ಪುನೀತ್ ರವರು ಜೀವ ತುಂಬಿರುವ ಟಾಪ್ 5 ಪಾತ್ರಗಳು ಯಾವ್ಯಾವು ಗೊತ್ತಾ?? ಇದರಲ್ಲಿ ನಿಮ್ಮ ಫೇವರಿಟ್ ಯಾವುದು??

ನಮಸ್ಕಾರ ಸ್ನೇಹಿತರೇ ಪುನೀತ್ ರಾಜಕುಮಾರ್ ರವರ ಕುರಿತು ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ. ಪ್ರೇಮದ ಕಾಣಿಕೆ ಎಂಬ ಚಿತ್ರದಲ್ಲಿ 1976ರಲ್ಲಿ ಆರು ತಿಂಗಳ ಮಗು ಆಗಿದ್ದಾಗ ಸ್ಕ್ರೀನ್ ನ ಮೇಲೆ ಕಾಣಿಸಿಕೊಂಡ ಪುನೀತ್ ರಾಜಕುಮಾರ್ ರವರು ಅಂದಿನಿಂದ ಇಲ್ಲಿಯವರೆಗೂ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.ಬಾಲ ನಟರಾಗಿಯೂ ಹಾಗೂ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆ ಇಲ್ಲ ಎಂಬ ಕಹಿ ಸತ್ಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಪುನೀತ್ ರಾಜಕುಮಾರ್ ಅವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಅವರ ಕೆಲವೊಂದು ಚಿತ್ರಗಳಲ್ಲಿ ನಾವು ನೀವು ಅಷ್ಟೇ ಅಲ್ಲ ನಮ್ಮ ಮುಂದಿನ ಜನಾಂಗದವರು ಕೂಡ ಮರೆಯಲಾಗದಂತಹ ಪಾತ್ರಗಳಿಗೆ ಜೀ’ವ ತುಂಬಿದ್ದಾರೆ. ಅಂತಹ ಚಿತ್ರಗಳನ್ನು ನಾವು ಇಂದು ನಿಮ್ಮ ಮುಂದೆ ತೆಗೆದುಕೊಂಡು ಬರುತ್ತವೆ, ಅಂದರೆ ಪುನೀತ್ ರಾಜಕುಮಾರ್ ಅವರ ನಟನೆ ಮಾಡಿರುವ ಟಾಪ್ 6 ಪಾತ್ರಗಳು ಯಾವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಟಾಪ್ ಐದನೇ ಸ್ಥಾನದಲ್ಲಿ ಪುನೀತ್ ರಾಜಕುಮಾರ್ ರವರ ಮೊಟ್ಟಮೊದಲ ಬಾರಿಗೆ ಸಂಪೂರ್ಣ ನಾಯಕರಾಗಿ ನಟಿಸಿದ ಅಪ್ಪು ಸಿನಿಮಾ ಕಾಣಿಸುತ್ತದೆ. ಈ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿಕೊಟ್ಟ ಪುನೀತ್ ರಾಜಕುಮಾರ್ ಅವರು ಮೊದಲ ಸಿನಿಮಾದಲ್ಲಿಯೇ ಮೋಡಿ ಮಾಡುವುದರಲ್ಲಿ ಯಶಸ್ವಿಯಾಗಿದ್ದರು. ಈ ಸಿನಿಮಾದ ನಾಯಕಿ ರಕ್ಷಿತಾ ರವರಿಗೆ ಕೂಡ ಇದು ಮೊದಲ ಚಿತ್ರವಾಗಿತ್ತು ಆದರೆ ಇಬ್ಬರೂ ಕೂಡ ಅದೆಷ್ಟೋ ಚಿತ್ರಗಳಲ್ಲಿ ನಟನೆ ಮಾಡಿರುವ ಅನುಭವ ವಿದ್ದಂತೆ ನಟನೆ ಮಾಡಿದ್ದರು ಹಾಗೂ ಚಿತ್ರ ಯಶಸ್ವಿಯಾಗಿತ್ತು.

ಇನ್ನು ನಾಲ್ಕನೇ ಸ್ಥಾನದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಜಾಕಿ ಸಿನಿಮಾದ ಪಾತ್ರ ಕಂಡು ಬರುತ್ತದೆ. ಈ ಚಿತ್ರದಲ್ಲಿ ಕೆಲಸ ಇಲ್ಲದೆ ಹಣಕ್ಕಾಗಿ ವಿವಿಧ ರೀತಿಯ ಸರ್ಕಸ್ ಮಾಡುವ ಹುಡುಗನಾಗಿ ಕಾಣಿಸಿಕೊಂಡ ಪುನೀತ್ ರಾಜಕುಮಾರ್ ಅವರು ಚಿತ್ರದ ಕೊನೆಯಲ್ಲಿ ಒಂದು ಉತ್ತಮ ಕಾರ್ಯ ಮಾಡಿ ಹಲವಾರು ಹೆಣ್ಣು ಮಕ್ಕಳನ್ನು ರಕ್ಷಿಸಿದ ಕತೆಯಲ್ಲಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ನಟನೆ, ಸಾಹಿತ್ಯ ಎಲ್ಲರೂ ಕೂಡ ಬಹಳ ಅದ್ಭುತವಾಗಿ ಮೂಡಿ ಬಂದ ಕಾರಣ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿತ್ತು.

ಇನ್ನು ಮೂರನೇ ಸ್ಥಾನದಲ್ಲಿ ಪುನೀತ್ ರಾಜಕುಮಾರ್ ಅವರು ಬಾಲ ನಟನಾಗಿ ನಟಿಸಿರುವ ಬೆಟ್ಟದ ಹೂವು ಚಿತ್ರದ ಪಾತ್ರ ಕಂಡು ಬರುತ್ತದೆ. ಈ ಚಿತ್ರದಲ್ಲಿ ಪುಟ್ಟ ಬಾಲಕನಾಗಿರುವ ನಟನೆ ಮಾಡಿರುವ ಪುನೀತ್ ರಾಜಕುಮಾರ್ ಅವರು ಅಂದಿನ ಕಾಲದಲ್ಲಿಯೇ ಇವರ ನಟನೆಗೆ ಶ್ರೇಷ್ಠ ಬಾಲನಟ ಎಂಬ ಪ್ರಶಸ್ತಿ ಪಡೆದು ಕೊಂಡಿದ್ದರು. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನಿಮಗೆ ಅಗತ್ಯವಿಲ್ಲ ಎನಿಸುತ್ತದೆ ಯಾಕೆಂದರೆ ಈ ಚಿತ್ರಗಳನ್ನು ನೋಡುತ್ತಾ ನೀವೆಲ್ಲರೂ ಬೆಳೆದಿರುತ್ತೀರಾ.

ಇನ್ನು ಎರಡನೇ ಸ್ಥಾನದಲ್ಲಿ ಕೆಲವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಪೃಥ್ವಿ ಚಿತ್ರದಲ್ಲಿನ ಖಡಕ್ ಎಸ್ ಅಧಿಕಾರಿ ಪಾತ್ರ ಸ್ಥಾನ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಒಬ್ಬ ಮಗ ಒಬ್ಬ ಪತ್ನಿ ಹಾಗೂ ಒಬ್ಬ ಸರ್ಕಾರಿ ಕೆಲಸಗಾರ ಅಂದರೆ ಐಎಎಸ್ ಅಧಿಕಾರಿಯ ಮೂರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಂತಹ ಪಾತ್ರದಲ್ಲಿ ನಟನೆ ಮಾಡಿದ್ದ ಪುನೀತ್ ರಾಜಕುಮಾರ್ ಅವರು ನಿಜಕ್ಕೂ ಬಹಳ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಮೊದಲನೇ ಸ್ಥಾನದಲ್ಲಿ ಯಾವ ಚಿತ್ರದ ಪಾತ್ರ ಇದೆ ಎಂದರೇ ಅದು ಮತ್ಯಾವುದು ಅಲ್ಲ ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಜಕುಮಾರ ಚಿತ್ರದ ಪಾತ್ರ. ಬಹಳ ಅದ್ಭುತವಾಗಿ ರಾಜಕುಮಾರ ಚಿತ್ರದಲ್ಲಿ ನಟನೆ ಮಾಡಿರುವ ಪುನೀತ್ ರಾಜಕುಮಾರ್ ರವರು, ಈ ಚಿತ್ರದ ಮೂಲಕ ಒಂದು ಉತ್ತಮ ಸಂದೇಶವನ್ನು ಕೂಡ ನೀಡಿದ್ದರು. ಕೆಲವು ಮಾಹಿತಿಗಳ ಪ್ರಕಾರ ರಾಜಕುಮಾರ ಚಿತ್ರವನ್ನು ನೋಡಿದ ಇನ್ನೂರಕ್ಕೂ ಹೆಚ್ಚು ಜನರು ತಮ್ಮ ತಂದೆ-ತಾಯಿಯನ್ನು ಅನಾಥಾಶ್ರಮ ದಿಂದ ವಾಪಸ್ಸು ತಮ್ಮ ಮನೆಗೆ ಕರೆದುಕೊಂಡು ಹೋದರು ಎಂಬ ಸುದ್ದಿ ಕೂಡ ಕೇಳಿಬಂದಿದೆ. ಅಷ್ಟರ ಮಟ್ಟಿಗೆ ಒಂದು ಚಿತ್ರದಲ್ಲಿನ ನಟನೆಯ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ ಎಂದರೆ ಖಂಡಿತವಾಗಲೂ ಇದು ಮೊದಲನೇ ಸ್ಥಾನ ಪಡೆದುಕೊಳ್ಳಲು ಅರ್ಹವಾಗಿದೆ ಎಂದರ್ಥ

Post Author: Ravi Yadav