ಹೊರಬಿತ್ತು ‘ಮಹಾ’ ಹಗರಣ ! ಮಿತ್ರ ಪಕ್ಷಕ್ಕಾಗಿ ಕಾನೂನನ್ನ ಬದಲಾಯಿಸಿ ಉದ್ಧವ್ ಠಾಕ್ರೆ ಮಾಡಿದ್ದೇನು ಗೊತ್ತಾ??

ಹೊರಬಿತ್ತು ‘ಮಹಾ’ ಹಗರಣ ! ಮಿತ್ರ ಪಕ್ಷಕ್ಕಾಗಿ ಕಾನೂನನ್ನ ಬದಲಾಯಿಸಿ ಉದ್ಧವ್ ಠಾಕ್ರೆ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೆ ಇದೀಗ ಬಿಜೆಪಿ ಪಕ್ಷದ ಸಂಖ್ಯೆ ತೊಳೆದುಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಶಿವಸೇನಾ ಪಕ್ಷವು ಮಿತ್ರಪಕ್ಷವಾದ ಎನ್ಸಿಪಿ ಪಕ್ಷವನ್ನು ಮೆಚ್ಚಿಸಲು ಕಾನೂನನ್ನೇ ಬದಲಾಯಿಸಿದ ಘಟನೆ ನಡೆದಿದೆ.

ಹಿಂದಿನ ಬಾರಿ ಅಧಿಕಾರದಲ್ಲಿದ್ದ ದೇವೇಂದ್ರ ಫಡ್ನವಿಸ್ ರವರು ಯಾವುದೇ ಅಧಿಕಾರದಲ್ಲಿ ಇರುವ ರಾಜಕೀಯ ನಾಯಕರ ಹೆಸರಿನಲ್ಲಿ ನೊಂದಣಿಯಾಗಿರುವ ಟ್ರಸ್ಟಿಗೆ ಯಾವುದೇ ಸರ್ಕಾರಿ ಜಮೀನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಾರದು ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಆದರೆ ಇದೀಗ ಮಿತ್ರಪಕ್ಷದ ಮನವೊಲಿಸುವುದು ಕ್ಕಾಗಿ ಉದ್ಧವ್ ಠಾಕ್ರೆ ರವರು ಹಿಂದಿನ ಸರ್ಕಾರದ ಕಾನೂನನ್ನು ಮುರಿದಿದ್ದು, ಎನ್ಸಿಪಿ ಪಕ್ಷದ ಪ್ರಭಾವಿತ ನಾಯಕನ ಹೆಸರಿನಲ್ಲಿ ನೊಂದಾಯಿತ ವಾಗಿರುವ ಟ್ರಸ್ಟಿಗೆ ನೂರಾರು ಎಕರೆ ಭೂಮಿಯನ್ನು ರೂಪಾಯಿಗಳ ಲೆಕ್ಕದಲ್ಲಿ ಮಾರಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಅಬಕಾರಿ ಸಚಿವ ದಿಲೀಪ್ ವಾಲ್ಸೆ-ಪಾಟೀಲ್, ಹಣಕಾಸು ಸಚಿವ ಜಯಂತ್ ಪಾಟೀಲ್ (ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ) ಮತ್ತು ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ (ಕಾಂಗ್ರೆಸ್) ಬೋರ್ಡ್ ಆಫ್ ಟ್ರಸ್ಟಿಗಳು ಮತ್ತು ಇತರ ಇಬ್ಬರು ಮಂತ್ರಿಗಳಾದ ರಾಜೇಶ್ ಟೊಪೆ (ಎನ್‌ಸಿಪಿ) ಮತ್ತು ಸತೇಜ್ ಪಾಟೀಲ್ (ಕಾಂಗ್ರೆಸ್) ಈ ಟ್ರಸ್ಟಿನ ಆಡಳಿತ ಮಂಡಳಿಯಲ್ಲಿದ್ದಾರೆ. ಇನ್ನು 10 ಕೋಟಿಗೂ ಹೆಚ್ಚು ಬೆಲೆ ಬಾಳುವ ಭೂಮಿಯನ್ನು ಒಂದು ಚದರಕ್ಕೆ ಒಂದು ರೂಪಾಯಿಯಂತೆ 51.33 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ಕೇವಲ 50000 ರೂಪಾಯಿಗಳಿಗೆ ನೀಡಿ ಆದೇಶ ಹೊರಡಿಸಿದೆ.