ಕನಸ್ಸಿನಲ್ಲಿ ಮಹಾ ಶಿವನಿಗೆ ಸಂಬಂಧಿಸಿದ ವಿಷಯಗಳು ಕಾಣಿಸಿಕೊಂಡರೇ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ ! ಇದರ ಅರ್ಥವೇನು ಗೊತ್ತೇ?

ಕನಸ್ಸಿನಲ್ಲಿ ಮಹಾ ಶಿವನಿಗೆ ಸಂಬಂಧಿಸಿದ ವಿಷಯಗಳು ಕಾಣಿಸಿಕೊಂಡರೇ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ ! ಇದರ ಅರ್ಥವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಕನಸುಗಳು ಎಲ್ಲರಿಗೂ ಬರುತ್ತವೆ, ಆದರೆ ಹಲವಾರು ಜನರು ಕನಸುಗಳಲ್ಲಿ ಏನನ್ನು ನೋಡಿದ್ದೇವೆ ಎಂಬುದನ್ನು ಮರೆತು ಬಿಡುತ್ತಾರೆ. ಕೆಲವರು ಮಾತ್ರ ಕನಸನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಪುರಾಣಗಳ ಕಾಲದಿಂದಲೂ ಕನಸುಗಳು ನಮ್ಮ ಜೀವನದ ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಬಹುತೇಕ ಕನಸುಗಳು ಶುಭವನ್ನು ಸೂಚಿಸಿದರೆ ಕೆಲವು ಕನಸುಗಳು ಅಶುಭವನ್ನು ಸೂಚಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸುಗಳಿಗೂ ತಮ್ಮದೇ ಆದ ಅರ್ಥವಿರುತ್ತದೆ. ಇನ್ನು ಅದೇ ರೀತಿ ಕನಸುಗಳಲ್ಲಿ ದೇವರಿಗೆ ಸಂಬಂಧಿಸಿದ ವಿಷಯಗಳು ಕಾಣುವುದರ ಹಿಂದೆಯೂ ಕೂಡ ಒಂದೊಂದು ಅರ್ಥವಿರುತ್ತದೆ, ಇಂದು ನಾವು ನಿಮ್ಮ ಕನಸಿನಲ್ಲಿ ಮಹಾ ಶಿವನಿಗೆ ಸಂಬಂಧಿಸಿದ ವಿಷಯಗಳನ್ನು ನೀವು ಕಂಡರೇ ಯಾವ ರೀತಿಯ ಪ್ರಭಾವವನ್ನು ನಿಮ್ಮ ಜೀವನದಲ್ಲಿ ಬೀರುತ್ತದೆ ಎಂಬುದರ ಕುರಿತು ತಿಳಿಸಿಕೊಡುತ್ತೇವೆ.

ಸ್ನೇಹಿತರೇ ಮೊದಲನೆಯದಾಗಿ ನಿಮ್ಮ ಕನಸಿನಲ್ಲಿ ಶಿವಲಿಂಗವನ್ನು ನೋಡಿದರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಅರ್ಥ ಏನೆಂದರೆ ನೀವು ನಿಮ್ಮ ಜೀವನದಲ್ಲಿ ದೀರ್ಘಕಾಲದಿಂದಲೂ ಬಳಲುತ್ತಿರುವ ತೊಂದರೆಗಳಿಂದ ಮುಕ್ತಿ ಪಡೆಯುವ ಸಮಯ ಹತ್ತಿರ ಬಂದಿದೆ ಎಂದರ್ಥ, ಒಂದು ವೇಳೆ ನಿಮ್ಮ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡರೇ ಮರು ದಿನ ಶಿವಲಿಂಗಕ್ಕೆ ಹಾಲು ಅರ್ಪಿಸುವುದರಿಂದ ಮತ್ತಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇನ್ನು ಎರಡನೆಯದಾಗಿ ಒಂದು ವೇಳೆ ನೀವು ಮಹಾ ಶಿವ ಅಥವಾ ಮಹಾ ಶಿವನ ನೃತ್ಯವನ್ನು ನಿಮ್ಮ ಕನಸಿನಲ್ಲಿ ಕಂಡರೇ ಇದು ಕೂಡ ಬಹಳ ಶುಭದ ಸಂಕೇತ ಎಂದು ನಂಬಲಾಗುತ್ತದೆ. ಹೀಗೆ ಶಿವನು ನಿಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವುದರಿಂದ ನಿಮ್ಮ ಸಂಪತ್ತು ಗಣಿನೀಯ ಪ್ರಮಾಣದಲ್ಲಿ ಹೆಚ್ಚಲಿದೆ, ಆದರೆ ನೀವು ಅದಕ್ಕಾಗಿ ಕೊಂಚ ಕೆಲಸ ಮಾಡಬೇಕು ಎಂದು ಈ ಕನಸು ಸೂಚಿಸುತ್ತದೆ. ಇನ್ನು ಒಂದು ವೇಳೆ ನೀವು ಕನಸಿನಲ್ಲಿ ಶಿವನ ದೇವಾಲಯವನ್ನು ನೋಡಿದರೇ ನಿಮ್ಮ ಜೀವನದಲ್ಲಿ ಬಹು ಕಾಲದಿಂದಲೂ ಕಾಡುತ್ತಿರುವ ಅನಾರೋಗ್ಯವು ಕಡಿಮೆಯಾಗುತ್ತದೆ ಎಂಬ ನಂಬಿಕೆ ಜೋತಿಷ್ಯ ಶಾಸ್ತ್ರದಲ್ಲಿ ಇದೆ. ಇನ್ನು ಕೊನೆಯದಾಗಿ ನೀವು ಶಿವನ ಹಾವನ್ನು ನಿಮ್ಮ ಕನಸಿನಲ್ಲಿ ಕಂಡರೆ ನಿಮಗೆ ಅತಿ ವೇಗವಾಗಿ ಹಣ ಬರಲಿದೆ ಎಂದು ಅರ್ಥ.