ಸಂಭಾವನೆ ಪಡೆಯದೆ ಉತ್ತಮ ಕೆಲಸಕ್ಕೆ ಕೈ ಹಾಕಿದ ಖ್ಯಾತ ನಟ ದರ್ಶನ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ನಟ ರಷ್ಟೇ ಅಲ್ಲದೆ ವಿವಿಧ ಚಿತ್ರರಂಗದ ಯಾವುದೇ ನಟರು ಜಾಹೀರಾತಿನಲ್ಲಿ ಅಥವಾ ಯಾವುದಾದರೂ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾಣಿಸಿಕೊಂಡರೆ ‌ಕೋಟಿ ಕೋಟಿ ಹಣ ಅವರದ್ದಾಗಲಿದೆ. ಕಂಪನಿಗಳು ಇವರ ಜೊತೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ಕಾದು ನಿಂತಿರುತ್ತಾರೆ. ಆದರೆ ಹಲವಾರು ನಟರು ಹಲವಾರು ಒಪ್ಪಂದಗಳಿಗೆ ಉತ್ತಮ ಕಾರ್ಯ ಎಂದು ಹೇಳಿ ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಲು ಒಪ್ಪಿಗೆ ನೀಡುತ್ತಾರೆ.

ನಟರು ಹಾಗೂ ಸೆಲೆಬ್ರಿಟಿಗಳು ಹಾಗೂ ಕ್ರೀಡಾ ಆಟಗಾರರು ಹೀಗೆ ಸಂಭಾವನೆ ಪಡೆಯದೆ ಸಮಾಜಕ್ಕೆ ಒಳ್ಳೆಯದು ಎಂದು ತಿಳಿದ ತಕ್ಷಣ ಒಪ್ಪಿಕೊಳ್ಳುತ್ತಾರೆ. ಕನ್ನಡದ ಖ್ಯಾತ ನಟರು ಕೂಡ ಈ ರೀತಿಯ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಇದೀಗ ಅದೇ ಸಾಲಿಗೆ ಭಾರಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಡಿ ಬಾಸ್ ಖ್ಯಾತಿಯ ದರ್ಶನ್ ಅವರು ಸೇರಿಕೊಂಡಿದ್ದಾರೆ.

ಹೌದು ಸ್ನೇಹಿತರೇ ಸ್ವತಹ ಕೃಷಿಯ ಮೇಲೆ ಹೆಚ್ಚು ಒಲವನ್ನು ಹೊಂದಿರುವ ಹಾಗೂ ಪಶು ಸಂಗೋಪನೆ ಮತ್ತು ಕೃಷಿಯಲ್ಲಿ ತೊಡಗಿಕೊಂಡಿರುವ ನಟ ದರ್ಶನ್ ಅವರು ಇದೀಗ ಕೃಷಿ ಇಲಾಖೆಯ ರಾಯಭಾರಿಯಾಗಿ ಕಾರ್ಯ ನಿರ್ವಹಣೆ ಮಾಡಲು ಸಿದ್ಧರಾಗಿದ್ದಾರೆ. ಬಿಸಿ ಪಾಟೀಲ್ ರವರು ದರ್ಶನ್ ರವರ ಜೊತೆ ಚರ್ಚೆ ನಡೆಸಿ ರಾಯಭಾರಿಯಾಗಲು ಕೇಳಿದ ತಕ್ಷಣ ದರ್ಶನ್ ರವರು ಕೃಷಿಗೆ ಉತ್ತೇಜನ ನೀಡಲು ಸಿದ್ಧ ಎಂದು ಮನಃಸ್ಪೂರ್ತಿಯಾಗಿ ಒಪ್ಪಿಕೊಂಡಿದ್ದು ಯಾವುದೇ ಸಂಭಾವನೆ ಇಲ್ಲದೆ ರೈತರ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದ ಭಾಗವಾಗಿ ವಿವಿಧ ರೈತರ ಜೊತೆ ವಿವಿಧ ಸಂದರ್ಭಗಳಲ್ಲಿ ಒಂದು ದಿನವನ್ನು ರೈತರ ಜೊತೆ ಕಳೆಯಲು ದರ್ಶನ್ ರವರು ಒಪ್ಪಿಗೆ ಸೂಚಿಸಿದ್ದಾರೆ.

Post Author: Ravi Yadav