ಈ ಚಿಕ್ಕ ಕ್ರಮಗಳನ್ನು ಫಾಲೋ ಮಾಡಿ,ಬ್ಯಾಟರಿ ಕ್ಷಮತೆಯೂ ಸೂಪರ್ ಹಾಗೂ ಬ್ಯಾಟರಿ ತೊಂದರೆ ಬರುವುದೇ ಇಲ್ಲ.

ನಮಸ್ಕಾರ ಸ್ನೇಹಿತರೇ ಈಗಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಸರ್ವೇ ಸಾಮಾನ್ಯ. ಹಗ್ಗದ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದ ಮೇಲಂತೂ ಸ್ಮಾರ್ಟ್ ಫೋನ್ ಗಳನ್ನು ಬಹುತೇಕರು ಖರೀದಿ ಮಾಡಿದ್ದಾರೆ. ಹೀಗೆ ಎಲ್ಲರೂ ಸ್ಮಾರ್ಟ್ ಫೋನ್ ಖರೀದಿ ಮಾಡಿದ್ದರೂ ಕೂಡ ಬಹುತೇಕರಿಗೆ ಅದೆಷ್ಟೋ ವಿಷಯಗಳು ಅವುಗಳ ಕುರಿತು ತಿಳಿದಿಲ್ಲ. ಅದರಲ್ಲಿಯೂ ಪ್ರಮುಖವಾಗಿ ಬ್ಯಾಟರಿ ಕುರಿತು ಹಲವಾರು ಪ್ರಶ್ನೆಗಳು ಇವೆ. ಬ್ಯಾಟರಿ ಯಾಕೆ ತೊಂದರೆ ಕೊಡುತ್ತದೆ?? ದಿನೇ ದಿನೇ ಯಾಕೆ ಕ್ಷಮತೆ ಕಡಿಯಾಗುತ್ತದೆ ಎಂಬ ಪ್ರಶ್ನೆಗಳು ಸರ್ವೇ ಸಾಮಾನ್ಯ.

ಆದರೆ ಕೆಲವೇ ಕೆಲವು ವರ್ಷಗಳ ಹಿಂದೆಯೇ ನೋಕಿಯಾ ಸೇರಿದಂತೆ ಕೆಲವೇ ಕೆಲವು ಕಂಪನಿಗಳ ಕೀಪ್ಯಾಡ್ ಮೊಬೈಲ್ ಗಳು ಕಾಣಿಸುತ್ತಿದ್ದವು, ಅವುಗಳಲ್ಲಿ ಹೆಚ್ಚಿನ ಬ್ಯಾಟರಿ ತೊಂದರೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚಿನ ಸ್ಮಾರ್ಟ್ಫೋನ್ ಇವರಲ್ಲಿ ಬ್ಯಾಟರಿ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಹೀಗೆ ಯಾಕೆ ಬ್ಯಾಟರಿ ಸಾಮರ್ಥ್ಯ ಕುಗ್ಗುತ್ತದೆ ಹಾಗೂ ದಿನೇದಿನೇ ಬ್ಯಾಟರಿ ತೊಂದರೆ ನೀಡಲು ಹೆಚ್ಚಾಗುತ್ತದೆ ಎಂಬುದನ್ನು ಗಮನಿಸುವುದಾದರೆ ನಮಗೆ ಹಲವಾರು ಕ್ರಮಗಳು ಕಾಣಿಸುತ್ತವೆ.

ನೀವು ಈ ಚಿಕ್ಕ-ಚಿಕ್ಕ ಕ್ರಮಗಳನ್ನು ಫಾಲೋ ಮಾಡಿದರೇ ನಿಮ್ಮ ಜೀವನದಲ್ಲಿ ನಿಮ್ಮ ಫೋನಿನಲ್ಲಿ ಬ್ಯಾಟರಿಯ ಕ್ಷಮತೆ ಕಡಿಮೆಯಾಗುವುದಿಲ್ಲ ಹಾಗೂ ಬ್ಯಾಟರಿ ಕಡೆಯಿಂದ ಯಾವುದೇ ರೀತಿಯ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಬನ್ನಿ ಈ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ. ಮೊದಲನೆಯದಾಗಿ ಸ್ನೇಹಿತರೇ ಬಹುತೇಕ ಜನರು ಮಾಡುವ ತಪ್ಪು ಎಚ್ಚರಿಕೆ ಇರುವ ಸಂದರ್ಭದಲ್ಲಿ ಚಾರ್ಜ್ ಮಾಡಲು ಸಮಯವಿಲ್ಲದ ಕಾರಣ ರಾತ್ರಿ ಚಾರ್ಜಿಗೆ ಹಾಕಿ ಮಲಗುತ್ತಾರೆ. ತದನಂತರ ಬೆಳಗೆದ್ದು ಚಾರ್ಜ್ ನಿಂದ ತೆಗೆಯುತ್ತಾರೆ ಹೀಗೆ ದಯವಿಟ್ಟು ಮಾಡಬೇಡಿ ಹೀಗೆ ಮಾಡಿದರೆ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.

ಇನ್ನು ಎರಡನೆಯದಾಗಿ ನೀವು ಫೋನನ್ನು ಬಳಸುತ್ತಿರುವ ಸಂದರ್ಭದಲ್ಲಿ ಬ್ಯಾಟರಿ ಸಂಪೂರ್ಣ 0 ಆಗುವವರೆಗೂ ಬಳಸಬೇಡಿ ಶೇಕಡಾ 20ರಿಂದ 30ರಷ್ಟು ಪರ್ಸೆಂಟ್ ಬಂದಾಗ ಚಾರ್ಜಿಗೆ ಹಾಕುವುದು ಉತ್ತಮ. ಇನ್ನು ಮೂರನೆಯದಾಗಿ ನೀವು ಹೆಚ್ಚಿನ ಬಿಸಿ ಇರುವ ಅಥವಾ ಹೆಚ್ಚಿನ ತಂಪು ಇರುವ ಪ್ರದೇಶದಲ್ಲಿ ಚಾರ್ಜಿಂಗ್ ಹಾಕುವುದು ಒಳ್ಳೆಯದಲ್ಲ. ಅಡುಗೆ ಮನೆಯಲ್ಲಿ ಗ್ಯಾಸ್ ಪಕ್ಕದಲ್ಲಿ ಹಾಕುವುದು ಅಥವಾ ಇನ್ಯಾವುದೇ ರೀತಿಯ ಕೂಲರ್ ಗಳ ಮೇಲೆ ಮೊಬೈಲ್ ಬಿಟ್ಟು ಚಾರ್ಜ್ ಹಾಕುವುದು ಕೆಲಸ ಮಾಡಬೇಡಿ.

ಇನ್ನು ನಾಲ್ಕನೆಯದಾಗಿ ಚಾರ್ಜಿಂಗ್ ಹಾಕಿರುವಾಗ ನೀವು ಯಾವುದೇ ಕಾರಣಕ್ಕೂ ಇಂಟರ್ನೆಟ್ ಹಾಗೂ ಫೋನಿನ ಕರೆಗಳನ್ನು ದಯವಿಟ್ಟು ಮಾಡಬೇಡಿ, ಚಾರ್ಜ್ ಹಾಕಿ ಒಂದಷ್ಟು ನಿಮಿಷಗಳ ಕಾಲ ಪಕ್ಕಕ್ಕಿಡಿ, ಇದು ನಿಮಗೆ ಒಳ್ಳೆಯದು ಹಾಗೂ ನಿಮ್ಮ ಫೋನಿಗೂ ಕೂಡ ಒಳ್ಳೆಯದು. ಇನ್ನು ಕೊನೆಯದಾಗಿ ನೀವು ಒಮ್ಮೆಲೆ ಸಂಪೂರ್ಣ ಚಾರ್ಜ್ ಮಾಡಬೇಡಿ, ಅಂದರೆ ನಿಮ್ಮ ಮೊಬೈಲ್ ಬ್ಯಾಟರಿ 0 ಯಾಗಿದ್ದಾಗ ನೇರವಾಗಿ 100 ಪರ್ಸೆಂಟ್ ಹಾಗುವವರೆಗೂ ಚಾರ್ಜ್ ಮಾಡಲೇಬೇಡಿ.

ನಿಮ್ಮ ಬ್ಯಾಟರಿ ಚಾರ್ಜ್ ಶೇಕಡ ಹತ್ತಕ್ಕಿಂತ ಕಡಿಮೆ ಇದ್ದರೇ ನೀವು ಚಾರ್ಜ್ ಹಾಕಿದಾಗ 60ರಿಂದ 70 ಪರ್ಸೆಂಟ್ ನಡುವೆ ಚಾರ್ಜ್ ಹಾಗಿರುವಾಗ ದಯವಿಟ್ಟು ಇಲ್ಲಿಗೆ ನಿಲ್ಲಿಸಿಬಿಡಿ. ತದನಂತರ ಕೆಲವು ಗಂಟೆಗಳ ನಂತರ ನೀವು ಫುಲ್ ಬ್ಯಾಟರಿ ಮಾಡಿಕೊಳ್ಳಬಹುದು. ಈ ಚಿಕ್ಕ-ಚಿಕ್ಕ ಕ್ರಮಗಳನ್ನು ಫಾಲೋ ಮಾಡುವ ಮೂಲಕ ನಿಮ್ಮ ಮೊಬೈಲ್ ಬ್ಯಾಟರಿ ಕ್ಷಮತೆ ಹಾಗೂ ಯಾವುದೇ ತೊಂದರೆ ಇಲ್ಲದೆ ಮೊಬೈಲ್ ಬಳಸಬಹುದು.

Post Author: Ravi Yadav