ಐಪಿಎಲ್ ಪ್ಲೇ ಆಫ್ ತಲುಪಲಿರುವ ತಂಡಗಳನ್ನು ಹೆಸರಿಸಿದ ಬ್ರಾಡ್ ಹಾಗ್ ! ಆರ್ಸಿಬಿ ತಂಡಕ್ಕೆ ಎಷ್ಟನೇ ಸ್ಥಾನ ಗೊತ್ತಾ??

ಐಪಿಎಲ್ ಪ್ಲೇ ಆಫ್ ತಲುಪಲಿರುವ ತಂಡಗಳನ್ನು ಹೆಸರಿಸಿದ ಬ್ರಾಡ್ ಹಾಗ್ ! ಆರ್ಸಿಬಿ ತಂಡಕ್ಕೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿ ಆರ್ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಟೂರ್ನಿಯಲ್ಲಿ ಬಹಳ ಸಮತೋಲನದಿಂದ ಕೂಡಿದಂತೆ ಕಾಣುತ್ತಿದೆ. ಕಳೆದ ಸೀಸನ್ ಗಳಲ್ಲಿ ಕೊನೆಯ ಓವರ್ ಗಳಲ್ಲಿ ಬೌಲಿಂಗ್ ಮಾಡಬಹುದಾದ ಬೌಲರ್ ಗಳ ಕೊರತೆ ಕಾಣುತ್ತಿತ್ತು, ಆದರೆ ಈ ಬಾರಿ ಬಲಾಢ್ಯ ಆಲ್-ರೌಂಡರ್ ಗಳೊಂದಿಗೆ ದೇಶಿಯ ಬೌಲರ್ಗಳು ಕೊಂಚ ಅನುಭವವನ್ನು ಹೆಚ್ಚು ಮಾಡಿಕೊಂಡಿರುವ ಕಾರಣ ಆರ್ಸಿಬಿ ತಂಡಕ್ಕೆ ಕೊನೆಯಲ್ಲಿ ಓವರ್ಗಳಲ್ಲಿ ಯಾವುದೇ ಹೆಚ್ಚಿನ ಸವಾಲುಗಳು ಕಾಣಸಿಗುವುದಿಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಬ್ಯಾಟಿಂಗ್ ವಿಭಾಗವು ಮೊದಲಿನಂತೆ ಬಲಿಷ್ಠವಾಗಿದ್ದು, ಕ್ರಿಸ್ ಮೋರಿಸ್, ಮೊಯಿನ್ ಅಲಿ ಸೇರಿದಂತೆ ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೇ ರವರು ಆಲ್-ರೌಂಡರ್ ಗಳ ಸ್ಥಾನಗಳಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಕ್ರಿಕೆಟ್ ವಿಶ್ಲೇಷಕರು ಆರ್ಸಿಬಿ ತಂಡವು ಬಹಳ ಸಮತೋಲನದಿಂದ ಕೂಡಿದೆ ಎಂಬ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.

ಇನ್ನು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರ ಬ್ರಾಡ್ ಹಾಗ್ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಐಪಿಎಲ್ ಟೂರ್ನಿಯಲ್ಲಿ ಯಾವ್ಯಾವ ತಂಡಗಳು ಅಂಕಪಟ್ಟಿಯಲ್ಲಿ ಮೊದಲನೇ ನಾಲ್ಕು ಸ್ಥಾನ ಪಡೆದುಕೊಂಡು ಪ್ಲೇ ಆಫ್ ತಲುಪಲಿದ್ದಾರೆ ಎಂಬುದನ್ನು ಕಾರಣಗಳ ಸಮೇತ ವಿವರಣೆ ನೀಡಿದ್ದಾರೆ. ತಂಡಗಳು ಈ ಕೆಳಗಿನಂತೆ ಇದ್ದು, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಸ್ಥಾನ 4: ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯಲು ಎರಡು ತಂಡಗಳು ಮುಂಚೂಣಿಯಲ್ಲಿ ಕಾಣಸಿಗುತ್ತವೆ, ಕಳೆದ ಬಹುತೇಕ ಸೀಸನ್ ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನವನ್ನು ನೀಡಿದೆ, ಆದರೆ ಅಗತ್ಯದ ಸಂದರ್ಭದಲ್ಲಿ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದ ಹರ್ಭಜನ್ ಸಿಂಗ್ ಹಾಗೂ ವಿಶ್ವದಲ್ಲಿಯೇ ಟಿ20 ಕ್ರಿಕೆಟ್ ನಲ್ಲಿ ಉತ್ತಮ ಆಟಗಾರರ ಸಾಲಿನಲ್ಲಿ ಕಂಡು ಬರುವ ಸುರೇಶ್ ರೈನಾ, ಇವರಿಬ್ಬರೂ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಭ್ಯವಿಲ್ಲ. ಉತ್ತಮ ಆಟಗಾರರನ್ನು ಹೊಂದಿದ್ದರೂ ಕೂಡ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಸುಲಭವಾಗಿ ದಕ್ಕುವುದಿಲ್ಲ, ಅದೇ ಕಾರಣಕ್ಕೆ ಈ ನಾಲ್ಕನೇ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಒಂದು ವೇಳೆ ಡೆಲ್ಲಿ ಕ್ರಿಕೆಟ್ ತಂಡವು, ಕಗಿಸೋ ರಬಾಡ ರವರನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಖಂಡಿತ ನಾಲ್ಕನೇ ಸ್ಥಾನದಲ್ಲಿ ಅವರನ್ನು ನಾವು ಕಾಣಬಹುದು ಎಂದು ನನಗೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ನಾಲ್ಕನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಒಂದನ್ನು ನಾವು ಕಾಣಬಹುದು ಎಂದಿದ್ದಾರೆ.

ಸ್ಥಾನ 3: ಈ ಮೂರನೇ ಸ್ಥಾನಕ್ಕೆ ಖಂಡಿತವಾಗಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಆಯ್ಕೆಯಾಗುತ್ತದೆ, ವಿದೇಶಿ ಆಟಗಾರರು ಹಾಗೂ ಸ್ವದೇಶಿ ಆಟಗಾರರ ಉತ್ತಮ ಸಂಯೋಜನೆಯನ್ನು ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ, ಅದರಲ್ಲಿಯೂ ಸುನಿಲ್ ನರೈನ್ ಹಾಗೂ ಆಂಡ್ರ್ಯೂ ರಸೆಲ್ ರವರು ಈ ಬಾರಿಯೂ ಕೂಡ ತಂಡಕ್ಕೆ ಪ್ರಮುಖ ಕೀ ಪ್ಲೇಯರ್ ಗಳಾಗಲಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಇವರಿಬ್ಬರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಕೂಡ ತಂಡಕ್ಕೆ ಕೊಡುಗೆ ನೀಡಿ ತಂಡವನ್ನು ಪ್ಲೇ ಆಫ್ ತಲುಪಿಸುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಥಾನ 2: ಬಹುಶಹ ನನ್ನ ಆಯ್ಕೆಯನ್ನು ಕೇಳಿದರೇ ನೀವು ಅಚ್ಚರಿ ಗೊಳ್ಳಬಹುದು, ಆದರೆ ಇದು ಸತ್ಯ, ಯಾಕೆಂದರೆ ಕಳೆದ ಎಲ್ಲಾ ಸೀಸನ್ ಗಳಿಗಿಂತ ಈ ಬಾರಿ ಅತ್ಯುತ್ತಮ ಸಮತೋಲನ ತಂಡವನ್ನು ಹೊಂದಿರುವ ಆರ್ಸಿಬಿ ತಂಡವು ಈ ಬಾರಿ ಪ್ಲೇಆಫ್ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ತಂಡವನ್ನು ನೋಡಿದರೇ ನನಗೆ ಈ ವರ್ಷ ಅವರದೇ ಕಪ್ ಎನಿಸುತ್ತದೆ, ಒಂದೆಡೆ ವಿರಾಟ್ ಕೊಹ್ಲಿ ರವರು ಎಂದಿನಂತೆ ಉತ್ತಮ ರನ್ ಗಳಿಸುತ್ತಿದ್ದಾರೆ. ಇನ್ನು ಆರನ್ ಫಿಂಚ್ ರವರು ಕೂಡ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರ ಜೊತೆಗೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಮೋರಿಸ್ ಅವರು ತಂಡಕ್ಕೆ ಬಲ ತುಂಬಲಿದ್ದಾರೆ. ಜೊತೆಗೆ ದೇಶಿಯ ಬೌಲರ್ಗಳು ಈ ಬಾರಿ ಹೆಚ್ಚಿನ ಅನುಭವ ಪಡೆದುಕೊಂಡಿದ್ದು, ಖಂಡಿತ ಇವರು ಕೊನೆಯ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲಿಸಿ ಕೊಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲನೇ ಸ್ಥಾನ: ಈ ಬಾರಿ ತಂಡಗಳ ಆಟಗಾರರ ಲಯ ಹಾಗೂ ಸಂಯೋಜನೆಯನ್ನು ನೋಡಿದರೇ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳುತ್ತದೆ, ಒಂದೆಡೆ ಟಾಪ್ ಬ್ಯಾಟ್ಸ್ಮನ್ಗಳು ಮತ್ತೊಂದೆಡೆ ಕಿರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಹಾಗೂ ಕುರ್ನಾಲ್ ಪಾಂಡ್ಯ ರವರಂತಹ ಉತ್ತಮ ಆಲ್-ರೌಂಡರ್ ಗಳ ಸಂಯೋಜಿತ ತಂಡವನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.