ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಿದ್ದುಗೆ ಗುದ್ದು ನೀಡಿದ ದೇಶಭಕ್ತ ಗಂಭೀರ್

0

ಹಲವಾರು ತಿಂಗಳುಗಳ ಕಾಲದಿಂದಲೂ ಕಾಂಗ್ರೆಸ್ ನಾಯಕರಾಗಿರುವ ಸಿದು ರವರು ಪಾಕಿಸ್ತಾನಕ್ಕೆ ಹೋಗಿ ಬಂದ ವಿಷಯ ಭಾರಿ ಸದ್ದು ಮಾಡುತ್ತಿದೆ. ಸದಾ ಒಂದಲ್ಲ ಒಂದು ವಿವಾದಗಳು ಮೈಮೇಲೆ ಎಳೆದುಕೊಳ್ಳುವ ಕಾಂಗ್ರೆಸ್ ನಾಯಕರಾಗಿರುವ ಸಿದು ರವರು ಪಾಕಿಸ್ತಾನಕ್ಕೆ ಹೋಗಿ ಬಂದು ಮತ್ತೊಂದು ದೊಡ್ಡ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದರು.

ಈ ನಡೆ ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿತ್ತು ಆದರೆ ಇದುವರೆಗೂ ತಾವು ಮಾಡಿದ ತಪ್ಪನ್ನು ಎಲ್ಲಿಯೂ ಒಪ್ಪಿಕೊಳ್ಳಲಿಲ್ಲ ಬದಲಾಗಿ ಪಾಕಿಸ್ತಾನಕ್ಕೆ ತನ್ನ ಭೇಟಿಯನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದ್ದರು. ಈ ನಡೆಯು ಸಹ ಹಲವಾರು ವಿವಾದಕ್ಕೆ ಕಾರಣವಾಗಿತ್ತು. ಈಗ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಿದ್ದು ರವರನ್ನು ದೇಶಭಕ್ತ ಗೌತಮ್ ಗಂಭೀರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲಿನಿಂದಲೂ ದೇಶ ಎಂದ ತಕ್ಷಣ ಮೊದಲ ಸಾಲಿನಲ್ಲಿ ಕಂಡುಬರುವ ಗೌತಮ್ ಗಂಭೀರ್ ಅವರು ಹಲವಾರು ಬಾರಿ ದೇಶದ ಪರ ಧ್ವನಿ ಎತ್ತಿದ್ದಾರೆ. ಯಾರಾದರೂ ಅಖಂಡ ಭಾರತಕ್ಕೆ ಧಕ್ಕೆ ತರುವಂಥ ಕೆಲಸ ಮಾಡಿದರೆ ಗೌತಮ್ ಗಂಭೀರ್ ಅವರು ತರಾಟೆಗೆ ತೆಗೆದುಕೊಳ್ಳುವುದರಲ್ಲಿಯೇ ಪ್ರಸಿದ್ಧರು. ಅದೇ ರೀತಿ ಈಗ ಕಾಂಗ್ರೆಸ್ ನಾಯಕ ಸಿದು ರವರಿಗೆ ಗೌತಮ್ ಗಂಭೀರ್ ಅವರು ಸರಿಯಾಗಿ ಗುದ್ದು ನೀಡಿದ್ದಾರೆ.

ಹೌದು ಪಾಕಿಸ್ತಾನಕ್ಕೆ ತನ್ನ ಭೇಟಿಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು ಅವರಿಗೆ ಗೌತಮ್ ಗಂಭೀರ್ ಅವರು ನೀವು ಭೇಟಿ ನೀಡಿರುವುದು ತಪ್ಪು ಎಂದು ಎಲ್ಲರೂ ಹೇಳುತ್ತಿದ್ದಾರೆ ಆದರೂ ನೀವು ನಿಮ್ಮ ವೈಯುಕ್ತಿಕ ಕಾರಣ ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದ್ದೀರಾ.

ನೀವು ಭಾರತ ದೇಶದ ಪ್ರಜೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ನಿಮ್ಮ ವೈಯಯುಕ್ತ ಸ್ನೇಹಕ್ಕಿಂತ ದೇಶದ ಜನರ ಭಾವನೆ ದೊಡ್ಡದು, ನಾವು ಸುಖಾಸುಮ್ಮನೆ ಪಾಕಿಸ್ತಾನವನ್ನು ವಿರೋಧಿಸುವುದಿಲ್ಲ. ಆದರೆ ನೀವು ಹೇಗೆ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳುತ್ತ ಬಂದಿದ್ದೀರಾ ಎಂಬುದು ನನಗೆ ಅರ್ಥವಾಗುತ್ತಿಲ್ಲ,ಈ ಭೇಟಿ ನಿಮ್ಮ ಜೀವನಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಬದಲಾಗಿ ದೇಶದ ಜನರ ಭಾವನೆಗೆ ಸಂಬಂಧಿಸಿದ್ದು ಆದಕಾರಣ ತಕ್ಷಣವೇ ನೀವು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ನೀವು ಕ್ಷಮೆ ಕೇಳದೆ ಇದ್ದಲ್ಲಿ ಅದು ದೇಶದ ಜನರ ಭಾವನೆಗೆ ಧಕ್ಕೆ ತಂದಂತಾಗುತ್ತದೆ, ಈ ಕೂಡಲೇ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.