ಭಾರತ, ಆಸ್ಟ್ರೇಲಿಯಾ ಆಟಗಾರರನ್ನು ಸೇರಿಸಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ರಚನೆ ಮಾಡಿದ ವಾರ್ನರ್ ! ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ??

ಭಾರತ, ಆಸ್ಟ್ರೇಲಿಯಾ ಆಟಗಾರರನ್ನು ಸೇರಿಸಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ರಚನೆ ಮಾಡಿದ ವಾರ್ನರ್ ! ಆಯ್ಕೆಯಾದ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಲಾಕ್ ಡೌನ್ ನಿಂದ ವಿಶ್ವದ ಯಾವುದೇ ಮೂಲೆಯಲ್ಲಿಯೂ ಕೂಡ ಕ್ರೀಡೆಗಳು ನಡೆಯುತ್ತಿಲ್ಲ. ಆಟಗಾರರು ಮನೆಯಲ್ಲಿಯೇ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇದೀಗ ಕ್ರಿಕ್ ಬಜ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹರ್ಷ ಭೋಗ್ಲೆ ರವರ ಜೊತೆ ಮಾತನಾಡಿರುವ ಡೇವಿಡ್ ವಾರ್ನರ್ ಅವರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದ್ದಾರೆ. ಇಲ್ಲಿ ಕೇವಲ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನು ಮಾತ್ರ ಗಣನೆಗೆ ತೆಗೆದು ಕೊಳ್ಳುವಂತೆ ಹರ್ಷ ಭೋಗ್ಲೆ ರವರು ಡೇವಿಡ್ ವಾರ್ನರ್ ಅವರ ಬಳಿ ಮನವಿ ಮಾಡಿದ್ದರು.

ಈ ತಂಡದಲ್ಲಿ ಬರೋಬ್ಬರಿ ಎಂಟು ಭಾರತೀಯ ಆಟಗಾರರು ಇದ್ದು ಕೇವಲ ಮೂವರು ಆಸ್ಟ್ರೇಲಿಯನ್ನರು ಸ್ಥಾನ ಪಡೆದಿದ್ದಾರೆ. ಈ ತಂಡದಲ್ಲಿ ಯುವರಾಜ್ ಸಿಂಗ್ ಸೇರಿದಂತೆ ಇನ್ನು ಹಲವಾರು ಆಟಗಾರರು ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ತಂಡ ಈ ಕೆಳಗಿನಂತಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ. ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಗ್ಲೆನ್ ಮ್ಯಾಕ್ಸ್ ವೆಲ್, ಎಂ.ಎಸ್. ಧೋನಿ (WK), ಆಶಿಶ್ ನೆಹ್ರಾ, ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್, ಯುಜೇಂದ್ರ ಚಾಹಲ್ / ಕುಲದೀಪ್ ಯಾದವ್.