ರಾಹುಲ್ ಪರ ನಿಂತು ತಂಡದ ಮ್ಯಾನೇಜ್ಮೆಂಟ್ ಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಗಂಭೀರ್ ! ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಧ್ವನಿ ಎತ್ತಿ ಹೇಳಿದ್ದೇನು ಗೊತ್ತಾ?

ರಾಹುಲ್ ಪರ ನಿಂತು ತಂಡದ ಮ್ಯಾನೇಜ್ಮೆಂಟ್ ಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಗಂಭೀರ್ ! ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಧ್ವನಿ ಎತ್ತಿ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಎಲ್ಲಿ ನೋಡಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ರಾಹುಲ್ ರವರದ್ದೇ ಸುದ್ದಿ. ರಾಹುಲ್ ರವರ ಆಟದ ಕುರಿತು ಹಲವಾರು ಜನ ತಮ್ಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ.

ಒಂದು ಕಾಲದಲ್ಲಿ ಯಾವ ಕ್ರಮಾಂಕದಲ್ಲಿ ಆಡಬೇಕು ಎಂದರು ತಮ್ಮದೇ ಆದ ಜವಾಬ್ದಾರಿಯನ್ನು ಹೊತ್ತು ಕೊಂಡು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಎದುರಾಳಿಗೆ ಅಡ್ಡಗೋಡೆ ಯಾಗಿ ನಿಲ್ಲುತ್ತಿದ್ದ ರಾಹುಲ್ ದ್ರಾವಿಡ್ ರವರಂತೆ ಇದೀಗ ಯಾವ ಸ್ಥಾನದಲ್ಲಿ ಬೇಕಾದರೂ ತಾನು ಆಡಿ ಉತ್ತಮ ಪ್ರದರ್ಶನ ನೀಡಬಲ್ಲೆನು ಎಂಬುದನ್ನು ಕೆಎಲ್ ರಾಹುಲ್ ರವರು ಸಾಬೀತು ಮಾಡಿದ್ದಾರೆ. ಅಷ್ಟೇ ಅಲ್ಲದೇ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಇವರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಅವರು ತಂಡದ ಮ್ಯಾನೇಜ್ಮೆಂಟ್ ಹಾಗೂ ವಿರಾಟ್ ಕೊಹ್ಲಿ ರವರ ನಿರ್ಧಾರದ ವಿರುದ್ಧ ಧ್ವನಿಯೆತ್ತಿದ್ದು ರಾಹುಲ್ ರವರ ಪರ ನಿಂತು ಈ ರೀತಿ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸಂಪೂರ್ಣ ಸರಣಿಗೆ ಹೇಗಿದ್ದರೂ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ, ಆದ ಕಾರಣ ರಾಹುಲ್ ರವರನ್ನು ಮಯಂಕ್ ಅಗರ್ವಲ್ ಅಥವಾ ಪೃಥ್ವಿ ಶಾ ಅವರೊಂದಿಗೆ ಆರಂಭಿಸುವಂತೆ ಮಾಡ ಬೇಕು. ಅಗ್ರ ಕ್ರಮಾಂಕದಲ್ಲಿ ಆಡಿದರೇ ರಾಹುಲ್ ರವರು ಇನ್ನೂ ಉತ್ತಮ ಪ್ರದರ್ಶನ ನೀಡುತ್ತಾರೆ. ಅಷ್ಟೇ ಅಲ್ಲದೇ ರಾಹುಲ್ ರವರು 50 ಓವರ್ ಗಳ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಬೇಡ. ಸಂಪೂರ್ಣವಾಗಿ ಬ್ಯಾಟಿಂಗ್ ಮೇಲೆ ಗಮನಹರಿಸಲಿ. ವಿಕೆಟ್ ಕೀಪರ್ ಆಪ್ಷನ್ ಆಗಿ ರಿಷಬ್ ಪಂತ್ ರವರನ್ನು ತಂಡಕ್ಕೆ ಆಯ್ಕೆ ಮಾಡಿ ಕೊಂಡು ತಂಡವನ್ನು ಮುನ್ನೆಡೆಸಿ ಎಂದು ಆಯ್ಕೆ ಸಮಿತಿ ಹಾಗೂ ವಿರಾಟ್ ಕೊಹ್ಲಿ ರವರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.