ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ ಫೈವ್ ಆಟಗಾರರು

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ ಫೈವ್ ಆಟಗಾರರು

0

ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನವೂ ಒಂದಲ್ಲ ಒಂದು ದಾಖಲೆ ನಿರ್ಮಾಣವಾಗುತ್ತಾ ಬಂದಿದೆ. ಕ್ರಿಕೆಟ್ ಎಂಬ ಲೋಕದಲ್ಲಿ ಖ್ಯಾತಿ ಗಳಿಸಿದ ದಾಖಲೆಗಳಿದಂತೆಯೇ ಕುಖ್ಯಾತಿಗೆ ಪಾತ್ರವಾದ ಕೆಲವು ದಾಖಲೆಗಳು ಇವೆ. ಅದರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಆಟಗಾರರು ಸಹ ಕುಖ್ಯಾತಿಯ ದಾಖಲೆಗೆ ಪಾತ್ರರಾಗಿದ್ದಾರೆ.

ಅಷ್ಟಕ್ಕೂ ಐವರು ಆಟಗಾರರು ಯಾರು ಗೊತ್ತಾ?

5: ಶ್ರೀಲಂಕಾದ ಸ್ಪಿನ್ ದಿಗ್ಗಜ ರಾಗಿರುವ ಮುತ್ತಯ್ಯ ಮುರಳೀಧರನ್ ಅವರು ಹಲವಾರು ಬ್ಯಾಟ್ಸ್ಮನ್ಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿದ್ದಾರೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಸಾವಿರಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಇವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 25 ಬಾರಿ ಸೊನ್ನೆ ಸುತ್ತಿದ್ದಾರೆ.

4: ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ಮಹೇಲಾ ಜಯವರ್ಧನೆ ರವರು ಇದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 12 ಸಾವಿರ ರನ್ ಕಲೆಹಾಕಿರುವ ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 28 ಬಾರಿ ಸೊನ್ನೆ ಸುತ್ತಿದ್ದಾರೆ.

3: ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ರಾಷ್ಟ್ರದ ಮಾಜಿ ನಾಯಕ ಹಾಗೂ ವಿಶ್ವವೇ ಕಂಡ ಅತಿ ಶ್ರೇಷ್ಠ ಸ್ವಿಂಗ್ ಬೌಲರ್ ಗಳಲ್ಲಿ ಒಬ್ಬರಾಗಿರುವ ವಾಸಿಮ್ ಅಕ್ರಮ್ ಕಾಣಸಿಗುತ್ತಾರೆ ಏಕದಿನ ಕ್ರಿಕೆಟ್ ನಲ್ಲಿ 502 ವಿಕೆಟ್ ಪಡೆದಿರುವ ಇವರು ಬೌಲಿಂಗ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಂತೆಯೇ 28 ಸೊನ್ನೆಸುತ್ತಿರುವ ಇವರು ಕುಖ್ಯಾತಿ ದಾಖಲೆಯನ್ನು ನಿರ್ಮಿಸಿಕೊಂಡಿದ್ದಾರೆ.

2. ಇನ್ನು ವಿಶ್ವದ ಸ್ಫೋಟಕ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿರುವ ಶಾಹಿದ್ ಅಫ್ರಿದಿ ರವರು ಏಕದಿನ ಕ್ರಿಕೆಟ್ ನಲ್ಲಿ ಎಂಟು ಸಾವಿರಕ್ಕೂ ಹೆಚ್ಚು ರನ್ ಸಿಡಿಸಿ ರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇಷ್ಟೇ ಅಲ್ಲದೆ ಬೌಲಿಂಗ್ ನಲ್ಲಿಯೂ ಸಹ ಮ್ಯಾಜಿಕ್ ಮಾಡಿರುವ ಇವರು 395 ವಿಕೆಟ್ಗಳನ್ನು ಕಬಳಿಸಿದ್ದಾರೆ ಆದರೆ ಸಿಕ್ಸರ್ ಮೂಲಕ ರನ್ ಗಳಿಸುವ ಭರದಲ್ಲಿ ಬರೋಬ್ಬರಿ 30 ಬಾರಿ ಸೊನ್ನೆ ಸುತ್ತಿದ್ದಾರೆ.

1. ಇನ್ನು ಶ್ರೀಲಂಕಾದ ಅತಿ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಮುಂಚೂಣಿಯ ಸಾಲಿನಲ್ಲಿ ನಿಲ್ಲುವ 13000 ರನ್ ಗಳಿಸಿರುವ ಸನತ್ ಜಯಸೂರ್ಯ ರವರು ಈ ಅಪ ಖ್ಯಾತಿ ಪಡೆದ ದಾಖಲೆಯಲ್ಲಿ ಮೊದಲಿಗರಾಗಿ ಕಾಣಸಿಗುತ್ತಾರೆ ಹೌದು ನಿಮಗೆ ಆಶ್ಚರ್ಯ ವಾಗಿರಬಹುದು ಆದರೆ ಇದು ಸತ್ಯ .ಜಯಸೂರ್ಯ ರವರು ಇದುವರೆಗೂ ಏಕದಿನ ಕ್ರಿಕೆಟ್ ನಲ್ಲಿ 34 ಬಾರಿ ಸೊನ್ನೆ ಸುತ್ತಿದ್ದಾರೆ.