ಮುಂದುವರೆದ ಭಾರತದ ಹವಾ ! ಮಸೂದೆ ಮಂಡಿಸಲು ನಿರ್ಧಾರ ಮಾಡಿದ ನೇಪಾಳದ ಪ್ರಧಾನಿಗೆ ಭಾರಿ ಮುಖಭಂಗ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನೇಪಾಳ ದೇಶದ ಪ್ರಧಾನಿ ಚೀನಾ ದೇಶವನ್ನು ಮೆಚ್ಚಿಸಲು ಇತ್ತೀಚೆಗೆ ಭಾರತದ ಪ್ರದೇಶಗಳನ್ನು ಒಳಗೊಂಡ ನಕ್ಷೆಯನ್ನು ಬಿಡುಗಡೆ ಮಾಡಿ ಈ ಪ್ರದೇಶಗಳು ನೇಪಾಳದ್ದು ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.

ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಭಾರತೀಯ ವಿದೇಶಾಂಗ ಸಚಿವಾಲಯ ಸುಖಾಸುಮ್ಮನೆ ಗಡಿಯಲ್ಲಿ ನೇಪಾಳದ ಕಡೆಯಿಂದ ನಾವು ಯಾವುದೇ ಖ್ಯಾತೆ ಊಹೆ ಮಾಡಿರಿರಲಿಲ್ಲ. ಇದು ಒಂದು ಅಸಂಬದ್ಧ ನಡೆಯಾಗಿದ್ದು, ಇತಿಹಾಸವನ್ನು ಒಮ್ಮೆ ನೋಡಿ ನಿರ್ಧಾರಕ್ಕೆ ಬರಬೇಕು, ಯಾವುದೇ ಕಾರಣಕ್ಕೂ ಭಾರತದ ಪ್ರದೇಶಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿಕೆ ನೀಡಿತ್ತು. ನೇಪಾಳದ ಪ್ರಧಾನಿಯವರ ಈ ನಿರ್ಧಾರ ಅಲ್ಲಿನ ಜನರು ಕೂಡ ಒಪ್ಪಿಕೊಂಡಿರಲಿಲ್ಲ.

ಇಷ್ಟಾದರೂ ಸುಮ್ಮನಾಗದ ನೇಪಾಳದ ಪ್ರಧಾನಿ ಕೆಪಿ ಶರ್ಮರವರು, ನೇಪಾಳದ ಮೂಲ ನಕ್ಷೆಯನ್ನು ಬದಲಾಯಿಸಲು ಸಾಂವಿಧಾನಿಕವಾಗಿ ತಿದ್ದುಪಡಿ ತರಲು ಮಸೂದೆ ಮಂಡಿಸಲು ಮುಂದಾಗಿ ಸರ್ವ ಪಕ್ಷ ಸಭೆಗಳ ಸಭೆ ಕರೆದಿದ್ದರು. ಆದರೆ ತನ್ನದೇ ಆದ ಪಕ್ಷಗಳಲ್ಲಿ ಒಮ್ಮತ ಮೂಡಿಸುವಲ್ಲಿ ನೇಪಾಳದ ಪ್ರಧಾನಿ ವಿಫಲರಾಗಿರುವುದು ತಿಳಿದುಬಂದಿದ್ದು, ವಿಪಕ್ಷ ನಾಯಕರು ಹಾಗೂ ತಮ್ಮದೇ ಆದ ಪಕ್ಷದ ನಾಯಕರು ಭಾರತದ ಜೊತೆ ಗಡಿ ಖ್ಯಾತೆ ತೆಗೆಯುವಂತಹ ನಕ್ಷೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕಾರಣ ಬೇರೆ ವಿಧಿಯಿಲ್ಲದೆ ಪ್ರಧಾನಿ ರವರು ನಕ್ಷೆಯನ್ನು ಬದಲಾಯಿಸುವ ಸಾಂವಿಧಾನಿಕ ತಿದ್ದುಪಡಿಯನ್ನು ಪಕ್ಕಕ್ಕೆ ಇಡುವ ಮೂಲಕ ಸೋತಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಜಯ ಸಿಕ್ಕಿದ್ದು, ನೇಪಾಳದ ಜನತೆಗೆ ಹಾಗೂ ಅಲ್ಲಿನ ಪಕ್ಷದ ಕೆಲವು ನಾಯಕರಿಗೆ ಭಾರತದ ಮೇಲಿನ ಗೌರವ ಅನಾವರಣಗೊಂಡಿದೆ.

Post Author: Ravi Yadav