ಜೀವನ ಪಾಠ: ಸೋಮಾರಿ ಶಿಷ್ಯನಿಗೆ ಸಮಯದ ಮಹತ್ವ ತಿಳಿಸಲು ಗುರು ಹೂಡಿದ ತಂತ್ರವನ್ನು ಕೇಳಿದರೇ ಖಂಡಿತಾ ಜೀವನಕ್ಕೆ ಒಂದು ಪಾಠ ಸಿಗಲಿದೆ.

ಜೀವನ ಪಾಠ: ಸೋಮಾರಿ ಶಿಷ್ಯನಿಗೆ ಸಮಯದ ಮಹತ್ವ ತಿಳಿಸಲು ಗುರು ಹೂಡಿದ ತಂತ್ರವನ್ನು ಕೇಳಿದರೇ ಖಂಡಿತಾ ಜೀವನಕ್ಕೆ ಒಂದು ಪಾಠ ಸಿಗಲಿದೆ.

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಹಳೆಯ ಕಾಲದಲ್ಲಿ ಗುರುಗಳು ತಮ್ಮ ಶಿಷ್ಯರೊಂದಿಗೆ ಆಶ್ರಮದಲ್ಲಿ ವಾಸವಾಗಿರುತ್ತಿದ್ದರು. ಒಮ್ಮೆ ಶಿಷ್ಯರ ವಿದ್ಯಾಭ್ಯಾಸಕ್ಕೂ ಮುಗಿದ ಮೇಲೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡು ಆಶ್ರಮದಿಂದ ಹೊರ ಹೋಗುತ್ತಿದ್ದರು.

ಹೀಗೆ ಒಬ್ಬರು ಮಹಾನ್ ಪಂಡಿತರು ಹಲವಾರು ಮಕ್ಕಳಿಗೆ ಗುರುಗಳಾಗಿದ್ದರು, ಇದ್ದ ಹಲವಾರು ಜನರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಬಹಳ ಸೋಂಬೇರಿ ಯಾಗಿದ್ದಾನು. ಇನ್ನು ಕೆಲವೇ ಕೆಲವು ದಿನಗಳಲ್ಲಿ ಇವರೆಲ್ಲರ ವಿದ್ಯಾಭ್ಯಾಸ ಮುಗಿದು ಹೋಗುತ್ತದೆ, ಆದರೆ ಈತನಿಗೆ ಮಾತ್ರ ಶಿಸ್ತು ಇಲ್ಲ, ಸೋಂಬೇರಿ ಆಗಿದ್ದಾನೆ ಎಂಬುದನ್ನು ಅರಿತ ಗುರುಗಳು ಈತನಿಗೆ ಸಮಯದ ಮಹತ್ವವನ್ನು ತಿಳಿಸಿಕೊಡಲು ನಿರ್ಧಾರ ಮಾಡಿ ಆತನ ಜೀವನವನ್ನು ಒಮ್ಮೆಲೆ ಬದಲಾಯಿಸಿದರು.

ಹೌದು ಸ್ನೇಹಿತರೇ, ಒಂದು ದಿನ ಗುರುಗಳು ಸೋಮಾರಿಯಾದ ಶಿಷ್ಯನಿಗೆ ಒಂದು ಬಹಳ ಪವಾಡ ಹೊಂದಿರುವಂತಹ ಕಲ್ಲನ್ನು ನೀಡಿ ಈ ಕಲ್ಲನ್ನು ನೀನು ಯಾವುದೇ ರೀತಿಯ ಲೋಹಕ್ಕೆ ತಾಕಿಸಿದರೇ ಲೋಹವು ಚಿನ್ನವಾಗಿ ಬದಲಾಗುತ್ತದೆ ಎಂದು ಹೇಳುತ್ತಾರೆ. ನೀನು ಎಷ್ಟು ಬೇಕಾದರೂ ಚಿನ್ನವನ್ನಾಗಿ ಪರಿವರ್ತನೆ ಮಾಡಿಕೊಂಡು ನಿನ್ನ ಜೊತೆ ತೆಗೆದುಕೊಂಡು ಹೋಗು, ಆದರೆ ಕೇವಲ ಒಂದೇ ಒಂದು ಷರತ್ತು, ನಿನಗಿರುವುದು ಕೇವಲ ಎರಡು ದಿನಗಳು, ನಾನು ಕೆಲಸದ ನಿಮಿತ್ತ ಬೇರೆ ಹಳ್ಳಿಗೆ ಹೋಗುತ್ತಿದ್ದೇನೆ. ಎರಡು ದಿನಗಳ ನಂತರ ನಾನು ಆಶ್ರಮಕ್ಕೆ ಹಿಂತಿರುಗಿದಾಗ ನೀನು ಈ ಕಲ್ಲನ್ನು ನನಗೆ ಹಿಂತಿರುಗಿಸಬೇಕು ಎಂದರು.

ಕಲ್ಲು ನೀಡಿದ ನಂತರ ಗುರುಜಿ ಆಶ್ರಮವನ್ನು ತೊರೆದರು. ಸೋಮಾರಿಯಾದ ಶಿಷ್ಯ ಕಲ್ಲು ಪಡೆದ ನಂತರ ತುಂಬಾ ಸಂತೋಷಪಟ್ಟನು. ಈ ಕಲ್ಲಿನಿಂದ ಎಷ್ಟೆಲ್ಲ ಚಿನ್ನವನ್ನು ತಯಾರಿಸುತ್ತೇನೆ ಎಂದು ಭಾವಿಸಿದನು, ಅಷ್ಟೇ ಅಲ್ಲದೇ ಈ ಎರಡು ದಿನಗಳು ಕೆಲಸ ಮಾಡಿದರೇ ತನ್ನ ಜೀವನದುದ್ದಕ್ಕೂ ಕೆಲಸ ಮಾಡಬೇಕಾಗಿಲ್ಲ ಎಂದು ಕೊಂಡನು. ಶಿಷ್ಯನು ನನಗೆ ಈಗ ಎರಡು ದಿನಗಳಿವೆ, ಈ ದಿನ ವಿಶ್ರಾಂತಿ ತೆಗೆದು ಕೊಳ್ಳುತ್ತೇನೆ, ನಾಳೆ ಚಿನ್ನ ಮಾಡುತ್ತೇನೆ ಎಂದು ನಿದ್ರೆಗೆ ಜಾರಿದನು.

ಇಡೀ ದಿನ ಮತ್ತು ರಾತ್ರಿಯಿಡೀ ವಿಶ್ರಾಂತಿ ಪಡೆದ ನಂತರ ಅವನು ಎಚ್ಚರವಾದಾಗ, ಇಂದು ನಾನು ನನಗೆ ಜೀವನುದ್ದಕ್ಕೂ ಸಾಕಾಗುವಷ್ಟು ಚಿನ್ನ ತಯಾರು ಮಾಡಲು ಕಬ್ಬಿಣ ತರಬೇಕು ಎಂದು ಯೋಜಿಸಿದನು. ಆದರೆ ಅದಕ್ಕೂ ಮೊದಲು ನಾನು ಆಹಾರವನ್ನು ತಿನ್ನುತ್ತೇನೆ, ನಂತರ ನಾನು ಕೆಲಸ ಮಾಡುತ್ತೇನೆ ಎಂದು ಆಹಾರ ಸೇವಿಸುತ್ತಾನೆ. ಹೊಟ್ಟೆ ಪೂರ್ತಿ ತುಂಬಿದ ಮೇಲೆ ಅವನಿಗೆ ನಿದ್ರೆ ಬರಲಾರಂಭಿಸಿತು. ಈಗ ಅವನು ಸ್ವಲ್ಪ ಸಮಯ ನಿದ್ದೆ ಮಾಡುತ್ತೇನೆ ಹೇಗಿದ್ದರೂ ಸಾಕಷ್ಟು ಸಮಯವಿದೆ. ಅಷ್ಟೇ ಅಲ್ಲದೇ ತಾಗಿಸಿದರೆ ಚಿನ್ನ ಆಗುತ್ತದೆ ಸಂಜೆ ಮಾಡಿದರೇ ಆಯಿತು ಎಂದುಕೊಂಡು ಮಲಗಿದನು. ಅವನು ನಿದ್ರೆಗೆ ಜಾರಿದ. ಸಂಜೆ ಆದ ಬಳಿಕ ಆತನಿಗೆ ಎಚ್ಚರವಾಯಿತು. ಸೂರ್ಯಾಸ್ತ ಕೂಡ ಆಗಿತ್ತು. ಎಚ್ಚರವಾದ ಕೆಲವೇ ನಿಮಿಷಗಳಲ್ಲಿ ಗುರುಗಳು ಹಿಂತಿರುಗಿದರು.

ಗುರು ಶಿಷ್ಯನಿಗೆ ಈಗ ಎರಡು ದಿನಗಳು ಮುಗಿದಿದೆ, ಆದ್ದರಿಂದ ಈಗ ಆ ಕಲ್ಲನ್ನು ನನ್ನ ಬಳಿಗೆ ಹಿಂತಿರುಗಿಸು ಎಂದು ಹೇಳಿದರು. ಕಲ್ಲು ವಾಪಸ್ಸು ಕೊಡುವಾಗ, ಅವನು ತನ್ನ ತಪ್ಪನ್ನು ಅರಿತುಕೊಂಡನು. ಸಮಯವು ಮೌಲ್ಯಯುತವಾಗಿದೆ ಎಂದು ಅವನು ಅರ್ಥ ಮಾಡಿಕೊಂಡನು. ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ, ಯಾರೇ ಆಗಲಿ ಎಷ್ಟೇ ಶಕ್ತಿ ಯುಕ್ತಿ ಇರಲಿ, ಎಷ್ಟೇ ಅವಕಾಶಗಳು ಸಿಗಲಿ, ಸಮಯ ವ್ಯರ್ಥ ಮಾಡಿದರೇ ಏನನ್ನು ಗಳಿಸಲು ಸಾಧ್ಯವಿಲ್ಲಎಂಬುದನ್ನು ಅರ್ಥ ಮಾಡಿಕೊಂಡು ಸೋಮಾರಿತನದಿಂದ ಹೊರಬರಬೇಕು.