ಸಂಸತ್ತಿನಲ್ಲಿ ರಣ ಕಹಳೆ ಊದಲು ಸಿದ್ಧವಾದ ಮೋದಿ ಸರ್ಕಾರ ! ಮತ್ತಷ್ಟು ಎತ್ತರಕ್ಕೆ ಹೋಗಲಿದ್ದಾರಾ ನರೇಂದ್ರ ಮೋದಿ?? ಮಾಡುವುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಎರಡನೇ ಬಾರಿ ಅಧಿಕಾರಕ್ಕೆ ಏರಿದ ಮೇಲೆ ಬಹಳ ವೇಗವಾಗಿ ಎಲ್ಲಾ ಕಾರ್ಯಗಳನ್ನು ಮುಗಿಸಲು ಹಂಬಲ ಪಡುತ್ತಿದೆ.

ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಮಹತ್ವದ ಕಾಯ್ದೆಗಳು ಈಗಾಗಲೇ ಜಾರಿಯಾಗಿವೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ರಾಮ ಮಂದಿರ ಕೂಡ ನಿರ್ಮಾಣ ವಾಗಲಿದ್ದು ಕಳೆದ ಬಾರಿ ಸುಪ್ರೀಂ ಕೋರ್ಟ್ ತೀರ್ಪು ತಡವಾಗಿದ್ದ ಕಾರಣ ಈಡೇರಿಸಲಾಗದ ಈ ಬೇಡಿಕೆಯನ್ನು ಇದೀಗ ಆರಂಭ ಮಾಡಲಿದ್ದು ಮುಂದಿನ ಕೆಲವೇ ವರ್ಷಗಳಲ್ಲಿ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ರಾರಾಜಿಸಲಿದೆ. ಇದೀಗ ನೆನ್ನೆಯಿಂದ ಆರಂಭವಾಗಿರುವ ಸಮಾವೇಶದಲ್ಲಿ ಮೋದಿ ಸರ್ಕಾರ ತನ್ನ ಸ್ಪೀಡನ್ನು ಮತ್ತಷ್ಟು ಹೆಚ್ಚುಗೊಳಿಸಲು ನಿರ್ಧಾರ ಮಾಡಿದೆ. ಹೌದು ಈ ಬಾರಿ 31 ದಿನಗಳು ಈ ಸಂಸತ್ ಅಧಿವೇಶನ ನಡೆಯಲಿದ್ದು ಕೇಂದ್ರ ಸರ್ಕಾರ ಮತ್ತಷ್ಟು ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸಲಿದೆ.

ಅಧಿಕೃತ ಮೂಲಗಳ ಪ್ರಕಾರ ಮೋದಿ ನೇತೃತ್ವದ ಸರ್ಕಾರವು ಈ 31 ದಿನಗಳಲ್ಲಿ ಬರೋಬ್ಬರಿ 45 ಬಿಲ್ಗಳನ್ನು ಪಾಸ್ ಮಾಡಿಸಲು ನಿರ್ಧಾರ ಮಾಡಿದೆ. ಈ 45 ಬಿಲ್ ಗಳಲ್ಲಿ ಹಲವಾರು ಮಹತ್ವದ ಕಾಯ್ದೆಗಳು ಇವೆ ಎನ್ನಲಾಗುತ್ತಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಜನಸಂಖ್ಯಾ ನಿಯಂತ್ರಣ, ಏಕರೂಪ ನೀತಿ ಸಂಹಿತೆ ಕಾನೂನನ್ನು ಕೂಡ ಜಾರಿಗೆ ತರುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಬಿಜೆಪಿ ಪಕ್ಷದ ಅಧಿಕೃತ ಮೂಲಗಳಿಂದ ಯಾವುದೇ ಮಾಹಿತಿಗಳು ಇನ್ನು ಹೊರ ಬಿದ್ದಿಲ್ಲ. ಆದರೆ ಇಷ್ಟೊಂದು ಬಿಲ್ಗಳು ಪಾಸಾಗುವುದು ನೋಡಿದರೇ ಖಂಡಿತ ನರೇಂದ್ರ ಮೋದಿರವರು ಮತ್ತಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತರಲು ಪ್ಲಾನ್ ಮಾಡಿದಂತೆ ಕಾಣುತ್ತದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಅದೇ ನಡೆದು ಜನ ಸಂಖ್ಯಾ ನಿಯಂತ್ರಣ ಕಾನೂನು ಹಾಗೂ ಏಕ ರೂಪ ನೀತಿ ಸಂಹಿತೆ ಜಾರಿಗೊಂಡಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿನ ಶೇಕಡ ತೊಂಬತ್ತಕ್ಕೂ ಅಂಶಗಳು ಈಡೇರಿದಂತಾಗುತ್ತದೆ.

Post Author: Ravi Yadav