ರೊಚ್ಚಿಗೆದ್ದ ಸುಮಲತಾ ಬೆಂಬಲಿಗರು ! ಸುಮಲತಾ ರವರಿಗೆ ಒಂದು ನ್ಯಾಯ, ಜೆಡಿಎಸ್ ಗೆ ಮತ್ತೊಂದು ನ್ಯಾಯವೇ??

ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಈಗಾಗಲೇ ಮತಯಂತ್ರಗಳಲ್ಲಿ ದಾಖಲಾಗಿ ಭದ್ರವಾಗಿದೆ. ಇದೇ ತಿಂಗಳ 23ನೇ ತಾರೀಖಿನಂದು ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು ಸೋಲು ಗೆಲುವಿನ ಲೆಕ್ಕಾಚಾರ ಗಳು ಈಗಾಗಲೇ ಆರಂಭಗೊಂಡಿವೆ. ಪರಿಸ್ಥಿತಿ ಹೀಗಿರುವಾಗ ಸಾಕಷ್ಟು ಕುತೂಹಲ ಮೂಡಿಸಿರುವ ಮಂಡ್ಯ ಜಿಲ್ಲೆಯ ರಣ ಕಣ ಇಂದು ಮತ್ತೊಮ್ಮೆ ಸದ್ದು ಮಾಡಿತ್ತು, ಸುಮಲತಾ ರವರಿಗೆ ಮತ ನೀಡುತ್ತಿದ್ದೇನೆ ಎಂದು ಯೋಧನು ತಾನು ಮತ ಚಲಾಯಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿದ ಕಾರಣ ಯೋಧನ ಮತವನ್ನು ಅಸಿಂದು ಮಾಡಲಾಗಿತ್ತು.

ಈ ವಿಷಯ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇತ್ತ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಚುನಾವಣಾ ಆಯೋಗದ ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ , ಮತ್ತೊಂದೆಡೆ ಸುಮಲತಾ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದ ಬೆಂಬಲಿಗರು ಚುನಾವಣಾ ಆಯೋಗದ ನಿರ್ಧಾರ ಸರಿ ಇರಬಹುದು, ಕಾನೂನಾತ್ಮಕವಾಗಿ ಚುನಾವಣಾ ಆಯೋಗವು ಕ್ರಮವನ್ನು ತೆಗೆದುಕೊಂಡಿದೆ ಆದರೆ ಸುಮಲತಾ ರವರಿಗೆ ಅನ್ವಯವಾಗುವ ಕಾನೂನು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೂ ಅನ್ವಯವಾಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ ಯಾಕೆ ಗೊತ್ತಾ ಕೆಳಗಡೆ ಓದಿ!

ಹಾಸನ ಜಿಲ್ಲೆಯಲ್ಲಿ ಚುನಾವಣೆ ನಡೆಯುವ ಕೆಲವು ದಿನಗಳ ಮುಂದೆ ಯೋಧರು ಮತ ಚಲಾಯಿಸಿದ ಫೋಟೋ ಗಳು ಭಾರಿ ಸಂಖ್ಯೆಯಲ್ಲಿ ಹರಿದಾಡಿದೆ. ಅದರಲ್ಲಿ ಒಂದು ಮತ ಕುಮಾರಸ್ವಾಮಿ ರವರ ಸಹೋದರ ರೇವಣ್ಣ ರವರ ಪುತ್ರನಾಗಿರುವ ಪ್ರಜ್ವಲ್ ರೇವಣ್ಣ ರವರಿಗೆ ಚಲಾಯಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ನಾನು ಹಾಸನದ ಭವಿಷ್ಯಕ್ಕಾಗಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡುತ್ತಿದ್ದೇನೆ ಎಂದು ಯೋಧರ ಒಬ್ಬರು ಹೇಳಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ಚಲಾಯಿಸಿದ್ದಾರೆ ಎಂಬ ಪೋಸ್ಟ್ ಗಳು ಭಾರಿ ಸಂಖ್ಯೆಯಲ್ಲಿ ಹರಿದಾಡುತ್ತಿದ್ದವು.

ಇದೇ ವಿಷಯವನ್ನು ಇದೀಗ ಕೆದಕಿರುವ ಸುಮಲತಾ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದ ಬೆಂಬಲಿಗರು ಚುನಾವಣಾ ಆಯೋಗಕ್ಕೆ ಸುಮಲತ ರವರಿಗೆ ನೀಡಿದ ಮತ ಮಾತ್ರ ಕಾಣಸಿಗುತ್ತದೆ, ಅದೇ ರೀತಿ ಪ್ರಜ್ವಲ್ ರೇವಣ್ಣ ರವರಿಗೆ ನೀಡಿದ ಮತ ಕಾಣಿಸುತ್ತಿಲ್ಲ. ಚುನಾವಣಾ ಆಯೋಗವು ಕಾನೂನಾತ್ಮಕವಾಗಿ ಎಲ್ಲರಿಗೂ ಒಂದೇ ಕಾನೂನನ್ನು ಅನ್ವಯವಾಗುವಂತೆ ಮಾಡಬೇಕು. ಅದನ್ನು ಬಿಟ್ಟು ಯಾಕೆ ಈ ರೀತಿಯ ಬೇದಬಾವ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ವಿವರಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.

Post Author: Ravi Yadav