ಭಾರತ ಈ ಬೌಲರ್ ಗೆ ಬ್ಯಾಟಿಂಗ್ ಮಾಡಲು ಕಷ್ಟ ಎಂದು ಕಾರಣಗಳ ಸಮೇತ ವಿವರಣೆ ನೀಡಿದ ಟೆಸ್ಟ್ ನಂಬರ್ 1 ಬ್ಯಾಟ್ಸಮನ್ ಸ್ಮಿತ್

ಭಾರತ ಈ ಬೌಲರ್ ಗೆ ಬ್ಯಾಟಿಂಗ್ ಮಾಡಲು ಕಷ್ಟ ಎಂದು ಕಾರಣಗಳ ಸಮೇತ ವಿವರಣೆ ನೀಡಿದ ಟೆಸ್ಟ್ ನಂಬರ್ 1 ಬ್ಯಾಟ್ಸಮನ್ ಸ್ಮಿತ್

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮ್ಯಾನ್ ಸ್ಟೀವ್ ಸ್ಮಿತ್ ರವರು ಟೆಸ್ಟ್ ಕ್ರಿಕೆಟ್ನಲ್ಲಿ ಯಾವ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.

ಹೌದು, ಇದೀಗ ICC ಟೆಸ್ಟ್ ರಾಂಕಿಂಗ್ ನಲ್ಲಿ ಮೊದಲನೇ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಸ್ಟೀವನ್ ಸ್ಮಿತ್ ರವರು, ತಮ್ಮ ಮುಂದಿನ ಟೆಸ್ಟ್ ಕ್ರಿಕೆಟ್ ನ ಕನಸು ಹಾಗೂ ಅದಕ್ಕೆ ಸಂಬಂಧಿಸಿದ ಕುರಿತು ಕೆಲವು ಮಾತುಗಳನ್ನಾಡಿದ್ದಾರೆ. ನಾವು ಯಾವಾಗಲೂ ಸದಾ ಆಶಸ್ ಸರಣಿ ಯನ್ನು ದೊಡ್ಡದು ಎಂದು ಕೊಂಡಿರುತ್ತೇವೆ, ಆದರೆ ನಿಜವಾದ ಸವಾಲಿರುವುದು ಭಾರತದಲ್ಲಿ. ನಾನು ಭಾರತ ನೆಲದಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲುವ ಕನಸನ್ನು ಕಟ್ಟಿಕೊಂಡಿದ್ದೇನೆ.

ಈಗ ಇರುವ ತಂಡದ ಎದುರು ಭಾರತದಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ, ವಿಶ್ವದ ಅತ್ಯುತ್ತಮ ಟೆಸ್ಟ್ ತಂಡದ ಎದುರು ತವರು ನೆಲದಲ್ಲಿ ಆಟವಾಡುವುದು ಸುಲಭದ ಕೆಲಸವಲ್ಲ. ಅಷ್ಟೇ ಅಲ್ಲದೇ, ಭಾರತ ಕ್ರಿಕೆಟ್ ತಂಡದ ಬೌಲರ್ ರವೀಂದ್ರ ಜಡೇಜಾ ರವರ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭದ ಕೆಲಸವಲ್ಲ.

ಅವರು ಎಲ್ಲ ರೀತಿಯ ಬಾಲ್ ಗಳನ್ನೂ ಒಂದೇ ಆಕ್ಷನ್ ನಿಂದ ಬೌಲ್ ಮಾಡುತ್ತಾರೆ. ಬಹಳಷ್ಟು ಜನ ಬೌಲಿಂಗ್ ಮಾಡುವವರು ಕನಿಷ್ಠ ಒಂದು ವ್ಯತ್ಯಾಸ ವನ್ನು ಹೊಂದಿರುತ್ತಾರೆ. ಆದರೆ ರವೀದ್ರ ಜಡೇಜಾ ರವರು, ವಿವಿಧ ರೀತಿಯ ಸ್ಪಿನ್ ಹಾಗೂ ಟರ್ನ್ ಗಳನ್ನೂ ಒಂದೇ ರೀತಿಯಲ್ಲಿ ಮಾಡುತ್ತಾರೆ. ತಮ್ಮ ತೋಳಿನ ವೇಗವನ್ನು ಬಹಳ ವೇಗವಾಗಿ ಬದಲಾಯಿಸುವ ರವೀಂದ್ರ ಜಡೇಜಾ ರವರನ್ನು ಭಾರತದಲ್ಲಿ ಎದುರಿಸುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.