ಮತ್ತೊಮ್ಮೆ ಸುದ್ದಿ ಮಾಡಿದ ನಿಖಿಲ್ ಎಲ್ಲಿದಿಯಪ್ಪ ಟ್ರೋಲ್- ದೊಡ್ಡ ಗೌಡರನ್ನು ಎಳೆದು ತಂದ ಟ್ರೊಲ್ ಪೇಜ್ ಗಳು

ಕೆಲವೇ ಕೆಲವು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಜಾಗ್ವಾರ್ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ ಮಾತುಗಳು ಭಾರೀ ವೈರಲ್ ಆಗಿದ್ದವು. ಇಡೀ ದೇಶದೆಲ್ಲೇಡೇ ಕುಮಾರಸ್ವಾಮಿ ರವರ ಮಾತನ್ನು ಬಳಸಿಕೊಂಡು ಟ್ರೊಲ್ ಪೇಜ್ ಗಳು ಮನಬಂದಂತೆ ಟ್ರೋಲ್ ಮಾಡಿದ್ದರು. ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟ್ರೋಲ್ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡಿ ಟ್ವಿಟರ್ ಹಾಗೂ ಫೇಸ್ಬುಕ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು.

ಲೋಕಸಭಾ ಚುನಾವಣೆ ಮುಗಿದ ನಂತರ ನಿಖಿಲ್ ಎಲ್ಲಿದಿಯಪ್ಪ ಟ್ರೋಲ್ ಕೊಂಚಮಟ್ಟಿಗೆ ಸದ್ದು ಕಡಿಮೆ ಮಾಡಿತ್ತು. ಆದರೆ ಇದೀಗ ಮತ್ತೊಮ್ಮೆ ನಿಖಿಲ ಎಲ್ಲಿದಿಯಪ್ಪ ಟ್ರೋಲ್ ಸದ್ದು ಮಾಡುತ್ತಿದ್ದು, ನೆಟ್ಟಿಗರಿಗೆ ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿ ಅವರು ಆಹಾರವಾಗಿದ್ದಾರೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಟ್ರಾಲ್ ಪೇಜ್ ಗಳು ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ನಿಖಿಲ್ ಎಲ್ಲಿದಿಯಪ್ಪ ಟ್ರೋಲ್ ಮತ್ತೊಮ್ಮೆ ಬಾರಿ ಸದ್ದು ಮಾಡುತ್ತಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಒಮ್ಮೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆ ಮುಗಿದ ನಂತರ ಕುಮಾರಸ್ವಾಮಿ ರವರು ಹಾಗೂ ಕುಟುಂಬ ರಿಲ್ಯಾಕ್ಸ್ ಮೂಡ್ ನಲ್ಲಿ ಇದೆ. ಕೆಲವೇ ಕೆಲವು ದಿನಗಳ ಹಿಂದಷ್ಟೇ ರೆಸಾರ್ಟ್ ನಿಂದ ವಾಪಸಾಗಿದ್ದ ಕುಮಾರಸ್ವಾಮಿ ರವರು ಇಂದು ಮತ್ತೊಮ್ಮೆ ರೆಸಾರ್ಟ್ ಗೆ ತೆರಳಿದ್ದಾರೆ. ಇನ್ನು ಮಾಜಿ ಪ್ರಧಾನಿ ಮಂತ್ರಿಗಳ ಆಗಿರುವ ದೇವೇಗೌಡ ರವರು ಉಡುಪಿಯ ರೆಸಾರ್ಟ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕುಮಾರಸ್ವಾಮಿ ರವರು ಸಹ ಇಂದು ಮಡಿಕೇರಿಯ ರೆಸಾರ್ಟ್ ಕಡೆಗೆ ಮುಖ ಮಾಡಿದ್ದಾರೆ, ಈಗಾಗಲೇ ಕುಮಾರಸ್ವಾಮಿರವರಿಗಾಗಿ ಸ್ವಿಮ್ಮಿಂಗ್ ಪೂಲ್ ಹೊಂದಿರುವ ಐದು ರೂಮುಗಳನ್ನು ಬುಕ್ ಮಾಡಲಾಗಿದೆ.

ಹೀಗಿರುವಾಗ ಇದನ್ನೇ ಆಹಾರವನ್ನಾಗಿ ಮಾಡಿಕೊಂಡ ನೆಟ್ಟಿಗರು, ಅಪ್ಪ ಮಡಿಕೇರಿಯ ರೆಸಾರ್ಟ್ ಕಡೆಗೆ, ತಾತ ಉಡುಪಿಯ ರೆಸಾರ್ಟ್ ನಲ್ಲಿ, ಇದೆಲ್ಲದರ ನಡುವೆ ಸಾಮಾನ್ಯ ಜನರಿಗೆ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ನಿಖಿಲ್ ಎಲ್ಲಿದಿಯಪ್ಪ. ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ನಿಖಿಲ್ ಎಲ್ಲಿದಿಯಪ್ಪ ಟ್ರೋಲ್ ಗೆ ಮತ್ತೊಮ್ಮೆ ಜೀವ ಬಂದಂತಾಗಿದೆ.

Post Author: Ravi Yadav