ನಿಜಕ್ಕೂ ಗ್ರೇಟ್: ದೇಶಭಕ್ತಿ ಮೆರೆದ ವೀರಯೋಧ ಶರ್ಮ ರವರ ಪತ್ನಿ ! ಅಂತ್ಯಕ್ರಿಯೆಯ ವೇಳೆ ಸರಕಾರಕ್ಕೆ ಹೊಸ ಮನವಿ ಮುಂದಿಟ್ಟು ಹೇಳಿದ್ದೇನು ಗೊತ್ತಾ?

ನಿಜಕ್ಕೂ ಗ್ರೇಟ್: ದೇಶಭಕ್ತಿ ಮೆರೆದ ವೀರಯೋಧ ಶರ್ಮ ರವರ ಪತ್ನಿ ! ಅಂತ್ಯಕ್ರಿಯೆಯ ವೇಳೆ ಸರಕಾರಕ್ಕೆ ಹೊಸ ಮನವಿ ಮುಂದಿಟ್ಟು ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಡೀ ದೇಶವೇ ಕೊರೊನ ಲಾಕ್ ಡೌನ್ ನಿಂದ ಮನೆಯಲ್ಲಿ ಲಾಕ್ಡೌನ್ ಆಗಿದ್ದರೂ ಕೂಡ ಗಡಿಯಲ್ಲಿ ನಮ್ಮ ಸೈನಿಕರು ಯಾವುದೇ ಬಿಡುವಿಲ್ಲದೆ ನಮ್ಮನ್ನು ರಕ್ಷಿಸುವ ಕೆಲಸ ಹಾಗೂ ತಾಯ್ನಾಡಿನ ಸೇವೆಯಲ್ಲಿ ನಿರತರಾಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಇದೇ ಸಮಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆಯಬಾರದ ಕಹಿ ಘಟನೆ ನಡೆದು ಹೋಗಿತ್ತು, ರಾಷ್ಟ್ರೀಯ ರೈಫಲ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಶರ್ಮರವರು ಜಮ್ಮು ಹಾಗೂ ಕಾಶ್ಮೀರದ ಕುಪ್ಪಾರ ಜಿಲ್ಲೆಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದರು. ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶರ್ಮರವರಿಗೆ ಅಂತಿಮ ನಮನ ಸಲ್ಲಿಸಲಾಯಿತು, ಇದೇ ಸಮಯದಲ್ಲಿ ಮಾತನಾಡಿದ ಶರ್ಮಾರವರ ಪತ್ನಿ ದೇಶ ಪ್ರೇಮ ಮೆರೆದು ಸರ್ಕಾರದ ಮುಂದೆ ಹೊಸ ಮನವಿ ಇಟ್ಟಿದ್ದಾರೆ.

ಇದೇ ಸಮಯದಲ್ಲಿ ಮಾತನಾಡಿದ ಶರ್ಮ ರವರ ಪತ್ನಿ ಸರ್ಕಾರ ನನಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಬೇಕು, ಹೌದು, ನಿಜ ನನಗೆ ವಯಸ್ಸಾಗಿದೆ, ಆದರೆ ಒಂದು ವೇಳೆ ನನ್ನ ವಯಸ್ಸು ಸೇನೆಗೆ ಸೇರುವುದನ್ನು ತಡೆದರೇ ಪರವಾಗಿಲ್ಲ ನನಗೆ 11 ವರ್ಷದ ಮಗಳಿದ್ದಾಳೆ ಅವಳನ್ನು ಖಂಡಿತ ಸೇನೆಗೆ ಸೇರಿಸುತ್ತೇನೆ, ಯಾವುದೇ ಕಾರಣಕ್ಕೂ ಅಂಜುವ ಪ್ರಶ್ನೆಯೇ ಇಲ್ಲ ಹಾಗೂ ನಾನು ಸ್ವಯಂ ಪ್ರೇರಿತವಾಗಿ ಸೇನೆ ಸೇರಲು ಬಯಸುತ್ತಿರುವ ಕಾರಣ ಕೇಂದ್ರದ ಸಚಿವಾಲಯ ನನಗೆ ಅನುಮತಿ ನೀಡಿದರೇ ನಾನು ಸೇನೆಯ ಸಮವಸ್ತ್ರದಲ್ಲಿ ಇರುತ್ತೇನೆ ಎಂದು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಇಂತಹ ಕಠಿಣ ಪರಿಸ್ಥಿಯಲ್ಲಿಯೂ, ಈ ರೀತಿಯ ದೇಶ ಭಕ್ತಿ ಮೆರೆದ ಈ ಕುಟುಂಬಕ್ಕೆ ಇಡೀ ದೇಶವೇ ಸಲ್ಯೂಟ್ ಹೊಡೆಯಬೇಕು. ಜೈ ಹಿಂದ್