ಮಗನ ನಾಮಕರಣ ಮಾಡಿ ಹೆಸರಿನ ಅರ್ಥ ತಿಳಿಸಿದ ಮಜಾ ಟಾಕೀಸ್ ರಾಣಿ ! ವಿಶೇಷವಾದ ಹೆಸರಿನ ಅರ್ಥವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲಿ ರಾಣಿ ಎಂಬ ಪಾತ್ರದಿಂದ ಕಿರುತೆರೆ ಜನರ ಮನಗೆದ್ದಿದ್ದ ಶ್ವೇತ ಚಂಗಪ್ಪ ರವರು ಇದೀಗ ತಮ್ಮ ಮಗನಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ.

ಕೊಡಗು ಜಿಲ್ಲೆಯ ಇಗ್ಗುಟ್ಟಪ್ಪ ದೇವಸ್ಥಾನದಲ್ಲಿ ನಾಮಕರಣ ಶಾಸ್ತ್ರವನ್ನು ತಮ್ಮ ಕುಟುಂಬದವರ ಜೊತೆ ನೆರವೇರಿಸಿ ರುವ ಶ್ವೇತ ಚಂಗಪ್ಪ ನವರು ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡು ಹೆಸರು ಬಹಿರಂಗ ಪಡಿಸುತ್ತಿದ್ದಂತೆ ಅಭಿಮಾನಿಗಳು ಜಿಯಾನ್ ಅಯ್ಯಪ್ಪ ಎಂದರೇ ಅರ್ಥವೇನು ಎಂದು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತ ಚಂಗಪ್ಪ ರವರು ಜಿಯಾನ್ ಎಂದರೇ ಸದಾ ಸಂತೋಷವಾಗಿರುವವರು ಹಾಗೂ ಸಂತೋಷವನ್ನು ಎಲ್ಲರಿಗೂ ಹರಡುವವರು ಎಂದು ತಿಳಿಸಿದ್ದಾರೆ. ಇನ್ನು ಅಯ್ಯಪ್ಪ ಎಂಬುದು ಶ್ವೇತ ಚಂಗಪ್ಪ ಹಾಗೂ ಅವರ ಪತಿಯ ಸರ್ ನೇಮ್ ಆಗಿದೆ. ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಬರೆದು ಕೊಂಡಿರುವ ಶ್ವೇತ ಚಂಗಪ್ಪ ರವರು ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ತಮ್ಮ ಕುಟುಂಬ ಸಮೇತ ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಪುಟ್ಟ ಮಗನಿಗೆ ಕೊಡಗು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು, ಈ ಫೋಟೋಗಳು ಬಾರಿ ವೈರಲ್ ಆಗಿದ್ದವು.

Facebook Comments

Post Author: Ravi Yadav