ಚೆಕ್ಮೇಟ್ ಚೀನಾ! ಭಾರತಕ್ಕೆ ಐತಿಹಾಸಿಕ ರಾಜತಾಂತ್ರಿಕ ಉಡುಗೊರೆ ನೀಡಲು ಸಿದ್ಧವಾದ ಆಸ್ಟ್ರೇಲಿಯಾ ! ಮಾಡುತ್ತಿರುವುದಾದರೂ ಏನು ಗೊತ್ತಾ?

ಚೆಕ್ಮೇಟ್ ಚೀನಾ! ಭಾರತಕ್ಕೆ ಐತಿಹಾಸಿಕ ರಾಜತಾಂತ್ರಿಕ ಉಡುಗೊರೆ ನೀಡಲು ಸಿದ್ಧವಾದ ಆಸ್ಟ್ರೇಲಿಯಾ ! ಮಾಡುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಚೀನಾ ದೇಶವು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಚೀನಾ ದೇಶಕ್ಕೆ ಅಲ್ಲಿ ಜಪಾನ್, ಅಮೇರಿಕಾ ದೇಶದ ಅಂತಹ ಬಲಾಢ್ಯ ದೇಶಗಳು ಅಡ್ಡಗಾಲು ಹಾಕುತ್ತಿವೆ.

ಇಷ್ಟು ಸಾಲದು ಎಂಬಂತೆ ಹಿಂದೂ ಮಹಾಸಾಗರದಲ್ಲಿಯೂ ಕೂಡ ತನ್ನ ಪ್ರಭಾವವನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಸುಖಾಸುಮ್ಮನೆ ಭಾರತದ ಸಾಗರ ಪ್ರದೇಶಗಳಲ್ಲಿ ತನ್ನ ನೌಕೆಗಳನ್ನು ಹಾಗೂ ಯುದ್ಧ ವಿಮಾನಗಳನ್ನು ಹಾರಿಸುವ ಮೂಲಕ ಹಲವಾರು ಬಾರಿ ಭಾರತವನ್ನು ಕೆಣಕಿದೆ. ಇತ್ತೀಚಿಗೆ ಕ್ರಿಸ್ಮಸ್ ಎಂಬ ದ್ವೀಪದ ಸುತ್ತಲೂ ಚೀನಾ ದೇಶದ ಹಡಗು ಹಲವಾರು ಸಮೀಕ್ಷೆಗಳನ್ನು ನಡೆಸಿದೆ ಎಂಬ ವಿಷಯ ಬಯಲಾಗಿದೆ. ಸಾಮಾನ್ಯವಾಗಿ ಈ ರೀತಿಯ ಸಂಶೋಧನಾ ಚಟುವಟಿಕೆಯನ್ನು ನೌಕಾ ಗುಪ್ತಚರ ಉದ್ದೇಶಗಳಿಗಾಗಿ ಹಾಗೂ ಪ್ರಮುಖವಾಗಿ ಜಲಂತರ್ಗಾಮಿ ಯುದ್ಧಕ್ಕಾಗಿ ನಡೆಸಲಾಗುತ್ತದೆ.

ಈ ರೀತಿಯ ಹಲವಾರು ಕಾರಣಗಳಿಂದ ಭಾರತ ದೇಶವು ಹಿಂದೂ ಮಹಾಸಾಗರದಲ್ಲಿ ಹೆಚ್ಚಿನ ಉಪ ಸ್ಥಿತಿಯನ್ನು ಕಾಯ್ದುಕೊಳ್ಳಲು ಹಲವಾರು ದಿನಗಳಿಂದ ಪ್ರಯತ್ನ ಪಡುತ್ತಿತ್ತು, ಆದರೆ ಭಾರತಕ್ಕೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ದ್ವೀಪಗಳಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ. ಹಿಂದೂ ಮಹಾಸಾಗರದ ಭದ್ರತೆಯ ವಿಚಾರದಲ್ಲಿ ಹಲವಾರು ಲೋಪದೋಷಗಳನ್ನು ಭಾರತ ಹಲವಾರು ವರ್ಷಗಳಿಂದ ಹೊಂದಿದೆ ಎಂಬ ಕಹಿಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಕೊನೆಗೂ ಈ ಭದ್ರತಾ ಲೋಪದೋಷಗಳನ್ನು ಸರಿಪಡಿಸುವ ಮಹಾತ್ವಕಾಂಕ್ಷೆಯ ಯೋಚನೆ ಇದೀಗ ನನಸಾಗುವ ಸಮಯ ಬಂದಾಗಿದೆ.

ಉನ್ನತ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ದೇಶದ ಕೋಕೋಸ್ ಅಥವಾ ಕೀಲಿಂಗ್ ದ್ವೀಪಗಳನ್ನು ಬಳಸಿಕೊಳ್ಳಲು ಆಸ್ಟ್ರೇಲಿಯಾ ದೇಶ ಅನುವು ಮಾಡಿ ಕೊಡಲು ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಅದೇ ನಡೆದಲ್ಲಿ ಭಾರತೀಯ ಮಿಲಿಟರಿ ನೆಲೆಯು ಈ ದ್ವೀಪಗಳಲ್ಲಿ ನೆಲೆಸಲಿದೆ. ಹಿಂದೂ ಮಹಾಸಾಗರ ಬಹಳ ವಿಸ್ತಾರವಾಗಿ ಇರುವ ಕಾರಣ ಯಾವುದೇ ಒಂದು ದೇಶ ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಕೋಕೊಸ್ ದ್ವೀಪಗಳಂತಹ ಆಯಕಟ್ಟಿನ ಪ್ರದೇಶಗಳು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ‘

ಪ್ರಮುಖವಾಗಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ದೇಶಗಳ ನಡುವೆ ಮುಖ್ಯ ಭೂಭಾಗದಲ್ಲಿ ದ್ವೀಪಗಳು ಇವೆ. ಇದರಿಂದ ಹಿಂದೂ ಮಹಾಸಾಗರದಲ್ಲಿ ಭಾರತವು ತನ್ನ ಉಪಸ್ಥಿತಿಯನ್ನು ಬಹಳ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ದ್ವೀಪಗಳು ಇಂಡೋನೇಷಿಯಾ, ಸುಂದಾ, ಲಾಂಬೋಕ್ ಹಾಗೂ ಬೊಂಬೈ ವಾಟರ್ ಜಲಸಂಧಿ ಗಳಿಗೆ ಬಹಳ ಹತ್ತಿರವಾಗಿದೆ. ಇದರಿಂದ ಹಿಂದೂ ಮಹಾಸಾಗರದ ಮೇಲೆ ಭಾರತದ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ,ಹಾಗೂ ಚೀನಾ ದೇಶದ ಮೇಲೆ ಹದ್ದಿನ ಕಣ್ಣು ಇಡಲು ಬಹಳ ಸಹಕಾರಿಯಾಗಲಿದೆ.