ಬಡ ಮಕ್ಕಳಿಗೆ ಶಾಕ್ ನೀಡಿದ ಕುಮಾರಣ್ಣ, ಮತದಾನದ ಹಕ್ಕಿಲ್ಲ ಎಂದು ನಿರ್ಧಾರ ಕೈಗೊಂಡರೆ??

ಹೌದು ಮಕ್ಕಳಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ. 18 ವರ್ಷ ದವರೆಗೂ ಯಾರಿಗೂ ಮತದಾನ ಮಾಡುವ ಹಕ್ಕು ಇಲ್ಲ ಬಹುಶಃ ಇದೇ ಅಂಶವನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ರವರು ಬಡಮಕ್ಕಳಿಗೆ ಶಾಕ್ ನೀಡಿದ್ದಾರೆ ಹಾಗೂ ಹಲವಾರು ವಿದ್ಯಾರ್ಥಿಗಳ ಕನಸನ್ನು ನುಚ್ಚುನೂರು ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆರ್ ಟಿ ಇ ಎಂಬ ಯೋಜನೆಯ ಅಡಿಯಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಸೀಟು ಪಡೆದುಕೊಂಡೂ ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರು.

ಆದರೆ ಕುಮಾರಸ್ವಾಮಿ ರವರು ಈ ಯೋಜನೆಯ ಸೀಟುಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ಕೇವಲ 2400 ಸೀಟುಗಳನ್ನು ಮಾತ್ರ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಯೋಜನೆ ಅಡಿಯಲ್ಲಿ ನೀಡಲು ನಿರ್ಧರಿಸಿದ್ದಾರೆ. ರಾಜಧಾನಿ ಬೆಂಗಳೂರಿಗೆ 500 ಸೀಟುಗಳು ನೀಡಿ ಬೃಹತ್ ಸಾಧನೆ ಮಾಡಿದ್ದಾರೆ. ಈ ಮೂಲಕ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಓದಬೇಕು ಎಂದು ಕನಸು ಕಂಡುಕೊಂಡಿದ್ದ ಮಕ್ಕಳ ಕನಸಿಗೆ ತಣ್ಣೀರು ಎರಚಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇಂಜಿನಿಯರಿಂಗ್ ಕಾಲೇಜ್ ಶುಲ್ಕ ವನ್ನು ಹೆಚ್ಚು ಮಾಡಿದ್ದ ದೋಸ್ತಿಗಳ ಸರ್ಕಾರ ಇಂದು ಮಕ್ಕಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಂತೆ ಕಾಣುತ್ತಿದೆ.

Post Author: Ravi Yadav