ಜೆಡಿಎಸ್ ಮುಗಿಸಲು ಹೋದ ಖರ್ಗೆಗೆ ಕೈ ಕೊಟ್ಟ ಜೆಡಿಎಸ್ ಮುಖಂಡರು- ಖರ್ಗೆಗೆ ತೀವ್ರ ಮುಖಭಂಗ

ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದು ಕೊಂಡಿರುವ ಮಲ್ಲಿಕಾರ್ಜುನ ಖರ್ಗೆಯವರು ಈ ಬಾರಿ ಸೋಲನ್ನು ಕಾಣುವ ಎಲ್ಲಾ ಸೂಚನೆಗಳು ಈಗಾಗಲೇ ಹೊರಬಂದಿವೆ. ತಮ್ಮದೇ ಪಕ್ಷದ ಬಲಾಢ್ಯ ನಾಯಕ ಬಿಜೆಪಿ ಪಕ್ಷ ಸೇರಿಕೊಂಡು ಮಲ್ಲಿಕಾರ್ಜುನ ಖರ್ಗೆ ರವರನ್ನು ಸೋಲಿಸುವ ಎಲ್ಲಾ ಸೂಚನೆಗಳನ್ನು ಈಗಾಗಲೇ ನೀಡಿದ್ದಾರೆ. ಹಲವು ಸಮುದಾಯಗಳ ಬೆಂಬಲವನ್ನು ಹೊಂದಿರುವ ಉಮೇಶ್ ಜಾದವ್ ರವರು ಸೋಲಿಲ್ಲದ ಸರದಾರನನ್ನು ಆತನ ಕೊನೆಯ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುವುದು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತ ತನ್ನ ಗೆಲುವಿಗಾಗಿ ಕಲಬುರ್ಗಿ ಜೆಡಿಎಸ್ ಅನ್ನು ಸಂಪೂರ್ಣವಾಗಿ ಮುಗಿಸಿ ಆಪರೇಷನ್ ಹಸ್ತ ಎಂಬ ಯೋಜನೆಯ ಅಡಿಯಲ್ಲಿ ಎಲ್ಲಾ ಜೆಡಿಎಸ್ ನ ಅಲ್ಪಸಂಖ್ಯಾತ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಅಲ್ಪಸ್ವಲ್ಪ ಉಳಿದ ಮುಖಂಡರ ಬೆಂಬಲವನ್ನು ಪಡೆದು ಚುನಾವಣೆಯನ್ನು ಎದುರಿಸಲು ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಪ್ರಯತ್ನವನ್ನು ನಡೆಸಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ರವರ ಈ ಪ್ರಯತ್ನಕ್ಕೆ ಭಾರಿ ಹಿನ್ನಡೆಯುಂಟಾಗಿದ್ದು, ತನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕೊಂಡಿದ್ದ ಜೆಡಿಎಸ್ ಮುಖಂಡರು ಸಹ ಈಗ ತಿರುಗಿ ಬಿದ್ದಿದ್ದಾರೆ.

ಸಾಮಾನ್ಯವಾಗಿ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಇರುವ ಕಾರಣ ಕಲಬುರ್ಗಿಯಲ್ಲಿ ಉಳಿದ ಅಲ್ಪಸಂಖ್ಯಾತ ಜೆಡಿಎಸ್ ಮುಖಂಡರು ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ನಿಲ್ಲುವುದು ಖಚಿತವಾಗಿತ್ತು. ಆದರೆ ಮಲ್ಲಿಕಾರ್ಜುನ ಖರ್ಗೆ ರವರು ಕೇವಲ ಬೆಂಬಲ ಪಡೆದು ಚುನಾವಣೆಯನ್ನು ಎದುರಿಸಲು ಸಿದ್ದವಾಗದೆ ನೇರವಾಗಿ ಎಲ್ಲ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಕಲಬುರ್ಗಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಅಂತ್ಯಗೊಳಿಸಲು ಪ್ರಯತ್ನಪಟ್ಟಿದ್ದಾರೆ.

ಈ ನೀತಿಯನ್ನು ಅರ್ಥ ಮಾಡಿಕೊಂಡ ಜೆಡಿಎಸ್ ಮುಖಂಡರು ಸ್ಥಳೀಯವಾಗಿ ನಿಮ್ಮ ಪಕ್ಷ ಸೇರಿದರೆ ನಮ್ಮ ಗತಿ ಮುಂದೇನು ಎಂದು ನೇರವಾಗಿ ಪ್ರಶ್ನಿಸಿ ಆಪರೇಷನ್ ಹಸ್ತ ಮುಂದುವರಿಸದೆ ಇದ್ದರೆ ಒಳಿತು ಇಲ್ಲವಾದರೆ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಹಸ್ತ ನೀತಿಯ ಅಡಿಯಲ್ಲಿ ಹಲವಾರು ಜೆಡಿಎಸ್ ಮುಖಂಡರು ಕೋಪಗೊಂಡು ಆಂತರಿಕವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ದಿನೇ ದಿನೇ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಕಗ್ಗಂಟಾಗುತ್ತಿದೆ.

Post Author: Ravi Yadav