ಮಜಾಭಾರತದ ವೇದಿಕೆಯಲ್ಲಿ ಸುದೀಪ್ ಎಷ್ಟು ಹಣ ನೀಡಿದರೂ ಎಂದವರಿಗೆ ಉತ್ತರ ನೀಡಿದ ಕಾರ್ತಿಕ್.

ಮಜಾಭಾರತದ ವೇದಿಕೆಯಲ್ಲಿ ಸುದೀಪ್ ಎಷ್ಟು ಹಣ ನೀಡಿದರೂ ಎಂದವರಿಗೆ ಉತ್ತರ ನೀಡಿದ ಕಾರ್ತಿಕ್.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸು ಸುಮ್ಮನೆ ಸಿಗುವುದಿಲ್ಲ ಸಾಕಷ್ಟು ಶ್ರಮವಹಿಸಿ ನಿಮ್ಮ ಜೀವನವನ್ನು ರೂಪಿಸಿ ಕೊಳ್ಳಬೇಕಾಗುತ್ತದೆ. ಯಾರೋ ತಾತ ಅಜ್ಜಿ ಮಾಡಿಟ್ಟಿದ್ದ ಹಣದಲ್ಲಿ ಕೆಲವರು ಯಶಸ್ಸು ತಮ್ಮದು ಎಂದು ಬೀಗುತ್ತಾರೆ ಆದರೆ ತಮ್ಮ ಜೀವನದ ಪ್ರತಿಯೊಂದು ಮೆಟ್ಟಿಲುಗಳನ್ನು ತಾವೇ ಸ್ವತಃ ಹತ್ತಿ ತಮ್ಮದೇ ಆದ ಸವಾಲುಗಳನ್ನು ಎದುರಿಸಿ ಎಲ್ಲವನ್ನೂ ದಾಟಿ ಯಶಸ್ವಿಯಾಗುವುದು ಸುಲಭದ ಕೆಲಸವಲ್ಲ. ಹಾಗೆಂದು ಕೆಲವರಿಗೆ ಯಶಸ್ಸು ಸಿಗುವುದೇ ಕಷ್ಟ ಎಂದಲ್ಲ ಕೆಲವರಿಗೆ ಅದೃಷ್ಟ ಚೆನ್ನಾಗಿದ್ದು, ರಾತ್ರೋರಾತ್ರಿ ಅದೃಷ್ಟದ ಬಾಗಿಲು ತೆಗೆದು ಬಿಡುತ್ತದೆ. ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಅಸಲಿಗೆ ಎಲ್ಲವೂ ನಾವಂದುಕೊಂಡಂತೆ ಆದರೆ ನಾವು ದೇವರಾಗೆ ಬಿಡುತ್ತೇವೆ ಮನುಷ್ಯರಾಗಿ ಉಳಿಯುವುದಿಲ್ಲ

ಇದೇನಪ್ಪಾ ಇದು ಕರುನಾಡ ವಾಣಿಯವರು ಯಾವುದಾದರೂ ಸ್ವಾಮೀಜಿ ಆಗಿಬಿಟ್ಟರ ಎಂದು ಕೊಂಡಿರಾ?? ಸ್ನೇಹಿತರೇ ನಮ್ಮೆಲ್ಲರನ್ನು ನಗುತ್ತಿರುವ ಕೆಲವು ವ್ಯಕ್ತಿಗಳ ಜೀವನದ ಕೆಲವೊಂದು ಮಾಹಿತಿಗಳನ್ನು ತಿಳಿಸುತ್ತೇವೆ. ಬನ್ನಿ ಈ ಕುರಿತು ಸಂಪೂರ್ಣವಾಗಿ ವಿವರಣೆ ನೀಡುತ್ತೇವೆ.

ಸ್ನೇಹಿತರೆ ನೀವೆಲ್ಲರೂ ಪ್ರತಿ ವಾರ ನಮ್ಮನ್ನು ಮನರಂಜಿಸುವ ಮಜಾಭಾರತ ಸ್ಪರ್ಧಿಗಳನ್ನು ನೋಡಿ ಖುಷಿ ಪಟ್ಟಿರುತ್ತೀರಾ, ಆದರೆ ಸ್ನೇಹಿತರೇ ಇವರು ಅಷ್ಟರ ಮಟ್ಟಕ್ಕೆ ಬಂದು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಅದು ಸುಲಭದ ಕೆಲಸವಾಗಿಲ್ಲ, ಕಳೆದ ಕೆಲವು ದಿನಗಳ ಹಿಂದೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಿಚ್ಚ ಸುದೀಪ್ ರವರ ಜೀವನದ ಸಂಪೂರ್ಣ ಮೆಟ್ಟಿಲುಗಳನ್ನು ಹಂತ ಹಂತವಾಗಿ ಅನುಬಂಧ ಕಾರ್ಯಕ್ರಮದಲ್ಲಿ ತೋರಿಸಲಾಗಿತ್ತು. ಆ ಕತೆ ಬಹಳ ಭಾವನಾತ್ಮಕತೆಯಿಂದ ತುಂಬಿತ್ತು ಇದನ್ನು ತಮ್ಮ ಜೀವನದ ಕಥೆಯನ್ನು ನೋಡಿದ ಸುದೀಪ್ ರವರು ಕೂಡ ಒಂದು ಕ್ಷಣ ಭಾವುಕರಾದರು.

ಹೀಗೆ ಭಾವುಕರಾದ ಬಳಿಕ ಸುದೀಪ್ ರವರು ಮಜಾ ಭಾರತ ಕಾರ್ಯಕ್ರಮದಲ್ಲಿ ಹೀಗೆ ತಮ್ಮ ರೀತಿಯಲ್ಲೇ ಕಷ್ಟಪಟ್ಟು ಹಂತಹಂತವಾಗಿ ಮೇಲೆ ಬಂದಿರುವ ಮೂವರು ಕಲಾವಿದರನ್ನು ಗುರುತಿಸಿ ಅವರ ಜೀವನದ ಕುರಿತು ಸಮಾಜಕ್ಕೆ ತಿಳಿಯುವಂತೆ ಮಾಡಿ ನಮ್ಮಿಂದಾದ ಸಹಾಯ ಮಾಡಿದ್ದಾರೆ. ಹೌದು ಸ್ನೇಹಿತರೇ ಸುದೀಪ್ ರವರು ಮಜಾ ಭಾರತ ಕಲಾವಿದರಾದ ವರಲಕ್ಷ್ಮಿ ಜಗ್ಗಪ್ಪ ಹಾಗೂ ಕಾರ್ತಿಕ್ ರವರಿಗೆ ವೇದಿಕೆಯ ಮೇಲೆ ಒಂದು ಎನ್ವಲಪ್ ಕವರ್ ನಲ್ಲಿ ಚೆಕ್ಗಳನ್ನು ನೀಡಿದ್ದರು.

ಈ ಮೂವರಲ್ಲಿ ಕಾರ್ತಿಕ್ ಕೂಡ ಒಬ್ಬರು, ವಿಪರ್ಯಾಸವೇನೆಂದರೆ ಕಾರ್ತಿಕ ರವರಿಗೆ ಹೀಗೆ ಸುದೀಪ್ ರವರು ಹಣ ಸಹಾಯ ಮಾಡಿದ ಬಳಿಕ ಕಾರ್ತಿಕ ರವರನ್ನು ಫೋನ್ ಮಾಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ಕಿಚ್ಚ ಸುದೀಪ್ ಅವರು ನಿಮಗೆ ಎಷ್ಟು ಹಣ ನೀಡಿದ್ದಾರೆ ಎನ್ವಲಪ್ ಕವರ್ ನಲ್ಲಿ ಎಷ್ಟು ಹಣದ ಚೆಕ್ ಇತ್ತು ಎಂದು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ, ಇದನ್ನು ಕಂಡ ಕಾರ್ತಿಕ್ ರವರು ಮಾತನಾಡಿ ನಾವು ಕಷ್ಟದಲ್ಲಿರುವಾಗ ಯಾರು ಕೂಡ ಬಂದು ತಮ್ಮನ್ನು ವಿಚಾರಿಸುವ ಕೆಲಸ ಮಾಡಲಿಲ್ಲ ಆದರೆ ಇದೀಗ ಸುದೀಪ್ ರವರು ಹಣ ನೀಡಿದ ತಕ್ಷಣ ಎಲ್ಲರೂ ನಮ್ಮನ್ನು ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ,

ಅಸಲಿಗೆ ನಾನು ಆ ವೇದಿಕೆಯಲ್ಲಿ ಸುದೀಪ್ ಸರ್ ಕಡೆಯಿಂದ ಹಣ ತೆಗೆದುಕೊಳ್ಳುವ ಬದಲು ನಾನು ಅವರ ಸಿನಿಮಾದಲ್ಲಿ ಒಂದು ಅವಕಾಶ ಕೇಳಿದಿದ್ದರೆ ನನ್ನ ಜೀವನಪೂರ್ತಿ ಉಳಿಯುತ್ತಿತ್ತು ನನ್ನ ಜೀವನ ಕೂಡ ಸೆಟ್ಲ್ ಆಗುತಿತ್ತು, ಹೀಗೆ ಮಾತನ್ನು ಮುಂದುವರಿಸಿರುವ ಕಾರ್ತಿಕ್ ರವರು ಅನುಬಂಧ ವೇದಿಕೆಯಲ್ಲಿ ನನ್ನ ಜೀವನದ ಕಥೆ ತಿಳಿದ ಬಳಿಕ ಎಲ್ಲರೂ ನೀನು ಇಷ್ಟು ಕಷ್ಟಪಟ್ಟು ಮೇಲೆ ಬಂದಿದ್ದ ಎಂಬುದು ನನಗೆ ತಿಳಿದಿರಲಿಲ್ಲ, ಇನ್ನು ಮುಂದೆ ಏನೇ ಕಷ್ಟ ಬಂದರೂ ನಿನ್ನ ಜೊತೆ ನಾವಿರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮತ್ತಷ್ಟು ಜನ ಕೇವಲ ಹಣ ಎಷ್ಟು ಬಂದಿತ್ತು ಹೇಳು ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಹೌದು, ಸುದೀಪ್ ರವರು ನನಗೆ ಹಣ ನೀಡಿದ್ದಾರೆ. ಆದರೆ ಆ ಹಣವನ್ನು ಒಂದು ರೂಪಾಯಿ ಕೂಡ ನಾನು ನನಗಾಗಿ ಖರ್ಚು ಮಾಡುವುದಿಲ್ಲ ಬಂದ ಹಣದಿಂದ ನನ್ನ ತಾಯಿಗೆ ಬೇಕಾದ ವಸ್ತುಗಳನ್ನು ಕೊಡಿಸುತ್ತೇನೆ ಹಾಗೂ ನಮ್ಮ ಮನೆಗೆ ಸುತ್ತ ಒಂದು ಕಾಂಪೌಂಡ್ ಹಾಕಿಸಿ, ಉಳಿದ ಪ್ರತಿಯೊಂದು ರೂಪಾಯಿಯನ್ನು ನನ್ನನ್ನು ಕಷ್ಟಪಟ್ಟು ಸಾಕಿದ ನನ್ನ ತಾಯಿಗಾಗಿ ಖರ್ಚು ಮಾಡುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.