ಕೂದಲ ಎಲ್ಲಾ ಸಮಸ್ಯೆಗೆ, ಉದ್ದ ಕಪ್ಪಾದ ಕೂದಲಿಗಾಗಿ ಕೇರಳದ ಸೀಕ್ರೆಟ್ ಥಾಲಿ ಮಾಡುವುದು ಹೇಗೆ ಗೊತ್ತೇ??

ಕೂದಲ ಎಲ್ಲಾ ಸಮಸ್ಯೆಗೆ, ಉದ್ದ ಕಪ್ಪಾದ ಕೂದಲಿಗಾಗಿ ಕೇರಳದ ಸೀಕ್ರೆಟ್ ಥಾಲಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಕೇರಳದಲ್ಲಿರುವ ಹೆಣ್ಣುಮಕ್ಕಳ ಕೂದಲು ಉದ್ದವಾಗಿ, ದಪ್ಪವಾಗಿ, ಕಪ್ಪಾಗಿರುತ್ತದೆ. ಅವರ ಕೂದಲಿನ ಸೀಕ್ರೆಟ್ ಏನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಕೇರಳದ ಹೆಂಗಸರು ತಮ್ಮ ಕೂದಲ ಬೆಳವಣಿಗೆಗೋಸ್ಕರ ವಾರದ 6 ದಿನಗಳು ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚುತ್ತಾರೆ. ಇದರ ಜೊತೆ ಒಂದು ಸೀಕ್ರೆಟ್ ಹರ್ಬಲ್ ಪೌಡರ್ ಅನ್ನು ಉಪಯೋಗಿಸುತ್ತಾರೆ. ಈ ಹರ್ಬಲ್ ಪೌಡರ್ ನನ್ನು ಕೇರಳದ ಥಾಲಿ ಎಂದು ಕರೆಯುತ್ತಾರೆ. ಈ ಪೌಡರ್ ಅನ್ನು ಉಪಯೋಗಿಸುವುದರಿಂದಲೆ, ಅವರ ಕೂದಲು ಕಪ್ಪಾಗಿ, ಉದ್ದವಾಗಿ ದಪ್ಪವಾಗಿರುತ್ತದೆ.

ಕೇರಳದ ಥಾಲಿ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ 2 ಚಮಚದಷ್ಟು ಮೆಂತ್ಯ ಪುಡಿಯನ್ನು ಹಾಕಿಕೊಳ್ಳಿ. ನಂತರ 2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು ಹಾಕಿ. ಕರಿಬೇವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಇನ್ನು 2 ಚಮಚ ದಾಸವಾಳ ಪುಡಿಯನ್ನು ಹಾಕಿ. ದಾಸವಾಳ ಪುಡಿಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಡಿಮೆಯಾಗಿ, ಕೂದಲು ಮೃದುವಾಗಿ ಬೆಳೆಯಲು ಸಹಾಯ ಮಾಡುತ್ತದೆ.

2 ಚಮಚ ಅಗಸೆ ಬೀಜದ ಪುಡಿಯನ್ನು ಹಾಕಿಕೊಳ್ಳಿ. ಅಗಸೆ ಬೀಜದ ಪುಡಿಯನ್ನು ಉಪಯೋಗಿಸುವುದರಿಂದ ಕೂದಲು ಸಂಪೂರ್ಣವಾಗಿ ಉದುರುವುದು ನಿಲ್ಲುತ್ತದೆ. 2 ಚಮಚ ತುಳಸಿ ಎಲೆಯ ಪುಡಿಯನ್ನು ಹಾಕಿ. ಇದನ್ನು ಬಳಸುವುದರಿಂದ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. 2 ಚಮಚ ನಲ್ಲಿಕಾಯಿಯ ಪುಡಿಯನ್ನು ಹಾಕಿ. ಇದು ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. 2 ಚಮಚ ಭೃಂಗರಾಜ ಪುಡಿಯನ್ನು ಹಾಕಿಕೊಳ್ಳಿ. ಈ ಪುಡಿಯನ್ನು ಉಪಯೋಗಿಸುವುದರಿಂದ ಕೂದಲು ಉದ್ದವಾಗಿ ಬೆಳೆಯೋದಕ್ಕೆ ಸಹಾಯ ಮಾಡುತ್ತದೆ ಮತ್ತು ತಲೆಯಲ್ಲಿರುವ ಹೊಟ್ಟನ್ನು ಕಡಿಮೆ ಮಾಡುತ್ತದೆ.

ಕೊನೆಯದಾಗಿ ಎಲ್ಲಾ ಪುಡಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಡಬ್ಬಕ್ಕೆ ಹಾಕಿಕೊಂಡರೆ ಕೇರಳದ ಥಾಲಿ ಪೌಡರ್ ರೆಡಿಯಾಗುತ್ತದೆ. ಈ ಪುಡಿಯನ್ನು 2 ತಿಂಗಳುಗಳ ಕಾಲ ಸ್ಟೋರ್ ಮಾಡಬಹುದು.

ಕೇರಳದ ಥಾಲಿ ಪುಡಿಯನ್ನು ಉಪಯೋಗಿಸುವ ಕ್ರಮ: ಈ ಪುಡಿಯನ್ನು ಉಪಯೋಗಿಸುವ ಮೊದಲು ನಿಮಗೆ ಇಷ್ಟವಾಗುವ ಎಣ್ಣೆಯನ್ನು ತಲೆಗೆ ಹಚ್ಚಿರಬೇಕು. ಇನ್ನು ಅರ್ಧ ಗಂಟೆಯಲ್ಲಿ ತಲೆಗೆ ಸ್ನಾನ ಮಾಡುವ ಮೊದಲು ಈ ಪ್ಯಾಕನ್ನು ರೆಡಿಮಾಡಿಕೊಳ್ಳಿ. ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ 2 ಚಮಚದಷ್ಟು ಮೊಸರನ್ನು ಹಾಕಿಕೊಳ್ಳಿ. ಇದಕ್ಕೆ ಮಾಡಿಕೊಂಡ ಕೇರಳದ ಥಾಲಿ ಪುಡಿಯನ್ನು 2 ಚಮಚದಷ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು 30ರಿಂದ 50 ನಿಮಿಷಗಳ ಕಾಲ ನೆನೆಯಲು ಬಿಡಿ. ಕೊನೆಯದಾಗಿ ನೀವು ಉಪಯೋಗಿಸುವ ಶಾಂಪೂವನ್ನು ಬಳಸಿಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಈ ರೀತಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳೆಯುತ್ತದೆ.