ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದೆಯೇ? ಈ ಕ್ರಮಗಳನ್ನು ಅನುಸರಿಸುವ ಮೂಲಕ ಎಲ್ಲಾ ಸಮಸ್ಯೆ ನಿವಾರಿಸಿಕೊಳ್ಳಿ.

ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದೆಯೇ? ಈ ಕ್ರಮಗಳನ್ನು ಅನುಸರಿಸುವ ಮೂಲಕ ಎಲ್ಲಾ ಸಮಸ್ಯೆ ನಿವಾರಿಸಿಕೊಳ್ಳಿ.

ನಮಸ್ಕಾರ ಸ್ನೇಹಿತರೇ, ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿ ಹಣದ ಸಮಸ್ಯೆಗಳಿಗೆ ಕಾರಣವೇ ವಾಸ್ತು, ಆದರೆ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ನೀವು ಕೆಲವು ಕ್ರಮಗಳನ್ನು ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿರುವ ವಾಸ್ತು ದೋ’ಷಗಳನ್ನು ತೆಗೆದು ಹಾಕಬಹುದು ಅಷ್ಟೇ ಅಲ್ಲಾ ನಿಮ್ಮ ಸಂಪತ್ತನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ವಾಸ್ತು ಸಹಕಾರಿಯಾಗುತ್ತದೆ.

ಸ್ನೇಹಿತರೇ ಮೊದಲನೆಯದಾಗಿ ನೀವು ಮಲಗುವ ಕೋಣೆಯ ಕಿಟಕಿಗಳಲ್ಲಿ ಹರಳುಗಳನ್ನು ಹಾಕಿ, ನೆನಪಿರಲಿ ಇವುಗಳು ಬೆಳಕಿಗೆ ತಾಕುವಂತೆ ಇರಬೇಕು, ಹೀಗೆ ಬೆಳಕು ಮೊದಲು ಇವುಗಳಿಗೆ ತಾಕಿ ನಿಮ್ಮ ಕೊಠಡಿ ಪ್ರವೇಶಿಸುವ ಕಾರಣ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಮತ್ತು ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ. ಹೀಗೆ ನೀವು ಸದೃಢವಾಗಿದ್ದರೆ ನಿಮ್ಮ ಶಕ್ತಿಯನ್ನು ಆರ್ಥಿಕತೆಯ ದಿಕ್ಕಿನಲ್ಲಿ ಬಳಸಲು ನಿಮಗೆ ಸಾಧ್ಯವಾಗುತ್ತದೆ, ಇದರಿಂದ ನಿಮಗೆ ಆಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಇನ್ನು ನೀವು ಕನ್ನಡಿಯನ್ನು ಹೇಗೆ ಇಡಬೇಕು ಎಂದರೇ ನಿಮ್ಮ ಕನ್ನಡಿಯ ಪ್ರತಿಬಿಂಬ ನೀವು ಹಣವಿಡುವ ಸ್ಥಳದ ಮೇಲೆ ಬೀರಬೇಕು. ಇದರಿಂದ ನಿಮ್ಮ ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಕ್ರಮೇಣ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

ಇನ್ನು ಎರಡನೆಯದಾಗಿ, ಸ್ನೇಹಿತರೇ ನೀವು ಕೇಳಿರಬಹುದು ಪಕ್ಷಿಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ನಮ್ಮ ಹಿರಿಯರು ಹೇಳಿರುವ ಮಾತುಗಳನ್ನು. ಅದೇ ಕಾರಣಕ್ಕಾಗಿ ನೀವು ನೀರು ಮತ್ತು ಧಾನ್ಯಗಳನ್ನು ಮನೆಯ ಮೇಲೆ ಇಡಿ, ಅಥವಾ ನಿಮ್ಮ ಕಾಂಪೌಂಡ್ ಮೇಲೆ ಇಟ್ಟರು ಸರಿ. ಇದರಿಂದ ಆ ಜಾಗದಲ್ಲಿ ಪಕ್ಷಿಗಳು ಸೇರುತ್ತವೆ. ಇದು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ನಿಮ್ಮ ಹಣಕ್ಕೆ ಸಂಬಂಧಿಸಿದ ಎಲ್ಲಾ ಅಡೆತಡೆಗಳು ಮತ್ತು ಸಮಸ್ಯೆಗಳನ್ನು ನಿವಾರಣೆಯಾಗುತ್ತದೆ.

ಇನ್ನು ಮೂರನೆಯದಾಗಿ ಒಂದು ವೇಳೆ ನಿಮಗೆ ಬರಬೇಕಾದ ಆದಾಯದಲ್ಲಿ ಪದೇ ಪದೇ ಅಡಚಣೆ ಉಂಟಾಗುತ್ತಿದ್ದರೆ ಅಥವಾ ಎಷ್ಟೇ ಕಷ್ಟ ಪಟ್ಟರೂ ಹಣ ಗಳಿಸಲು ಸಾಧ್ಯವಾಗದೆ ಇದ್ದಲ್ಲಿ, ನೀವು ಮಲಗುವ ಕೊನೆಯಲ್ಲಿ ಎಡ ಮೂಲೆಯಲ್ಲಿ ಭಾರವಾದ ವಸ್ತು ಅಥವಾ ಇನ್ಯಾವುದೇ ಘನ ವಸ್ತುಗಳನ್ನು ಇರಿಸಿ. ಇನ್ನು ಕೊನೆಯದಾಗಿ ನಿಮ್ಮ ಮನೆಯಲ್ಲಿ ಗೋಲ್ಡ್ ಫಿಷ್ ಮತ್ತು ಬ್ಲ್ಯಾಕ್ ಫಿಶ್ ಅನ್ನು ಸಾಕಿರಿ. ಇದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಹೊರಹಾಕಲಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಇದೆಲ್ಲದರ ನಡುವೆಯೂ ಪ್ರಮಿಕವಾಗಿ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಸದಾ ಸ್ವಚ್ಛವಾಗಿಡಿ ಮತ್ತು ಅದರ ಸುತ್ತಲಿನ ಗೋಡೆಗಳ ಮೇಲೆ ಚಿತ್ರಿಸಿದ ಬಣ್ಣಗಳನ್ನು ಇರಿಸಿ.