ಕುಂದಗೋಳದಲ್ಲಿ ಅನಾವರಣಗೊಂಡ ಮೋದಿ ಅಲೆ- ಡಿಕೆಶಿಗೆ ತಪ್ಪಲಿಲ್ಲ ಮೋದಿ ಕಾಟ

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದ ಮುಂದಿನ ರಾಜ್ಯ ಸರ್ಕಾರದ ಭವಿಷ್ಯದ ಚುನಾವಣೆ ಎಂದೇ ಬಿಂಬಿತವಾಗಿರುವ ಉಪಚುನಾವಣೆಯು ಭಾರಿ ಸದ್ದು ಮಾಡುತ್ತಿದೆ. ದೋಸ್ತಿ ಸರ್ಕಾರಗಳ ಸಂಖ್ಯಾಬಲವನ್ನು ಕಡಿಮೆ ಮಾಡಲು ಇನ್ನಿಲ್ಲದ ಪ್ರಯತ್ನ ಪಡುತ್ತಿರುವ ಬಿಜೆಪಿ ಪಕ್ಷಕ್ಕೆ ಕಳೆದು ಕೊಳ್ಳುವಂತಹ ಪರಿಸ್ಥಿತಿ ಇಲ್ಲವಾದರೂ, 2 ಕ್ಷೇತ್ರಗಳನ್ನು ಗೆದ್ದು ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಅಕಾಡಕ್ಕೆ ಬಲಿಷ್ಠ ಅಭ್ಯರ್ಥಿಗಳನ್ನು ಇಳಿಸಿದೆ. ಇತ್ತ ದೋಸ್ತಿ ಸರ್ಕಾರವು ಸಹ 2 ಕ್ಷೇತ್ರಗಳನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡು ಸಂಖ್ಯಾಬಲವನ್ನು ಮತ್ತೊಮ್ಮೆ ಗಟ್ಟಿಮಾಡಿಕೊಳ್ಳಲು ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟು ಹೋರಾಡುತ್ತಿದೆ.

ಪರಿಸ್ಥಿತಿ ಹೀಗಿರುವಾಗ ಡಿಕೆ ಶಿವಕುಮಾರ್ ರವರನ್ನು ಉಸ್ತುವಾರಿಯನ್ನಾಗಿ ತೆಗೆದುಹಾಕಿದ ಬಳಿಕವೂ ಸಹ, ತನ್ನ ಸ್ನೇಹಿತ ದಿವಂಗತ ಮಾಜಿ ಶಾಸಕ ಶಿವಳ್ಳಿ ರವರಿಗಾಗಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕಾಣಿ ಹೂಡಿರುವ ಡಿಕೆ ಶಿವಕುಮಾರ್ ರವರು ಪ್ರಚಾರ ನಡೆಸುತ್ತಿದ್ದ ವೇಳೆಯಲ್ಲಿ ಕುಂದಗೋಳ ಕ್ಷೇತ್ರದಲ್ಲಿ ನರೇಂದ್ರ ಮೋದಿ ರವರ ಅಲೆ ಅನಾವರಣಗೊಂಡಿದೆ. ಎಲ್ಲಿ ಹೋದರೂ ನರೇಂದ್ರ ಮೋದಿರವರ ಕಾಟ ಮಾತ್ರ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಿಗೆ ತಪ್ಪುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇದು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯ ಆದರೂ ಸಹ ನರೇಂದ್ರ ಮೋದಿ ಅವರ ಅಲೆ ಎಷ್ಟರ ಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಇದಾಗಿದ್ದು ಡಿಕೆ ಶಿವಕುಮಾರ್ ಅವರಿಗೆ ಮತ್ತೊಮ್ಮೆ ಭಾರಿ ಮುಜುಗರ ಉಂಟಾದ ಘಟನೆ ಕುಂದಗೋಳ ಕ್ಷೇತ್ರದಲ್ಲಿ ಇಂದು ನಡೆದಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರೋಧ ಪಕ್ಷದ ನಾಯಕರು ಕಂಡ ತಕ್ಷಣ ಇಡೀ ದೇಶದಲ್ಲಿ ನರೇಂದ್ರ ಮೋದಿ ರವರ ಕಾರ್ಯಕ್ಷಮತೆಯಿಂದ ಆಕರ್ಷಿತರಾಗಿ ಇರುವ ಜನರು ಮೋದಿ ಮೋದಿ ಎಂಬ ಘೋಷಣೆಗಳ ಮೂಲಕ ಸ್ವಾಗತ ನೀಡುತ್ತಾರೆ.

ಇಂದು ಅದೇ ರೀತಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರು ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಮೋದಿ ಮೋದಿ ಎಂಬ ಘೋಷಣೆಗಳು ಭಾರಿ ಸದ್ದು ಮಾಡಿದೆ. ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಟ್ರೆಂಡ್ ಇದೀಗ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಮುಂದುವರೆದಿದ್ದು ಡಿಕೆ ಶಿವಕುಮಾರ್ ಅವರಿಗೆ ಭಾರಿ ಮುಜುಗರ ಉಂಟಾದಂತಹ ಘಟನೆ ನಡೆದಿದೆ.

Post Author: Ravi Yadav