ದೇವಸ್ಥಾನದಲ್ಲಿ ಗಂಟೆ ಬಳಸುವ ಹಿಂದಿರುವ ಧಾರ್ಮಿಕ ಕಾರಣಗಳ ಜೊತೆಗೆ ವೈಜ್ಞಾನಿಕ ಕಾರಣಗಳನ್ನು ತಿಳಿದರೆ ಖಂಡಿತ ಅಚ್ಚರಿಗೊಳ್ಳುವಿರಿ.

ದೇವಸ್ಥಾನದಲ್ಲಿ ಗಂಟೆ ಬಳಸುವ ಹಿಂದಿರುವ ಧಾರ್ಮಿಕ ಕಾರಣಗಳ ಜೊತೆಗೆ ವೈಜ್ಞಾನಿಕ ಕಾರಣಗಳನ್ನು ತಿಳಿದರೆ ಖಂಡಿತ ಅಚ್ಚರಿಗೊಳ್ಳುವಿರಿ.

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಆಚರಣೆಗಳಲ್ಲಿ ಹಾಗೂ ನಮ್ಮ ಶಾಸ್ತ್ರಗಳಲ್ಲಿ ಹಲವಾರು ಅಭ್ಯಾಸಗಳನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ಇದರ ಹಿಂದೆ ಇರುವ ಕಾರಣಗಳು ಬಹುತೇಕ ಜನರಿಗೆ ತಿಳಿದಿಲ್ಲ, ಇನ್ನು ಕೆಲವರು ಧಾರ್ಮಿಕ ಕಾರಣಗಳನ್ನು ಮಾತ್ರ ತಿಳಿದುಕೊಂಡಿರುತ್ತಾರೆ. ಆದರೆ ನಮ್ಮ ಪೂರ್ವಜರು, ಋಷಿಮುನಿಗಳು ಇಂದಿನ ಆಧುನಿಕ ಜಗತ್ತು ಕಂಡು ಹಿಡಿಯುತ್ತಿರುವ ಅದೆಷ್ಟೋ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಅವುಗಳೆಲ್ಲವನ್ನು ಒಂದೊಂದು ರೀತಿಯಲ್ಲಿ ಮುಂದಿನ ಪೀಳಿಗೆಗೆ ಮೀಸಲು ಇಟ್ಟಿದ್ದಾರೆ. ಅದೇ ರೀತಿ ದೇವಸ್ಥಾನದಲ್ಲಿ ಗಂಟೆ ಬಾರಿಸುವ ಇರುವ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳ ಬಗ್ಗೆ ನಿಮಗೆ ತಿಳಿದಿಲ್ಲವಾದರೆ ಬನ್ನಿ ಎಂದು ನಾವು ಆ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಗಂಟೆಯನ್ನು ದೇವಸ್ಥಾನದಲ್ಲಿ ಬಳಸುವ ಮೊದಲನೇ ಕಾರಣವನ್ನು ನಾವು ಗಮನಿಸುವುದಾದರೆ, ಸಾಮಾನ್ಯವಾಗಿ ನೀವೆಲ್ಲರೂ ದೇವಸ್ಥಾನಕ್ಕೆ ನೀವು ಭೇಟಿ ನೀಡಿದಾಗ ಮೊದಲು ಕಿವಿಗೆ ಗಂಟೆಯ ನಾದ ಬೀಳುತ್ತದೆ, ಗಂಟೆಯ ನಾದ ಕಿವಿಗೆ ಒಕ್ಕ ತಕ್ಷಣ ಮನದಲ್ಲಿ ಭಕ್ತಿಯ ಭಾವ ಸೃಷ್ಟಿಯಾಗುತ್ತದೆ, ತಿಳಿಯದೆಯೇ ನಾವು ಕಣ್ಣು ಮುಚ್ಚಿ ಪ್ರಾರ್ಥನೆ ಆರಂಭಿಸುತ್ತೇವೆ. ಗಂಟೆಯಲ್ಲಿ ಅದೊಂದು ರೀತಿಯ ಶಕ್ತಿ ಅಡಗಿದೆ, ಗಂಟೆಯ ಶಬ್ದ ಕಿವಿಗೆ ಕೇಳಿಸಿದ ತಕ್ಷಣ ಹೊರಗಿನ ಯಾವುದೇ ಶಬ್ದಗಳು ನಮ್ಮ ಕಿವಿಗೆ ಕೇಳಿಸುವುದಿಲ್ಲ. ಇದರಿಂದ ನಮ್ಮ ಮನಸ್ಸು ಏಕಾಗ್ರತೆಯಿಂದ ದೇವರ ಸ್ಮರಣೆಯಲ್ಲಿ ನಿರತ ವಾಗುತ್ತದೆ. ಈ ದೇವಸ್ಥಾನದ ಗಂಟೆಗಳನ್ನು ಪಂಚಲೋಹ ಅಥವಾ ಹಿತ್ತಾಳೆಯಿಂದ ತಯಾರಿಸಿರುವ ಕಾರಣ ಗಂಟೆ ನಾದ ಆರಂಭವಾದ ತಕ್ಷಣ ಎರಡು ಪರಸ್ಪರ ಲೋಹಗಳು ಒಂದಕ್ಕೊಂದು ತಾಗಿ ಇಂಪಾದ ಶಬ್ದತರಂಗಗಳು ಸೃಷ್ಟಿಯಾಗುತ್ತವೆ. ಹೀಗೆ ಸೃಷ್ಟಿಯಾದ ತರಂಗಗಳು ನಮ್ಮ ಕಿವಿಗೆ ತಾಕಿದ ತಕ್ಷಣ ಹೊರಗಿನ ಪ್ರಪಂಚವನ್ನು ನಾವು ಮರೆತು ಏಕಾಗ್ರತೆಯಿಂದ ದೇವರನ್ನು ಬೇಡಿಕೊಳ್ಳಲು ಆರಂಭಿಸಬೇಕು ಎಂಬ ಕಾರಣಕ್ಕಾಗಿ ಗಂಟೆಯನ್ನು ದೇವಸ್ಥಾನದಲ್ಲಿ ಬಳಸಲಾಗುತ್ತದೆ.

ಇನ್ನು ಎರಡನೆಯದಾಗಿ ಗಂಟೆಯ ಶಬ್ದ ತರಂಗಗಳು ಆರಂಭಗೊಂಡ ತಕ್ಷಣ ಗಂಟೆಯಿಂದ ಓಂಕಾರ ನಾದ ಕೇಳಿಸುತ್ತದೆ, ಓಂಕಾರದ ಶಕ್ತಿಗೆ ಹಾಗೇ, ಓಂಕಾರ ನಮ್ಮ ಕಿವಿಗೆ ಕೇಳಿದ ತಕ್ಷಣ ನಮ್ಮಲ್ಲಿನ ಚಿಂತೆಗಳೂ ದೂರವಾಗುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗಿ ದೇವರ ಸ್ಮರಣೆಯಲ್ಲಿ ನಾವು ತೊಡಗಿಕೊಳ್ಳುತ್ತೇವೆ. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿರುವ ಕಾರಣ ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಗಂಟೆಯೂ ವಿಶಿಷ್ಟ ಆಕಾರವನ್ನು ಹೊಂದಿರುವ ಕಾರಣ, ಭೂಮಿ ಲಹರಿಯನ್ನು ತನ್ನತ್ತ ಆಕರ್ಷಿಸುವ ಶಕ್ತಿ ಹೊಂದಿದೆ. ಗಂಟೆ ಬಾರಿಸಿದ ತಕ್ಷಣ ಹೊರಬರುವ ಶಬ್ದತರಂಗಗಳು ಸುತ್ತಮುತ್ತಲಿನ ವಾಯು ಮಂಡಲದಲ್ಲಿರುವ ಲಹರಿಗಳು ಕಂಪನ ಕೊಳ್ಳುವಂತೆ ಮಾಡುತ್ತದೆ. ಇದರಿಂದ ಉಂಟಾಗುವ ಓಂಕಾರ ನಾದವು ಶಿವತತ್ವವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ, ಅಷ್ಟೇ ಅಲ್ಲದೆ ಗಂಟೆಯ ಶಬ್ದದಿಂದ ವಾಯುಮಂಡಲದಲ್ಲಿನ ಲಹರಿಗಳು ಶುದ್ಧವಾಗುತ್ತವೆ, ಹೀಗೆ ಸುತ್ತಮುತ್ತಲಿನ ವಾಯುಮಂಡಲದಲ್ಲಿನ ಲಹರಿಗಳು ಶುದ್ಧವಾಗಿ ಸಾತ್ವಿಕ ಗುಣವನ್ನು ಹೊಂದುತ್ತವೆ, ಅದೇ ಕಾರಣಕ್ಕಾಗಿ ಪೂಜೆಗೆ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಗಂಟೆ ಬಳಸಲಾಗುತ್ತದೆ.

ಇನ್ನು ಈ ಗಂಟೆಗಳು ಸಾಮಾನ್ಯ ಶಕ್ತಿಯನ್ನು ಹೊಂದಿಲ್ಲ, ಬದಲಾಗಿ ಪುರಾಣಗಳ ಪ್ರಕಾರ ಗಂಟೆಯ ನಾಲಿಗೆಯಲ್ಲಿ ಸರಸ್ವತಿ ದೇವಿ ಸ್ಥಾನ ಪಡೆದಿರುತ್ತಾರೆ, ಉದರದಲ್ಲಿ ಮಹಾರುದ್ರ, ಮುಖದಲ್ಲಿ ಬ್ರಹ್ಮ, ಗಂಟೆ ಹಿಡಿದುಕೊಳ್ಳುವ ಭಾಗದಲ್ಲಿ ಪ್ರಾಣ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಇಷ್ಟೆಲ್ಲಾ ಅಂಶಗಳನ್ನು ಹೊಂದಿರುವ ಗಂಟೆಯ ಶಬ್ದಗಳು ಹೊರಬಂದಾಗ ಸುತ್ತಮುತ್ತಲಿನ ದು-ಷ್ಟ ಶಕ್ತಿಗಳು ಓಡಿ ಹೋಗುತ್ತವೆ ಹಾಗೂ ಮನಸ್ಸಿನಲ್ಲಿ ಆಧ್ಯಾತ್ಮಕ ಭಾವನೆಗಳು ಹೆಚ್ಚಾಗಿ ಮನಸ್ಸು ಪ್ರಶಾಂತವಾಗುತ್ತದೆ. ಇನ್ನು ದೇವಸ್ಥಾನಗಳ ಮುಂದೆ ಗಂಟೆ ಇಟ್ಟಿರುವ ಉದ್ದೇಶವನ್ನು ನಾವು ಗಮನಿಸುವುದಾದರೆ, ಪುರಾಣಗಳ ಪ್ರಕಾರ ದೇವಾಲಯದ ಹಿಂದೆ ಇರುವ ಧಾರ್ಮಿಕ ಕಾರಣಗಳು ನಿಮಗೆ ತಿಳಿದೇ ಇರುತ್ತವೆ, ಆದರೆ ವೈಜ್ಞಾನಿಕವಾಗಿ ನಾವು ಗಮನಿಸುವುದಾದರೆ ಶಾಸ್ತ್ರವಾಗಿ ಕಟ್ಟಿರುವ ದೇವಾಲಯಗಳು ಶಕ್ತಿಯ ಕೇಂದ್ರಗಳಾಗಿವೆ, ಹಾಗೂ ಅಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.

ಆದಕಾರಣ ನಾವು ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ನಮ್ಮ ದೇಹ ಹಾಗೂ ಮನಸ್ಸು ಎರಡು ಕೂಡ ಶುಚಿಯಾಗಿರಬೇಕು, ಅದೇ ಕಾರಣಕ್ಕೆ ಬಹುತೇಕ ದೇವಾಲಯಗಳಲ್ಲಿ ದೇವಾಲಯ ಪ್ರವೇಶಿಸುವ ಮುನ್ನ ಕೈಕಾಲು ತೊಳೆದುಕೊಂಡು ತಲೆಗೆ ನೀರು ಸಿಂಪಡಿಸಿ ದೇವಾಲಯದ ಪ್ರಮುಖ ದ್ವಾರ ಹಾಗೂ ಧ್ವಜಸ್ತಂಭಕ್ಕೆ ನಮಸ್ಕರಿಸಿ ಗಂಟೆ ಬಾರಿಸಿ ಹೊಳಗಡೆ ಹೋಗುತ್ತಾರೆ. ಇದರಿಂದ ದೇಹವು ಕೂಡ ಸ್ವಚ್ಛಗೊಳ್ಳುತ್ತದೆ, ಅಷ್ಟೇ ಅಲ್ಲದೆ ಗಂಟೆಯ ಶಬ್ದ ನಾದ ಗಳಿಂದ ಹಾಗೂ ಅಲ್ಲಿನ ಸಕಾರಾತ್ಮಕ ಶಕ್ತಿಯಿಂದ ನಮ್ಮ ಮನಸ್ಸು ಕೂಡ ಅಧ್ಯಾತ್ಮದ ಕಡೆ ತಿರುಗಿ ಮನಸ್ಸಿನ ಎಲ್ಲ ಕಲ್ಮಶಗಳನ್ನೂ ದೂರವಾಗುತ್ತದೆ. ಹೀಗೆ ವಿವಿಧ ಕಾರಣಗಳಿಂದ ದೇವಸ್ಥಾನಗಳಲ್ಲಿ ಗಂಟೆಯೂ ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಇಷ್ಟೆಲ್ಲಾ ವೈಜ್ಞಾನಿಕ ಕಾರಣಗಳನ್ನು ಇಂದಿನ ವಿಜ್ಞಾನಿಗಳು ಇದೀಗ ಕಂಡು ಹಿಡಿಯುತ್ತಿದ್ದಾರೆ. ಆದರೆ ನಮ್ಮ ಪೂರ್ವಜರು ಇವುಗಳೆಲ್ಲವನ್ನು ಕಂಡು ಹಿಡಿದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಮಗೊಂದು ಹಾದಿ ರೂಪಿಸಿಕೊಟ್ಟಿದ್ದಾರೆ.