ಬಿಡುಗಡೆಯಾಯಿತು ಟಿಆರ್ಪಿ ಲಿಸ್ಟ್. ಜೊತೆ ಜೊತೆಯಲಿಗೆ ತುಸು ನೆಮ್ಮದಿ, ಕನ್ನಡತಿ ಹವಾ ಮತ್ತಷ್ಟು ಹೆಚ್ಚು.

ನಮಸ್ಕಾರ ಸ್ನೇಹಿತರೇ ಕನ್ನಡ ಧಾರವಾಹಿ ಗಳ ನಡುವಿನ ಪೈಪೋಟಿ ಪ್ರತಿ ವಾರವೂ ಹೆಚ್ಚಾಗುತ್ತಿದೆ, ದಿನೇ ದಿನೇ ಧಾರವಾಹಿಗಳು ಹೊಸ ಪ್ರಯತ್ನಗಳ ಮೂಲಕ ಅದ್ಭುತವಾಗಿ ಮೂಡಿ ಬರುತ್ತಿದ್ದು ಅದರಂತೆ ಪ್ರೇಕ್ಷಕರು ಕೂಡ ಕನ್ನಡ ಧಾರವಾಹಿಗಳನ್ನು ಹೆಚ್ಚಾಗಿ ನೋಡಲು ಆರಂಭಿಸಿದ್ದಾರೆ. ಹೊಸ ಧಾರವಾಹಿಗಳ ನಡುವೆ ಹಳೆಯ ದಾರವಾಹಿಗಳು ಟಿಆರ್ಪಿ ರೇಸಿನಲ್ಲಿ ಒಂದರ ಮೇಲೆ ಒಂದರಂತೆ ಹೆಚ್ಚು ಟಿಆರ್ಪಿ ಗಳಿಸುತ್ತಿವೆ.

ಕಳೆದ ವಾರದ ಟಿಆರ್ಪಿ ಲಿಸ್ಟ್ ಇದೀಗ ಬಿಡುಗಡೆಯಾಗಿದ್ದು ಧಾರವಾಹಿಗಳು ಈ ಬಾರಿಯೂ ಕೂಡಾ ಸಾಕಷ್ಟು ಪೈಪೋಟಿಯ ನಂತರ ತಮ್ಮ ಸ್ಥಾನವನ್ನು ಮೇಲೆ ಏರಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಕಳೆದ ಕೆಲವು ವಾರಗಳ ಟ್ರೆಂಡಿನಂತೆ ಇದೀಗ ಬಿಡುಗಡೆಯಾಗಿರುವ ಕಳೆದ ವಾರದ ಟಿಆರ್ಪಿ ಲಿಸ್ಟಿನಲ್ಲಿ ಸತ್ಯ ಧಾರವಾಹಿಯ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಗಟ್ಟಿಮೇಳ ಧಾರವಾಹಿ ಕೂಡ ಎರಡನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಇನ್ನು ಹಲವಾರು ತಿಂಗಳುಗಳಿಂದ ಟಾಪ್ 3 ನೇ ಧಾರವಾಹಿಯಾಗಿ ಕಾಣಿಸಿಕೊಳ್ಳುತ್ತಿದ್ದ ಜೊತೆ ಜೊತೆಯಲ್ಲಿ ಧಾರವಾಹಿ ಕಳೆದೆರಡು ವಾರಗಳ ಹಿಂದೆ ಟಾಪ್ ಐದರ ಸಾಲಿನಲ್ಲಿ ಕೂಡ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು.

ಆದರೆ ಇದೀಗ ಜೊತೆ ಜೊತೆಯಲಿ ಧಾರವಾಹಿ ಮತ್ತೊಮ್ಮೆ ಟಾಪ್ ಐದರ ಸಾಲಿನಲ್ಲಿ ಕಾಣಿಸಿಕೊಂಡಿದ್ದು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ನಾಗಿಣಿ 2 ಧಾರವಾಹಿ ಪಡೆದುಕೊಂಡಿದ್ದು ಐದನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಪಾರು ಸ್ಥಾನ ಪಡೆದುಕೊಂಡಿದೆ. ಇನ್ನೂ ಬಹಳ ನಿರೀಕ್ಷೆಗಳಿಂದ ಟಿಆರ್ಪಿ ಲಿಸ್ಟ್ ನಲ್ಲಿ ಉತ್ತಮ ಸಾಧನೆ ಗಳಿಸುತ್ತಿರುವ ಕನ್ನಡತಿ ಧಾರಾವಾಹಿ 9 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 6ನೇ ಸ್ಥಾನದಲ್ಲಿ ಮಂಗಳಗೌರಿ ಮದುವೆ ಏಳನೇ ಸ್ಥಾನದಲ್ಲಿ ನಮ್ಮನೆ ಯುವರಾಣಿ ಎಂಟನೇ ಸ್ಥಾನದಲ್ಲಿ ಗೀತಾ ಧಾರವಾಹಿ ಸ್ಥಾನ ಪಡೆದುಕೊಂಡಿವೆ. ಇನ್ನು ಪ್ರಮುಖ ಧಾರವಾಹಿಗಳು ಎನಿಸಿರುವ ಗಿಣಿರಾಮ 12 ಮಹಾನಾಯಕ 14ನೇ ಸ್ಥಾನವನ್ನು ಪಡೆದುಕೊಂಡಿದೆ.

Post Author: Ravi Yadav