ಬಿಗ್ ಬ್ರೇಕಿಂಗ್: ಚುನಾವಣಾ ಕಣದಿಂದ ಹಿಂದೆ ಸರಿದ ದೇವೇಗೌಡ, ಸೋಲುವ ಭೀತಿಯೇ??

ಮಾಜಿ ಪ್ರಧಾನಿಗಳ ಆಗಿರುವ ಎಚ್ ಡಿ ದೇವೇಗೌಡರು ಇತ್ತೀಚೆಗಷ್ಟೇ ತಮ್ಮ ಮೊಮ್ಮಗನಿಗಾಗಿ ತಮ್ಮ ಸ್ವಂತ ಜಿಲ್ಲೆ ಹಾಸನ ಕ್ಷೇತ್ರವನ್ನು ಬಿಟ್ಟು ಕೊಡಲು ನಿರ್ಧರಿಸಿದರು. ತದನಂತರ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸದಾನಂದಗೌಡರನ್ನು ಎದುರುಹಾಕಿಕೊಳ್ಳಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಆದರೆ ಎಚ್ ಡಿ ದೇವೇಗೌಡ ರವರು ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಹಾಗೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ ಇಲ್ಲಿಗೆ ಮಾಜಿ ಪ್ರಧಾನಿಗಳ ರಾಜಕೀಯ ಅಂತ್ಯವಾಯಿತು.

ಅಷ್ಟಕ್ಕೂ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣವೇನು ಗೊತ್ತಾ??

ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಹೆಚ್ ಡಿ ದೇವೇಗೌಡ ರವರು ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಸಂಸತ್ತಿಗೆ ಸುಮ್ಮನೆ ಹೋಗಿ ಬರುವುದು ಕಾಲಹರಣ, ಜನಗಣಮನ ಬಂದಾಗ ನಿಲ್ಲುವುದಷ್ಟೇ ಆಗಿದೆ ಬೇರೆ ಯಾವುದೂ ಸಾಧ್ಯವಿಲ್ಲ ಎಂಬ ಮಾತುಗಳನ್ನು ಆಡಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ನಿರ್ಧಾರಕ್ಕೆ ಬೇರೆಯ ಕಾರಣಗಳು ದೊರಕಿವೆ ! ಏನು ಗೊತ್ತಾ??

ಜೆಡಿಎಸ್ ಪಕ್ಷದ ಭದ್ರಕೋಟೆ ಯಾಗಿರುವ ಹಾಸನ ಜಿಲ್ಲೆಯಲ್ಲಿ ದೇವೇಗೌಡರು ಸ್ಪರ್ಧಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು ಆದರೆ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಗಾಗಿ ಹಲವಾರು ದಿನಗಳಿಂದ ಪಟ್ಟು ಹಿಡಿದು ಕೂತಿದ್ದರು, ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಪಕ್ಷದ ವಿರುದ್ಧ ಸೂಟ್ಕೇಸ್ ಪಕ್ಷ ಎಂದೆಲ್ಲ ಆರೋಪಗಳನ್ನು ಮಾಡಿದ್ದರು ಒಂದು ವೇಳೆ ಈ ಬಾರಿಯೂ ನೀಡದೇ ಇದ್ದರೆ ಖಚಿತವಾಗಿಯೂ ದಂಗೆ ಏಳುವ ಸೂಚನೆಗಳು ಕಾಣುತ್ತಿತ್ತು.

ಆದ ಕಾರಣ ಕ್ಕಾಗಿಯೇ ಪ್ರಜ್ವಲ್ ರೇವಣ್ಣ ರವರಿಗೆ ಹಾಸನವನ್ನು ಬಿಟ್ಟುಕೊಡಲು ಮಾಜಿ ಪ್ರಧಾನಿಗಳು ನಿರ್ಧರಿಸಿದ್ದಾರೆ ಎಂಬ ಊಹಾ ಪೋಹಗಳು ಕೇಳಿಬರುತ್ತಿವೆ ಅಷ್ಟೇ ಅಲ್ಲದೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದ ದೇವೇಗೌಡರು ಇದ್ದಕ್ಕಿದ್ದ ಹಾಗೆ ಹಿಂದೆ ಸರಿಯಲು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ರವರ ವರ್ಚಸ್ಸು ಕಾರಣವೆಂಬುದು ಕೇಳಿ ಬರುತ್ತಿವೆ.

ದೇವೇಗೌಡರು ಹೇಳುವ ಪ್ರಕಾರ ಇದ್ಯಾವುದೂ ಕಾರಣವಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹಲವಾರು ಊಹಾಪೋಹದ ಮಾತುಗಳು ಕೇಳಿಬರುತ್ತಿವೆ.