆಗೆ ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಕಿರುತೆರೆ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಯಾಕೆ ನೀವು ಚಿತ್ರರಂಗದಿಂದ ದೂರ ಹೋದಿರಿ ಎಂದು ಕೇಳಿದಾಗ ನಾನು ನನ್ನ ತಾಯ್ತನ ಮತ್ತು ಮಕ್ಕಳನ್ನು ಬೆಳೆಸುವುದು ಮೊದಲನೇ ಆದ್ಯತೆಯಾಗಿತ್ತು. ಆದಕಾರಣ ಚಿತ್ರರಂಗದಿಂದ ದೂರ ಉಳಿದಿದ್ದೆ, ಈಗಲೂ ಕೂಡ ನನ್ನ ಮಗಳು ಕಿರುತೆರೆಗೆ ಮತ್ತೆ ವಾಪಸ್ಸು ಹೋಗು ಎಂಬ ಕಾರಣಕ್ಕೆ ಬಂದಿದ್ದೇನೆ ಎಂದಿದ್ದರು

ಹೇಮಾ ಪ್ರಭಾತ್ ರವರು ನಟಿಸಿದ್ದು ಕೇವಲ ಕೆಲವೇ ಕೆಲವು ಸಿನಿಮಾಗಳಾದರೂ ಕನ್ನಡದ ಖ್ಯಾತ ನಟರಾಗಿರುವ ರಮೇಶ್ ಅರವಿಂದ್, ಶಿವರಾಜ್ ಕುಮಾರ್, ರವಿಚಂದ್ರನ್ ರವರ ಜೊತೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಸ್ವಾಮೆಂದ್ರ ಪಂಚಮುಖಿ ರವರನ್ನು ವಿವಾಹವಾದ ಹೇಮಾ ಪ್ರಭಾತ್ ರವರು ತದನಂತರ ಕೆಲವು ವರ್ಷಗಳಾದ ಬಳಿಕ ವಿಚ್ಛೇದನ ಪಡೆದುಕೊಂಡರು. ತದ ನಂತರ ಪ್ರಶಾಂತ್ ಗೋಪಾಲ ಶಾಸ್ತ್ರಿ ಎಂಬುವವರನ್ನು ವಿವಾಹವಾದ ಹೇಮಾ ಪ್ರಭಾತ್ ರವರು ಇದೀಗ ಸುಖವಾದ ಜೀವನ ನಡೆಸುತ್ತಿದ್ದಾರೆ. ಇನ್ನು ಇವರು ಇದೀಗ ರಕ್ಷಾಬಂಧನ ಎಂಬ ನಾಟ್ಯ ಶಾಲೆಯನ್ನು ಆರಂಭಿಸಿದ್ದಾರೆ, ಅಲ್ಲಿ ನೂರಾರು ಮಕ್ಕಳಿಗೆ ದಿನನಿತ್ಯ ನಾಟ್ಯ ತರಬೇತಿ ನೀಡುತ್ತಾ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ.