ಮೋದಿ ರವರ ಪರವಾಗಿ ದ್ವನಿ ಎತ್ತಿದ ತೆಲುಗು ಹಿರಿಯ ನಟ: ಕಾರಣವೇನು ಗೊತ್ತಾ??

ಮೋದಿ ರವರ ಪರವಾಗಿ ದ್ವನಿ ಎತ್ತಿದ ತೆಲುಗು ಹಿರಿಯ ನಟ: ಕಾರಣವೇನು ಗೊತ್ತಾ??

0

2019ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿದಿನವೂ ರಾಜಕೀಯ ಹಲವಾರು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾನ್ಯವಾಗಿ ಚುನಾವಣೆ ಹತ್ತಿರ ಬಂದಾಗ ಹಲವಾರು ಸೆಲೆಬ್ರಿಟಿಗಳು ತಮಗೆ ಸೂಕ್ತ ಎನಿಸಿದ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಾರೆ, ಇಲ್ಲವಾದಲ್ಲಿ ಅವರ ಪರವಾಗಿ ಧ್ವನಿಯೆತ್ತಿ ಅವರು ಮಾಡಿದ ಕಾರ್ಯಗಳನ್ನು ಸಾಮಾನ್ಯ ಜನತೆಗೆ ತಿಳಿಸಿಕೊಡುತ್ತಾರೆ .

ಅಂತಹದ್ದೇ ಘಟನೆ ಈಗ ಆಂಧ್ರ ಪ್ರದೇಶದಲ್ಲಿ ನಡೆದಿದೆ ಇದರಿಂದ ನಾಯ್ಡು ರವರಿಗೆ ಮತ್ತಷ್ಟು ಮುಜುಗರವಾಗಿದ್ದು, ಬಿಜೆಪಿ ಪರ ಮಾತನಾಡಿದರೆ ಕಾರ್ಯಕರ್ತರನ್ನು ಮುಗಿಸುತ್ತೇನೆ ಎಂದಿದ್ದ ನಾಯ್ಡು ರವರಿಗೆ ಈಗ ಮುಟ್ಟಿ ಕೊಂಡು ನೋಡಿಕೊಳ್ಳುವಂತೆ ತೆಲುಗು ಹಿರಿಯ ನಟರಾದ ತನಿಕೆಲ್ಲ ಭರಣಿ ರವರು ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮೋದಿ ರವರ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದ ನಾಗಾರ್ಜುನ ರವರ ನಂತರ ಈಗ ತನಿಕೆಲ್ಲ ಭರಣಿ ರವರು ಮೋದಿ ರವರ ಪರ ಧ್ವನಿ ಎತ್ತಿರುವುದು ಆಂಧ್ರಪ್ರದೇಶದ ನಾಯ್ಡು ರವರಿಗೆ ಇನ್ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಷ್ಟಕ್ಕೂ ತನಿಕೆಲ್ಲ ಭರಣಿ ರವರು ಏನು ಹೇಳಿದ್ದಾರೆ ಗೊತ್ತಾ??

ಸದಾ ರಾಜಕೀಯದಿಂದ ದೂರ ಉಳಿಯುವ ತನಿಕೆಲ್ಲ ಭರಣಿ ರವರು ಇದ್ದಕ್ಕಿದ್ದ ಹಾಗೆಯೇ ಮೋದಿ ರವರ ಪರ ಧ್ವನಿ ಎತ್ತಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮೊದಲಿನಿಂದಲೂ ನಾನೊಬ್ಬ ಹಿಂದೂ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯ ಆಚರಿಸಲು ಮನಸ್ಸಿನಲ್ಲಿ ಏನೋ ಭಯ ಕಾಡುತ್ತಿತ್ತು, ಎಂಬಂತೆ ಮಾತನಾಡಿರುವ ತನಿಕೆಲ್ಲ ಭರಣಿ ರವರ ಮಾತುಗಳನ್ನು ನೀವೇ ಕೇಳಿ.

ಇಂದು ನಾನು ಧೈರ್ಯವಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಿಸಲು, ನಾನೊಬ್ಬ ಹಿಂದೂ ಎಂಬ ಪದವನ್ನು ಉಚ್ಚರಿಸಲು ನನಗೆ ಧೈರ್ಯ ನೀಡಿದವರು ಭಾರತದ ಪ್ರಧಾನ ಸೇವಕ ರಾಗಿರುವ ನರೇಂದ್ರ ಮೋದಿ. ಪ್ರತಿಯೊಬ್ಬ ಭಾರತೀಯ ಕೂಡ ಬಿಜೆಪಿ ಪಕ್ಷ, ಬಿಜೆಪಿ ಪಕ್ಷದ ಸಂಸ್ಥಾಪಕ ಹಾಗೂ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಮೋದಿ ರವರ ಪರ ಧ್ವನಿ ಎತ್ತಿದ್ದಾರೆ.

ತನಿಕೆಲ್ಲ ಭರಣಿ ರವರ ಈ ಮಾತುಗಳು ಆಂಧ್ರಪ್ರದೇಶದಲ್ಲಿ ಎಲ್ಲಿ ನೋಡಿದರೂ ಸುದ್ದಿಯಾಗುತ್ತವೆ, ಸದಾ ರಾಜಕೀಯದಿಂದ ದೂರ ಉಳಿಯುವವರು ಯಾಕೆ ಇದ್ದಕ್ಕಿದ್ದ ಹಾಗೆ ನರೇಂದ್ರ ಮೋದಿಯವರ ಪರ ಧ್ವನಿ ಎತ್ತಿದ್ದಾರೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ ಆದರೆ ಇಷ್ಟು ದಿವಸ ಸುಮ್ಮನಿದ್ದ ಇವರು ಇದ್ದಕ್ಕಿದ್ದಂತೆ ಮಾತನಾಡಲು ಬಹುಶಹ ನರೇಂದ್ರ ಮೋದಿ ಅವರು ನಿಜವಾಗಿಯೂ ಆ ಕೆಲಸ ಮಾಡಿರಬೇಕು ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ.

ಧರ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ರಕ್ಷಿಸಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬುದು ಖಚಿತವಾದಂತೆ ಕಾಣುತ್ತಿದೆ. ಮೋದಿ ಅವರ ಹೀಗೆ ಮುಂದುವರಿದಲ್ಲಿ ಖಚಿತವಾಗಿಯೂ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಕೇಸರಿ ಭಾವುಟಗಳು ಎದ್ದು ಕಾಣಲಿದೆ, ನರೇಂದ್ರ ಮೋದಿ ಅವರು ಬಹಳ ಸುಲಭವಾಗಿ ಅಧಿಕಾರದ ಗದ್ದುಗೆ ಏರಿಲಿದ್ದಾರೆ.