ಬೆಂಗಳೂರು ದಕ್ಷಿಣದಿಂದ ಆರ್ ಎಸ್ ಎಸ್ ಕಟ್ಟಾಳು ಕಣಕ್ಕೆ !! ಯಾರು ಗೊತ್ತಾ??

ಬಿಜೆಪಿ ಪಕ್ಷದ ಭದ್ರ ಕೋಟೆ ಎನಿಸಿಕೊಂಡಿರುವ ಬೆಂಗಳೂರು ದಕ್ಷಿಣದಿಂದ ಯಾವ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಎಲ್ಲರೂ ಯೋಚನೆ ಮಾಡುತ್ತಿರುವ ಸಂದರ್ಭದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ದಿಟ್ಟ ಹೆಜ್ಜೆಯನ್ನು ಇಡುವ ಸಾಹಸಕ್ಕೆ ಕೈ ಹಾಕುವಂತೆ ಕಾಣುತ್ತಿದೆ. ಅನಂತ್ ಕುಮಾರ್ ರವರ ನಿಧನದ ನಂತರ ಅವರ ಪತ್ನಿ ಟಿಕೆಟ್ ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು. ಆದರೆ ಮೊದಲ ಪಟ್ಟಿಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಕಾಣಸಿಗಲಿಲ್ಲ.

ಇದರಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತ್ತು. ಇನ್ನು ಕೆಲವು ಮಾಹಿತಿಗಳ ಪ್ರಕಾರ ಭಾರತ ದೇಶದ ಹೆಮ್ಮೆಯ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ಸ್ಪರ್ಧಿಸಲಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿತ್ತು. ತದನಂತರ ಕನ್ನಡಿಗರಲ್ಲಿ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಲು ಸ್ವತಹ ನರೇಂದ್ರ ಮೋದಿರವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ಮಾತು ಕೇಳಿ ಬಂದಿತ್ತು, ಆದರೆ ಈಗ ಮತ್ತೊಂದು ಹೆಸರು ಕೇಳಿಬಂದಿದ್ದು, ಯಾರೂ ಊಹಿಸದ ರೀತಿಯಲ್ಲಿ ಆರ್ ಎಸ್ ಎಸ್ ಕಟ್ಟಾಳು ಬಿಎಲ್ ಸಂತೋಷ್ ರವರು ಕೇಳಿ ಬಂದಿದೆ.

ಇಷ್ಟು ದಿವಸ ತೆರೆಮರೆಯಲ್ಲಿ ನಿಂತು ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಹಾಗೂ ಆರೆಸ್ಸೆಸ್ ಸಂಸ್ಥೆಯನ್ನು ನಿಯಂತ್ರಣ ಮಾಡುತ್ತಿದ್ದ ಬಿಎಲ್ ಸಂತೋಷ್ ರವರು ಮೊದಲ ಬಾರಿಗೆ ಚುನಾವಣೆ ಅಕಾಡಕ್ಕೆ ಇಳಿಯುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ. ಇದೇ ಕಾರಣಕ್ಕಾಗಿ ಮೊದಲ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ ಎಂಬ ಮಾತು ಸಹ ಕೇಳಿ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಕೇಂದ್ರದ ವರಿಷ್ಠರು ಎರಡನೇ ಶಕ್ತಿಯನ್ನು ಸೃಷ್ಟಿಸಲು ಮುಂದಾಗಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದ್ದು, ರಾಜ್ಯ ಬಿಜೆಪಿಯಲ್ಲಿ ರಣತಂತ್ರವನ್ನು ರೂಪಿಸುವ ಮತ್ತೊಬ್ಬ ನಾಯಕ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಇನ್ನು ಬಿಎಲ್ ಸಂತೋಷ್ ರವರು ರಾಜಕೀಯದಲ್ಲಿ ಯಡಿಯೂರಪ್ಪನವರ ಜೊತೆ ಕೈಜೋಡಿಸಿ ರಣತಂತ್ರವನ್ನು ರೂಪಿಸಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ಬಾರಿ ರಣತಂತ್ರವನ್ನು ನಡೆಯುತ್ತಿರುವ ಬಿಜೆಪಿ ಪಕ್ಷದ ಹೈಕಮಾಂಡ್ ಕನಿಷ್ಠ 20 ಸೀಟುಗಳನ್ನು ಗೆಲ್ಲಲು ಟಾರ್ಗೆಟ್ ಮಾಡಿದೆ. ದೋಸ್ತಿಗಳ ಭಿನ್ನಮತಗಳ ಸಂಪೂರ್ಣ ಲಾಭವನ್ನು ಪಡೆಯಲು ನಿರ್ಧರಿಸಿರುವ ಬಿಜೆಪಿ ಪಕ್ಷವು ಮುಂದೆ ಯಾವ ರೀತಿಯ ಹೆಜ್ಜೆ ಇಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Post Author: Ravi Yadav