ಕೆಜಿಎಫ್-2 ದಾಖಲೆ ಮಟ್ಟದಲ್ಲಿ ಯಶಸ್ಸು ಗೊಳ್ಳಲು ಕಾರಣ ಈ ಮಾಸ್ಟರ್ ಪ್ಲಾನ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಚಿತ್ರದ ಟೀಸರ್ ಬಿಡುಗಡೆಗೂ ಮುನ್ನವೇ ಲೀಕ್ ಆಗಿದ್ದರೂ ಕೂಡ ಬಿಡುಗಡೆಯ ನಂತರ ಉತ್ತಮ ಹವಾ ಸೃಷ್ಟಿಸಿದೆ. ಹಲವಾರು ತಿಂಗಳುಗಳಿಂದ ಟೀಸರ್ ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಟೀಸರ್ ಒಮ್ಮೆಲೆ ರಿಲೀಸ್ ಆದ ತಕ್ಷಣ ಭರ್ಜರಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದೀಗ ಪಾನ್ ಇಂಡಿಯಾ ಸಿನಿಮಾ ಆಗಿ ಕೆಜಿಎಫ್ 2 ಚಿತ್ರ ಬಿಡುಗಡೆಯಾಗುತ್ತಿದ್ದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶದ ಮೂಲೆಮೂಲೆಯ ಸಿನಿಮಾ ಅಭಿಮಾನಿಗಳು ಕೂಡ ಕೆಜಿಎಫ್ ಟು ಚಿತ್ರದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಇದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಈ ಟೀಸರ್ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದು ಹಾಲಿವುಡ್, ಬಾಲಿವುಡ್ ಸೇರಿದಂತೆ ಇತರ ಎಲ್ಲ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದೆ. ಯಶ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿರುವ ಟೀಸರ್ ಭಾರತೀಯ ಚಿತ್ರಗಳಷ್ಟೇ ಅಲ್ಲದೆ ಹಾಲಿವುಡ್ ಚಿತ್ರಗಳ ಟೀಸರ್ ಬಿಡುಗಡೆ ಸಮಯದಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿರುವ ಹಿಂದಿರ ಕಾರಣವಾದರೂ ಏನು ಎಂಬುದನ್ನು ನಾವು ನೋಡುವುದಾದರೇ ಇದರ ಹಿಂದೆ ಈ ಬಾರಿ ಕೆಜಿಎಫ್ ಟು ಚಿತ್ರ ತಂಡ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಟು ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಭಾರತೀಯ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೊಂಡಾಗ ಒಂದು ಟೀಸರ್ ಬಿಡುಗಡೆಯಾಗುತ್ತದೆ ಎಂದರೆ ಬಿಡುಗಡೆ ಮಾಡುವ ಎಲ್ಲ ಭಾಷೆಗಳಲ್ಲಿಯೂ ವಿವಿಧ ಟೀಸರ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಎಲ್ಲಾ ಭಾಷೆಯ ಅಭಿಮಾನಿಗಳನ್ನು ತನ್ನತ್ತ ಸೆಳೆಯುವ ತಂತ್ರ ರೂಪಿಸಲಾಗುತ್ತದೆ. ಆಗಲೇ ಕೆಜಿಎಫ್ ಮೊದಲ ಭಾಗ ಭರ್ಜರಿಯಾಗಿ ಯಶಸ್ಸು ಗೊಂಡಿರುವ ಕಾರಣ ಕೆಜಿಎಫ್ ಟು ಚಿತ್ರ ತಂಡ ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆಯುವ ಕೆಲಸ ಮಾಡಬೇಕಾಗಿಲ್ಲ ಎಂಬುದನ್ನು ಅರಿತುಕೊಂಡು ಎಲ್ಲಾ ಭಾಷೆಗಳಿಗೂ ಸೇರಿ ಕೇವಲ ಒಂದು ಟೀಸರ್ ರಿಲೀಸ್ ಮಾಡಿದೆ. ಕಳೆದ ಬಾರಿ ಐದು ಪ್ರತ್ಯೇಕ ಟೀಸರ್ ಬಿಡುಗಡೆ ಮಾಡಲಾಗಿತ್ತು, ಇದರಿಂದ ಸಂಖ್ಯೆಗಳು ವಿಂಗಡಣೆಯಾಗಿದ್ದವು. ಆದರೆ ಈ ಬಾರಿ ಕೇವಲ ಒಂದು ಟೀಸರ್ ಬಿಡುಗಡೆ ಮಾಡುವ ಮೂಲಕ ಸಂಖ್ಯೆಗಳಲ್ಲಿ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದೆ.

Facebook Comments

Post Author: Ravi Yadav