ಸ್ಮೃತಿ ಮುಂದೆ ಸೋಲೊಪ್ಪಿಕೊಂಡ ರಾಹುಲ್: ಅಮೇಥಿ ಬಿಟ್ಟು ದೌಡು
ಸ್ಮೃತಿ ಮುಂದೆ ಸೋಲೊಪ್ಪಿಕೊಂಡ ರಾಹುಲ್: ಅಮೇಥಿ ಬಿಟ್ಟು ದೌಡು
2019ರ ಲೋಕಸಭಾ ಚುನಾವಣೆ ಭಾರೀ ಕುತೂಹಲವನ್ನು ಕೆರಳಿಸುತ್ತದೆ ಪ್ರತಿದಿನವೂ ಒಂದಲ್ಲ ಒಂದು ಹೊಸ ವಿಷಯಗಳಿಂದ ಸದ್ದು ಮಾಡುತ್ತಿರುವ ಲೋಕಸಭಾ ಚುನಾವಣೆ ಯಲ್ಲಿಇಂದು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ರಾಹುಲ್ ರವರ ಸರದಿ. ರಾಹುಲ್ ರವರು ಅಮೇಥಿ ಬಿಟ್ಟು ಬೇರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ರವರಿಗೆ ಕೊನೆ ಕ್ಷಣದಲ್ಲಿ ಬಿಜೆಪಿ ಪಕ್ಷದಿಂದ ಬುಲಾವ ಸಿಕ್ಕಿತ್ತು, ಕೊನೆ ಕ್ಷಣದಲ್ಲಿ ಮೋಡಿ ಮಾಡಿದ ಸ್ಮೃತಿ ಇರಾನಿ ರವರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಾಗಿರುವ ಅಮೇಥಿಯಲ್ಲಿ ಸೋಲು ಕಂಡರೂ ಕಾಂಗ್ರೆಸ್ ಪಕ್ಷಕ್ಕೆ ಕಠಿಣ ಸ್ಪರ್ಧೆಯೊಡ್ಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಈ ಬಾರಿ ಅಮೇಥಿಯಲ್ಲಿ ಸ್ಮತಿ ಇರಾನಿ ರವರು ಸ್ಪರ್ಧಿಸುವುದು ಖಚಿತವಾಗಿದೆ ಹಲವಾರು ತಿಂಗಳುಗಳಿಂದ ಲೋಕಸಭಾ ಚುನಾವಣೆಯ ತಯಾರಿಯನ್ನು ಮಾಡಿಕೊಳ್ಳುತ್ತಿರುವ ಸೃತಿ ಇರಾನಿ ರವರು ಹೇಗಾದರೂ ಮಾಡಿ ರಾಹುಲ್ ಗಾಂಧಿ ಅವರನ್ನು ಮಣ್ಣು ಮುಕ್ಕಿಸಲು ಸಂಚು ಹಾಕಿ ಕಾದು ಕುಳಿತಿದ್ದಾರೆ. ಆದರೆ ಈತನ ಮಧ್ಯೆ ರಾಹುಲ್ ಗಾಂಧಿ ರವರು ಅಮೇಥಿಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.
ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ನಡುವಿನ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಎರಡೇ ಎರಡು ಲೋಕಸಭಾ ಚುನಾವಣೆ ಸೀಟುಗಳು ದೊರಕಿವೆ. ಆ ಎರಡು ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿವೆ, ಒಂದು ರಾಯ್ ಬರೇಲಿ ಹಾಗೂ ಇನ್ನೊಂದು ಅಮೇಥಿ. ಆದರೆ ಅಮೇಥಿ ಭದ್ರಕೋಟೆ ಯಾಗಿದ್ದರೂ ರಾಹುಲ್ ಗಾಂಧಿ ಅವರು ಇಲ್ಲಿಂದ ಸ್ಪರ್ಧಿಸುವುದಿಲ್ಲ ಎಂಬ ಮಾತು ಮೂಲಗಳಿಂದ ತಿಳಿದುಬಂದಿದೆ.
ರಾಜಕೀಯ ಪಂಡಿತರ ಪ್ರಕಾರ ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆಯಿಂದ ರಾಹುಲ್ ಗಾಂಧಿ ರವರು ಸಮೀಕ್ಷೆಯಲ್ಲಿ ಸೋಲನ್ನು ಕಾಣಲಿದ್ದಾರೆ ಎಂಬ ಅಂಶ ಬಯಲಾಗಿದೆ ಆದ ಕಾರಣದಿಂದ ಅಮೇಥಿ ಬಿಟ್ಟು ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಯಾವುದಾದರೂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇಡೀ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ರವರ ಹವಾ ಜೋರಾಗಿದ್ದು ಇದರ ಜೊತೆ ಸ್ಮೃತಿ ಇರಾನಿ ರವರ ವರ್ಚಸ್ಸು ಸೇರಿ ಕೊಂಡಲ್ಲಿ ರಾಹುಲ್ ಗಾಂಧಿಯವರಿಗೆ ಸೋಲು ಖಚಿತ ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು ಆದರೆ ಸೋಲನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು ಹಲವಾರು ವರ್ಷಗಳಿಂದ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಅವರನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿದೆ.