ಜಂಟಿ ಅಧಿವೇಶನದಲ್ಲಿ CAA ಕುರಿತು ಮಹತ್ವದ ಹೇಳಿಕೆ ನೀಡಿದ ರಾಷ್ಟ್ರಪತಿ !

ಜಂಟಿ ಅಧಿವೇಶನದಲ್ಲಿ CAA ಕುರಿತು ಮಹತ್ವದ ಹೇಳಿಕೆ ನೀಡಿದ ರಾಷ್ಟ್ರಪತಿ ! ಪ್ರತಿಯೊಬ್ಬರು ತಿಳಿದು ಕೊಳ್ಳಬೇಕಾದ ವಿಷಯ.

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇಂದು ಮತ್ತೊಂದು ಅಧಿವೇಶನ ಆರಂಭವಾಗಿದೆ. ನಾಳೆ ಬಜೆಟ್ ಕೂಡ ಮಂಡನೆಯಾಗಲಿದೆ.

ವಿರೋಧ ಪಕ್ಷಗಳು ಮೋದಿ ನೇತೃತ್ವದ ಸರ್ಕಾರದ ಮೇಲೆ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಬಾಣಗಳನ್ನು ಬಿಡಲು ಸಂಸತ್ತಿನಲ್ಲಿ ಸಿದ್ಧರಾಗುತ್ತಿರುವ ವೇಳೆಯಲ್ಲಿ ಇಂದು ಜಂಟಿ ಅಧಿವೇಶನದಲ್ಲಿ ಭಾರತದ ಮೊದಲ ಪ್ರಜೆ ರಾಷ್ಟ್ರಪತಿಗಳು ಮಾತನಾಡಿದ್ದಾರೆ. ಈ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಮಾತನಾಡಿರುವ ರಾಷ್ಟ್ರಪತಿಗಳು, ಬಾರಿ ಮಹತ್ವದ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಹೌದು, ಇದೀಗ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ಮಾತನಾಡಿ, ಭಾರತ ಹಾಗೂ ಪಾಕಿಸ್ತಾನ ದೇಶಗಳು ವಿಭಜನೆಯ ಸಂದರ್ಭದಲ್ಲಿ ಹಲವಾರು ಮಹತ್ವದ ಮಾತುಗಳನ್ನು ಗಾಂಧೀಜಿ ರವರು ಹೇಳಿದ್ದರು.

ಒಂದು ವೇಳೆ ದೇಶಗಳು ವಿಭಜನೆಯಾದ ಮೇಲೆ ಇತರ ದೇಶಗಳ ಅಲ್ಪ ಸಂಖ್ಯಾತರು ಮೂಲ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯವನ್ನು ಅರಸಿ ಬರಲು ಒಪ್ಪಿಕೊಂಡರೇ ಪ್ರತಿಯೊಬ್ಬ ಅಲ್ಪಸಂಖ್ಯಾತರಿಗೂ ಭಾರತೀಯ ಪೌರತ್ವವನ್ನು ಗೌರವಯುತವಾಗಿ ನೀಡಿ ಪ್ರತಿಯೊಬ್ಬರನ್ನು ಭಾರತೀಯ ಪ್ರಜೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಗಾಂಧೀಜಿ ಹೇಳಿಕೆ ನೀಡಿದ್ದರು. ಇದೀಗ ನರೇಂದ್ರ ಮೋದಿರವರ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆ ಯನ್ನು ಜಾರಿಗೊಳಿಸುವ ಮೂಲಕ ತಮ್ಮ ಮೂಲ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ ಗಾಂಧೀಜಿ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಎಂದು ಮೋದಿ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಮಾತನ್ನು ಕೇಳಿದ ಬಿಜೆಪಿ ಕಾರ್ಯಕರ್ತರು ಗಾಂಧೀಜಿ ಹೇಳಿದ ಮಾತನ್ನು ನೀವು ವಿರೋಧ ಮಾಡುತ್ತೀರಾ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ.