ಜ್ಯೋತಿಷ್ಯ ಶಾಸ್ತ್ರ: ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ದಾನ ಮಾಡಬೇಡಿ ! ಕಷ್ಟ ಕಟ್ಟಿಟ್ಟಬುತ್ತಿ.

ಜ್ಯೋತಿಷ್ಯ ಶಾಸ್ತ್ರ: ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ದಾನ ಮಾಡಬೇಡಿ ! ಕಷ್ಟ ಕಟ್ಟಿಟ್ಟಬುತ್ತಿ.

ನಮಸ್ಕಾರ ಸ್ನೇಹಿತರೇ, ಹಿಂದೂ ಧರ್ಮದ ಪುರಾಣಗಳಲ್ಲಿ ದಾನದ ಮಹತ್ವವನ್ನು ತಿಳಿಸಿ ಹೇಳಲಾಗಿದೆ. ದಾನ ಮಾಡುವುದರಿಂದ ಭಾರಿ ಪ್ರಯೋಜನಗಳಿವೆ ಎಂದು ಕೂಡ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ದಾನದ ಮಹತ್ವವನ್ನು ಧಾರ್ಮಿಕ ಪುರಾಣಗಳಲ್ಲಿಯೂ ಕೂಡ ನೀವು ಕಾಣಬಹುದು. ಆದರೆ ಕೆಲವೊಂದು ವಸ್ತುಗಳನ್ನು ನೀವು ದಾನ ಮಾಡಬಾರದು, ಒಂದು ವೇಳೆ ಮಾಡಿದ್ದಲ್ಲಿ ಕಷ್ಟದ ಸಮಯಗಳು ಹುಡುಕಿಕೊಂಡು ಬರಲಿವೆ ಎಂದು ಪುರಾಣಗಳು ಹೇಳುತ್ತವೆ. ಇಂದು ನಾವು ಆ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ.

ಕುಂಕುಮ ಅಥವಾ ಸಿಂಧೂರ: ಸ್ನೇಹಿತರೇ, ಧರ್ಮಗ್ರಂಥಗಳ ಪ್ರಕಾರ ಯಾವುದೇ ವಿವಾಹಿತ ಮಹಿಳೆಯು ಯಾವುದೇ ಕಾರಣಕ್ಕೂ ಕುಂಕುಮ ಅಥವಾ ಸಿಂಧೂರ ವನ್ನು ದಾನ ಮಾಡಬಾರದು. ಒಂದು ವೇಳೆ ಮಾಡಿದ್ದೆ ಆದಲ್ಲಿ ಅವರಿಗೆ ಪತಿಯ ಮೇಲೆ ಪ್ರೀತಿ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಪೊರಕೆ ದಾನ: ಸ್ನೇಹಿತರೇ, ಈ ಮಾತನ್ನು ಬಹುಶಃ ನಿಮ್ಮ ಹಿರಿಯರು ನಿಮಗೆ ಹೇಳಿರಬಹುದು, ಪೊರಕೆಯನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ಸಿ’ಟ್ಟಾಗುತ್ತಾರೆ. ಹಾಗೂ ದಾನ ಮಾಡಿದ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ.

ಕೆ’ಟ್ಟ ಅಥವಾ ಬಳಸಿದ ಎಣ್ಣೆ: ಸ್ನೇಹಿತರೇ, ನೀವು ಎಂದಿಗೂ ಕೆಟ್ಟ ಅಥವಾ ಬಳಸಿದ ಎಣ್ಣೆಯನ್ನು ದಾನ ಮಾಡಬಾರದು ಎಂದು ನಂಬಲಾಗಿದೆ. ಯಾಕೆಂದರೆ ಜ್ಯೋತಿಷ್ಯದ ಪ್ರಕಾರ ಎಣ್ಣೆಯನ್ನು ದಾನ ಮಾಡಿದರೇ ಶನಿ ದೇವನು ಸಂತಸಗೊಳ್ಳುತ್ತಾನೆ ಆದರೆ ಈ ರೀತಿಯ ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೇವನು ಕೋಪಗೊಳ್ಳುತ್ತಾನೆ ಎಂದು ತಿಳಿಸಲಾಗಿದೆ.

ಹರಿದ ಪುಸ್ತಕ: ಸ್ನೇಹಿತರೇ ಪುಸ್ತಕಗಳನ್ನು ದಾನ ಮಾಡುವುದನ್ನು ಬಹಳ ಶ್ರೇಷ್ಠ ಎಂದು ನಮ್ಮ ಪುರಾಣಗಳು ತಿಳಿಸುತ್ತವೆ. ಯಾಕೆಂದರೆ ಪುಸ್ತಕಗಳು ಜ್ಞಾನದ ಪ್ರತೀಕ. ಆದರೆ ಒಂದು ವೇಳೆ ನೀವು ಹರಿದ ಪುಸ್ತಕಗಳನ್ನು ದಾನ ಮಾಡಿದರೇ ಅದರಿಂದ ಜ್ಞಾನ ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ.

ಉಕ್ಕಿನ ಪಾತ್ರೆಗಳ ದಾನ – ಇನ್ನು ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದರಿಂದ ಶಾಂತಿ ಮತ್ತು ಮನೆಯ ಸಂತೋಷ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ಉಕ್ಕಿನ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು ಎಂದು ಹೇಳಲಾಗುತ್ತದೆ.