ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡ ಘೋಷಿಸಿದ ಗಂಭೀರ್ ! 3 ಕನ್ನಡಿಗರು, ಕನ್ನಡಿಗನೇ ಕ್ಯಾಪ್ಟನ್, ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ?

ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ತಂಡ ಘೋಷಿಸಿದ ಗಂಭೀರ್ ! 3 ಕನ್ನಡಿಗರು, ಕನ್ನಡಿಗನೇ ಕ್ಯಾಪ್ಟನ್, ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾಗಿರುವ ಗೌತಮ್ ಗಂಭೀರ್ ಅವರು ಹಲವಾರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಎಂ ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ರವರ ಜೊತೆಯಲ್ಲಿ ಬ್ಯಾಟಿಂಗ್ ನಡೆಸಿರುವ ಗೌತಮ್ ಗಂಭೀರ್ ಅವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಟೆಸ್ಟ್ ತಂಡವನ್ನು ಘೋಷಿಸಿದ್ದಾರೆ.

ಈ ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಿರುವ ಗೌತಮ್ ಗಂಭೀರ್ ಅವರು ಅದರಲ್ಲಿ ಒಬ್ಬರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಉಳಿದಂತೆ ಯಾರೆಲ್ಲರೂ ಆಯ್ಕೆಯಾಗಿದ್ದಾರೆ ಎಂಬುದನ್ನು ತಿಳಿಯಲು ಸಂಪೂರ್ಣ ಓದಿ.

ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುನಿಲ್ ಗವಾಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ರವರನ್ನು ಆರಂಭಿಕರಾಗಿ ಆಯ್ಕೆ ಮಾಡಿರುವ ಗೌತಮ್ ಗಂಭೀರ್ ರವರು, ವೀರೇಂದ್ರ ಸೆಹ್ವಾಗ್ ರವರು ಟೆಸ್ಟ್ ಕ್ರಿಕೆಟ್ ನಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ,
ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕರ ಸ್ಥಾನ ಬಹಳ ಮುಖ್ಯ, ಈ ಸ್ಥಾನವನ್ನು ತುಂಬಲು ಸೆಹ್ವಾಗ್ ಸೂಕ್ತ ವ್ಯಕ್ತಿ ಎಂದಿದ್ದಾರೆ.

ಉಳಿದಂತೆ ಮೂರನೇ ಕ್ರಮಾಂಕಕ್ಕೆ ಮರು ಆಲೋಚನೆ ಮಾಡದೇ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡುತ್ತಿದ್ದೇನೆ. ತದ ನಂತರದ ಸ್ಥಾನದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸೂಕ್ತ ಆಟಗಾರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಆಗಿ ಕಪಿಲ್ ದೇವ್ ರವರನ್ನು ಆಯ್ಕೆ ಮಾಡಿದ್ದಾರೆ.

ಇನ್ನು ಇಲ್ಲಿಯವರೆಗೂ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟ್ ಕೀಪರ್ ಎಂಎಸ್ ಧೋನಿ ರವರನ್ನು ಈ ತಂಡದಲ್ಲಿ ಆಯ್ಕೆ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿರುವ ಗೌತಮ್ ಗಂಭೀರ್ ಅವರು ವಿಕೆಟ್ ಕೀಪರ್ ಸ್ಥಾನವನ್ನು ಎಂಎಸ್ ಧೋನಿ ರವರಿಗೆ ನೀಡಿದ್ದಾರೆ. ಸ್ಪಿನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅನಿಲ್ ಕುಂಬ್ಳೆ ಅವರು ಸ್ಪಿನ್ ಬೌಲರ್ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ ಹಾಗೂ ತಂಡದ ನಾಯಕನ ಜವಾಬ್ದಾರಿಯನ್ನು ಇವರಿಗೆ ನೀಡುವುದಾಗಿ ತಿಳಿಸಿದ್ದಾರೆ. ಇವರ ಜೊತೆ ಹರ್ಭಜನ್ ಸಿಂಗ್ ರವರು ಕೂಡ ಸ್ಥಾನ ಪಡೆದು ಕೊಂಡಿದ್ದಾರೆ.

ಇನ್ನು ಉಳಿದ ಇಬ್ಬರು ಫಾಸ್ಟ್ ಬೌಲರ್ ಗಳ ಸ್ಥಾನವನ್ನು ಜಹೀರ್ ಖಾನ್ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೆ ನೀಡಿರುವ ಗೌತಮ್ ಗಂಭೀರ್ ಅವರು ಇನ್ನೂ ಅನೇಕ ಲೆಜೆಂಡರಿ ಆಟಗಾರರಿದ್ದಾರೆ, ಆದರೆ ಪ್ರತಿಯೊಂದು ಕ್ರಮಾಂಕದಲ್ಲಿಯು ಆಯ್ಕೆ ನಡೆಸಿ, ಸಮತೋಲನದಿಂದ ಕೂಡಿರುವ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಹೇಳುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ತಂಡ ಈ ಕೆಳಗಿನಂತಿದ್ದು ಈ ತಂಡದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

ಗೌತಮ್ ಗಂಭೀರ್ ರವರ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡ: ಸುನಿಲ್ ಗವಾಸ್ಕರ್, ವೀರೇಂದ್ರ ಸೆಹವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಧೋನಿ (WK), ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ (ನಾಯಕ), ಜಹೀರ್ ಖಾನ್, ಜವಾಗಲ್ ಶ್ರೀನಾಥ್