ಆರ್ಸಿಬಿ ತಂಡದ ಸಂಭಾವ್ಯ ತಂಡ ಪ್ರಕಟಿಸಿದ ಕ್ರಿಕೆಟ್ ವಿಶ್ಲೇಷಕರು ! ಸ್ಥಾನ ಪಡೆದ ಆಟಗಾರರು ಯಾರ್ಯಾರು ಗೊತ್ತಾ??

ಆರ್ಸಿಬಿ ತಂಡದ ಸಂಭಾವ್ಯ ತಂಡ ಪ್ರಕಟಿಸಿದ ಕ್ರಿಕೆಟ್ ವಿಶ್ಲೇಷಕರು ! ಸ್ಥಾನ ಪಡೆದ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ದಿನೇ ದಿನೇ ಐಪಿಎಲ್ ಟೂರ್ನಿಯ ಕಾವು ಏರತೊಡಗಿದೆ. ಅಭಿಮಾನಿಗಳು ಹಲವಾರು ತಿಂಗಳುಗಳ ಕಾಲ ಭಾರತೀಯ ಕ್ರಿಕೆಟ್ ನಲ್ಲಿ ಯಾವುದೇ ಪಂದ್ಯ ನಡೆಯದ ಕಾರಣ ಟೂರ್ನಿಗಾಗಿ ಮತ್ತಷ್ಟು ಉತ್ಸಾಹದಿಂದ ಕಾಯುತ್ತಿದ್ದಾರೆ. ಯುಎಇ ದೇಶದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಆಯೋಜನೆಗೊಂಡಿರುವ ಕಾರಣ ಸ್ಪಿನ್ ಬೌಲರ್ಗಳಿಗೆ ನೆರವಾಗುವ ಪಿಚ್ ಗಳಲ್ಲಿ ಬ್ಯಾಟ್ಸ್ಮನ್ಗಳು ಯಾವ ರೀತಿ ಪ್ರದರ್ಶನ ನೀಡಿ ಐಪಿಎಲ್ ಟೂರ್ನಿಗೆ ರಂಗು ತುಂಬಲಿದ್ದಾರೆ ಎಂಬುದನ್ನು ಕಾದು ನೋಡುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಇನ್ನು ಕಳೆದ 12 ವರ್ಷಗಳಿಂದ ಕಪ್ ಗಾಗಿ ಆರ್ಸಿಬಿ ಅಭಿಮಾನಿಗಳು ಕಾದಿದ್ದಾರೆ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಲವಾರು ವರ್ಷಗಳ ನಂತರ ಆರ್ಸಿಬಿ ತಂಡವು ಬಹಳ ಸಮತೋಲನದಿಂದ ಕಾಣುತ್ತಿದೆ.

ಆದ ಕಾರಣ ಈ ಬಾರಿ ಐಪಿಎಲ್ ಟೂರ್ನಿಯನ್ನು ಗೆಲ್ಲಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಕ್ರಿಕೆಟ್ ವಿಶ್ಲೇಷಕರು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಆದ ಕಾರಣ ಈ ಬಾರಿಯ ಹನ್ನೊಂದರ ಬಳಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಅದರ ಕುರಿತು ಇದೀಗ ಮತ್ತೊಮ್ಮೆ ಚರ್ಚೆ ನಡೆಸಿರುವ ಕ್ರಿಕೆಟ್ ವಿಶ್ಲೇಷಕರು ಇದೀಗ ಸಮತೋಲನದಿಂದ ಕೂಡಿದ ಆರ್ಸಿಬಿ ಸಂಭಾವ್ಯ ತಂಡವನ್ನು ಬಿಡುಗಡೆ ಮಾಡಿದ್ದಾರೆ. ಬಹಳ ನಿರೀಕ್ಷೆ ಮೂಡಿಸಿರುವ ಈ ಬಾರಿಯ ಹನ್ನೊಂದರ ಬಳಗದಲ್ಲಿ ಅಂದಾಜಿನಂತೆ ಕ್ರಿಕೆಟ್ ವಿಶ್ಲೇಷಕರು ಆಸ್ಟ್ರೇಲಿಯಾ ತಂಡದ ಆಟಗಾರ ಆರನ್ ಫಿಂಚ್ ಹಾಗೂ ಕನ್ನಡಿಗ ದೇವದತ್ ಪಡಿಕಲ್ ರವರಿಗೆ ಆರಂಭಿಕ ಸ್ಥಾನವನ್ನು ನೀಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ರವರು ಅಂತರರಾಷ್ಟ್ರೀಯ ಕ್ರಿಕೆಟ್ ನಂತೆ ತಮ್ಮ ಕ್ರಮಾಂಕವಾದ ಮೂರನೇ ಕ್ರಮಾಂಕದಲ್ಲಿ ಆಯ್ಕೆಯಾಗಿದ್ದು ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಅವರು ಆಯ್ಕೆಯಾಗಿದ್ದಾರೆ.

ಆಲ್-ರೌಂಡರ್ ಗಳ ಸ್ಥಾನದಲ್ಲಿ 4 ಆಲ್-ರೌಂಡರ್ ಗಳಿಗೆ ಸ್ಥಾನ ನೀಡಿರುವ ಕ್ರಿಕೆಟ್ ವಿಶ್ಲೇಷಕರು ಮೋಯಿನ್ ಆಲಿ, ಶಿವಂ ದುಬೆ, ಕ್ರಿಸ್ ಮೋರಿಸ್ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಬೌಲರ್ಗಳ ಕೋಟಾದಲ್ಲಿ ಸ್ಪಿನ್ ಬೌಲರ್ ಆಗಿ ಯುಜೇಂದ್ರ ಚಾಹಲ್ ರವರು ಆಯ್ಕೆಯಾಗಿದ್ದು ವೇಗದ ಬೌಲರ್ ಗಳಾಗಿ ನವದೀಪ್ ಸೈನಿ ಹಾಗೂ ಉಮೇಶ್ ಯಾದವ್/ಮೊಹಮದ್ ಸಿರಾಜ್ ರವರು ಆಯ್ಕೆ ಯಾಗಿದ್ದಾರೆ. ಒಟ್ಟಾರೆಯಾಗಿ ತಂಡ ಹೀಗಿದ್ದು, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಆರ್ಸಿಬಿ ಸಂಭಾವ್ಯ ತಂಡ: ಆರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಾರ), ಮೊಯೀನ್ ಅಲಿ, ಶಿವಮ್ ಡ್ಯೂಬ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಉಮೇಶ್ ಯಾದವ್ / ಮೊಹಮ್ಮದ್ ಸಿರಾಜ್.