ಕೊನೆಗೂ ಕಪ್ ಗೆದ್ದ ಬೆಂಗಳೂರು: ಕಪ್ ನಮ್ದೇ

ಕೊನೆಗೂ ಕಪ್ ಗೆದ್ದ ಬೆಂಗಳೂರು: ಕಪ್ ನಮ್ದೇ

ಭಾರೀ ಕುತೂಹಲ ಕೆರಳಿಸಿದ್ದ ಮದಗಜಗಳ ಕಾದಾಟ ದಂತೆ ತೀವ್ರ ಜಿದ್ದಾಜಿದ್ದಿ ನಿಂದ ಕೂಡಿದ ಪ್ರೊ ಕಬಡ್ಡಿ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡವೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರೊ ಕಬ್ಬಡಿ ಲೀಗ್ ನ ಫೈನಲ್ ನಲ್ಲಿ ಗುಜರಾತ್ ತಂಡವನ್ನು 5 ಅಂಕಗಳಿಂದ ಸೋಲಿಸಿ ಮೊದಲ ಬಾರಿಗೆ ಬೆಂಗಳೂರು ತಂಡದ ಕಪ್ ಎತ್ತಿ ಹಿಡಿದಿದೆ.

ಮೊದಲ ಸುತ್ತಿನಲ್ಲಿ 8 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ತಂಡವೂ ಪವನ್ ಕುಮಾರ್ ರವರ ಅದ್ಭುತ ಆಟದಿಂದ ಗೆಲುವು ಕಂಡಿತು. ತಂಡ ಗಳಿಸಿದ 38 ಅಂಕಗಳಲ್ಲಿ ಪವನ್ ಕುಮಾರ್ ರವರು 25 ಅಂಕಗಳನ್ನು ಒಬ್ಬರೇ ಗಳಿಸಿದರು.

ಸತತ ಐದು ವೃತ್ತಿಗಳಿಂದ ಪ್ರಶಸ್ತಿಯ ಕನಸು ಕಾಣುತ್ತಿದ್ದ ಬೆಂಗಳೂರು ಬುಲ್ಸ್ ಕಂಡವು ಕೊನೆಗೂ ಪ್ರಶಸ್ತಿಯನ್ನು ಎತ್ತಿಹಿಡಿದಿದೆ ಏಕಾಂಗಿ ಹೋರಾಟ ನಡೆಸಿದ ಪವನ್ ರವರಿಗೆ ಬಾರಿ ಪ್ರಶಂಸೆಗಳು ವ್ಯಕ್ತವಾಗಿವೆ.

ಇಲ್ಲಿಗೆ ಬೆಂಗಳೂರಿನ ಯಾವ ತಂಡವು ಕಪ್ ಗೆಲ್ಲುವುದಿಲ್ಲ ಎಂಬ ಕಳಂಕದಿಂದ ಹೊರಬಂದಿದೆ ಮುಂದೆ ಐಪಿಎಲ್ ಹಾಗೂ ಫುಟ್ಬಾಲ್ ನಲ್ಲಿ ಗೆಲ್ಲುವುದೇ ಬೆಂಗಳೂರು ತಂಡಗಳ ಗುರಿಯಾಗ ಬೇಕಿದೆ.

ಒಂದು ವೇಳೆ ಬೆಂಗಳೂರಿನ ಕ್ರಿಕೆಟ್ ತಂಡವು ಸಹ ಕಪಿಗೆ ದಿದ್ದಲ್ಲಿ ಬೆಂಗಳೂರಿನ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದಂತಾಗುತ್ತದೆ. ಒಟ್ಟಿನಲ್ಲಿ ಈಗ ರೋಹಿತ್ ಕುಮಾರ್ ಅವರ ನೇತೃತ್ವದ ಬೆಂಗಳೂರು ಬುಲ್ಸ್ ತಂಡ ಗೆದ್ದಿರುವುದು ಎಲ್ಲೆಡೆ ಸಂತಸ ಮನೆ ಮಾಡುವಂತೆ ಮಾಡಿದೆ.