ರಾತ್ರಿ ಉಳಿದ ಅನ್ನದಿಂದ ಅಪ್ಪಳವನ್ನು ಸುಲಭವಾಗಿ ಹೀಗೆ ಮಾಡಿ ನೋಡಿ, ರುಚಿ ಚೆನ್ನಾಗಿರುತ್ತದೆ.

ರಾತ್ರಿ ಉಳಿದ ಅನ್ನದಿಂದ ಅಪ್ಪಳವನ್ನು ಸುಲಭವಾಗಿ ಹೀಗೆ ಮಾಡಿ ನೋಡಿ, ರುಚಿ ಚೆನ್ನಾಗಿರುತ್ತದೆ.

ನಮಸ್ಕಾರ ಸ್ನೇಹಿತರೇ ರಾತ್ರಿಯ ಸಮಯದಲ್ಲಿ ಅನ್ನ ಉಳಿದಿದೆಯಾ?? ರಾತ್ರಿ ಮಾಡಿದ ಅನ್ನವನ್ನು ಮನೆಯವರಿಗೆ ಇಟ್ಟರೆ ನಿಮ್ಮ ಕಡೆ ಬಂದು ಲುಕ್ ನೀಡುತ್ತಾರೆ, ಮುಂಜಾನೆಯೆದ್ದು ಅನ್ನ ಮಾಡು ಎಂದು ಹೇಳುತ್ತಾರೆ. ಹಾಗಿದ್ದರೆ ರಾತ್ರಿ ಉಳಿದ ಅನ್ನವನ್ನು ಏನು ಮಾಡಬೇಕು ಎಂಬ ಅಲೋಚನೆಯಲ್ಲಿ ನೀವು ಇದ್ದರೇ ಬನ್ನಿ, ಇಂದು ನಾವು ಉಳಿದಿರುವ ಅನ್ನದಿಂದ ಅಕ್ಕಿ ಹಪ್ಪಳ ಮಾಡುವ ವಿಧಾನವನ್ನು ತಿಳಿಸುತ್ತೇವೆ. ಹೀಗೆ ರಾತ್ರಿ ಉಳಿದ ಅನ್ನದಿಂದ ಹಪ್ಪಳವನ್ನು ಟ್ರೈ ಮಾಡಿ ರುಚಿ ಹೇಗಿತ್ತು ಎಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ. ಅಕ್ಕಿ ಹಪ್ಪಳ ಮಾಡಲು ಬೇಕಾಗುವ ಪದಾರ್ಥಗಳು: ಉಳಿದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ತರಿತರಿಯಾಗಿ ಪುಡಿ ಮಾಡಿದ ಒಣಮೆಣಸಿನಕಾಯಿ, ಜೀರಿಗೆ.

ಅಕ್ಕಿ ಹಪ್ಪಳ ಮಾಡುವ ವಿಧಾನ: ಮೊದಲಿಗೆ ಒಂದು ಬಿಳಿ ಬಟ್ಟೆಯ ಮೇಲೆ ಉಳಿದ ಅನ್ನವನ್ನು 1 – 2 ಗಂಟೆಗಳ ಕಾಲ ಒಣಗಲು ಬಿಡಬೇಕು. 2 ಗಂಟೆಗಳ ನಂತರ ಅನ್ನವನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ತರಿತರಿಯಾಗಿ ಪುಡಿ ಮಾಡಿದ ಒಣಮೆಣಸಿನಕಾಯಿ(ಕಾರಕ್ಕೆ ಬೇಕಾಗುವಷ್ಟು), ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕೈಗೆ ಎಣ್ಣೆಯನ್ನು ಹಚ್ಚಿಕೊಂಡು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

ನಂತರ ಒಂದು ಪ್ಲಾಸ್ಟಿಕ್ ಕವರ್ ಮೇಲೆ ಎಣ್ಣೆಯನ್ನು ಸವರಿ ಹಿಟ್ಟಿನ ಉಂಡೆಯನ್ನು ಇಟ್ಟು ಹೋಳಿಗೆ ಮಾಡುವ ರೀತಿಯಲ್ಲಿ ಒತ್ತಿಕೊಳ್ಳಿ. ನಂತರ ಇದನ್ನು ಒಂದು ಪ್ಲೇಟಿನ ಮೇಲೆ ಪ್ಲಾಸ್ಟಿಕ್ ಕವರ್ ಅಥವಾ ಬಟ್ಟೆಯನ್ನು ಹಾಕಿ ಬಿಸಿಲಿನಲ್ಲಿ 4 – 5 ದಿನಗಳ ಕಾಲ ಒಣಗಲು ಬಿಡಿ. ಕೊನೆಯದಾಗಿ ಎಣ್ಣೆಯಲ್ಲಿ ಕರಿದರೆ ಅಕ್ಕಿ ಹಪ್ಪಳ ಸವಿಯಲು ಸಿದ್ಧ. ಈ ರೀತಿಯ ಅಕ್ಕಿ ಹಪ್ಪಳವನ್ನು 1 ತಿಂಗಳುಗಳ ಕಾಲ ಸ್ಟೋರ್ ಮಾಡಬಹುದು.