ಭಾವುಕರಾದ ಕನ್ನಡತಿ ನಟ ಕಿರಣ್ ರಾಜ್, ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಕಿರಣ್ ಹೇಳಿದ್ದೇನು ಗೊತ್ತಾ??

ಭಾವುಕರಾದ ಕನ್ನಡತಿ ನಟ ಕಿರಣ್ ರಾಜ್, ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಕಿರಣ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಕೆಲವು ತಿಂಗಳುಗಳ ಹಿಂದೆ ಆರಂಭಗೊಂಡಿರುವ ಕನ್ನಡತಿ ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಬಿಡುಗಡೆಗೊಂಡರೂ ಕೂಡ ಕಲಾವಿದರ ಅಭಿನಯ, ಕಥೆ ಹಾಗೂ ಕಥೆಯನ್ನು ಬಹಳ ಎಳೆಯದೆ ಅದ್ಭುತವಾಗಿ ಧಾರವಾಹಿ ಮೂಡಿ ಬರುತ್ತಿರುವ ಕಾರಣ ದಿನೇದಿನೇ ಧಾರವಾಹಿ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಟಿಆರ್ಪಿ ಲಿಸ್ಟಿನಲ್ಲಿ ಕೊಂಚ ಕೆಳಗೆ ಇದ್ದರೂ ಕೂಡ ದಿನೇ ದಿನೇ ನೋಡುಗರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಟಿಆರ್ಪಿ ಸಾಲಿನಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದು ಬಹಳ ದೂರವಿಲ್ಲ ಎಂಬ ಭಾವನೆ ಮೂಡಿಸುತ್ತದೆ.

ಇನ್ನು ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡಿದೆ. ಅದೇ ಸಂದರ್ಭದಲ್ಲಿ ಕನ್ನಡತಿ ಧಾರಾವಾಹಿಯ ನಟ ಕಿರಣ ರಾಜ್ ರವರು ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ, ಈ ಹಿಂದೆ ಹಿಂದಿ ಕಿರುತೆರೆಯಲ್ಲಿ ಹಲವಾರು ಸೀರಿಯಲ್ ಗಳು ಹಾಗೂ ಸಿನಿಮಾಗಳಲ್ಲಿ ನಟನೆ ಮಾಡಿರುವ ಕಿರಣ ರಾಜ್ ರವರಿಗೆ ಕನ್ನಡತಿ ಒಂದು ರೀತಿಯ ಬ್ರೇಕ್ ನೀಡಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್ ನ ಕಾರ್ಯಕ್ರಮದಲ್ಲಿಯೂ ಕೂಡ ಕಿರಣ ರಾಜ್ ರವರಿಗೆ ಜನ ಮೆಚ್ಚಿದ ನಾಯಕ ಪ್ರಶಸ್ತಿ ಒದಗಿಬಂದಿದೆ. ಅಷ್ಟರಮಟ್ಟಿಗೆ ಜನರು ಕನ್ನಡತಿ ಧಾರವಾಹಿಯನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ.

ಇದೀಗ ಇದೇ ಕಿರಣ ರಾಜ್ ರವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದು ಭಾವುಕರಾಗಿ ನಾನು ಮಧ್ಯಮ ವರ್ಗದಿಂದ ಬಂದೆ, ನಾನು ಕನಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ಯಾರು ಕೂಡ ನನ್ನ ಕನಸನ್ನು ನಂಬಲಿಲ್ಲ, ಹಾಗೆಂದು ನಾನು ನನ್ನ ಕನಸನ್ನು ನಿಲ್ಲಿಸಲಿಲ್ಲ ಬಹಳ ಹೋರಾಟ ಮಾಡಿದೆ, ನಕ್ಕಿದ್ದೇನೆ ನಾನು ಅತ್ತಿದ್ದೇನೆ. ನನ್ನ ಸ್ನೇಹಿತರು ನಾನು ಹೀರೋ ಆಗುತ್ತೇನೆ ಎಂದಾಗ ನಕ್ಕಿದರು ಆದರೆ ಅಪರಿಚಿತರು ನನ್ನನ್ನು ನಂಬಿದರು.

ಜನರು ಕನಸು ಕಾಣಲು ಅರ್ಹತೆ ಬೇಕು ಅಂತ ಎನ್ನುತ್ತಾರೆ. ಆದರೆ ಕನಸು ಕಾಣುವುದು ಪ್ರತಿಯೊಬ್ಬರ ಅಧಿಕಾರ ಆದರೆ ಆ ಕನಸಿನಲ್ಲಿ ಸ್ಪಷ್ಟತೆ ಹಾಗೂ ಪರಿಕಲ್ಪನೆ ಇರಬೇಕು, ನಿಮ್ಮ ಬೆಂಬಲ ಪ್ರೀತಿ ಸಹಕಾರ ಇಂದು ನನ್ನನ್ನು ಹಿಂದುರುಗಿ ನೋಡದಂತೆ ಮಾಡಿದೆ. ನನ್ನ ಪ್ರೀತಿ ಪಾತ್ರರೇಲ್ಲರಿಗೂ ಧನ್ಯವಾದಗಳು ಎಂದು ಕಿರಣ್ ರವರು ಭಾವುಕರಾಗಿ ನುಡಿದಿದ್ದಾರೆ. ನನಗೆ ಕಾಲೇಜಿನಲ್ಲಿಯೇ ಹೀರೋ ಆಗಬೇಕು ಎಂಬ ಕನಸು ಇತ್ತು. ಆದರೆ ಪ್ರತಿಯೊಂದು ಕನಸನ್ನು ಪೂರೈಸಿಕೊಳ್ಳುವುದು ಅವರವರ ಯೋಗ್ಯತೆ ಯಾಗಿರುತ್ತದೆ. ನಾನು ಇಲ್ಲಿಯವರೆಗೂ ಮಾಡಿರುವ ಪಯಣ ಬಹಳ ಸುಲಭವಾಗಿರಲಿಲ್ಲ, ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.