ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಜೆಪಿ ಮೈತ್ರಿಯನ್ನು ತೊರೆದುಕೊಂಡು ಚಂದ್ರಬಾಬು ನಾಯ್ಡು ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇತರ ಪಕ್ಷಗಳನ್ನು ಒಟ್ಟುಗೂಡಿಸುತ್ತಿದ್ದಾರೆ. ಆದರೆ ಆಘಾತಗಳ ಮೇಲೆ ಆಘಾತಗಳನ್ನು ಎದುರಿಸುತ್ತಿರುವ ಚಂದ್ರಬಾಬು ನಾಯ್ಡು ರವರು ತೃತೀಯ ರಂಗ ರಚಿಸುವುದು ಇರಲಿ ತನ್ನ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಬರಬೇಕಾದ ಸನ್ನಿವೇಶಗಳು ನಾಯ್ಡು ರವರಿಗೆ ಎದುರಾಗುತ್ತಿವೆ.
ಒಂದು ಕಡೆ ಚಂದ್ರಬಾಬು ನಾಯ್ಡು ರವರು ಇತರ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರೆ, ಇನ್ನೊಂದು ಕಡೆ ಬಿಜೆಪಿ ಪಕ್ಷವು ಚಂದ್ರಬಾಬು ನಾಯ್ಡುರವರ ಪಕ್ಷವನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಚಂದ್ರಬಾಬು ನಾಯ್ಡುರವರ ಪಕ್ಷ ನೆಲ ಕಚ್ಚುವುದು ಖಚಿತ ಎಂಬಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವ ಸೂಚನೆ ನೀಡುವ ಮೂಲಕ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಪಕ್ಷ ಮೊದಲ ಶಾಕ್ ನೀಡಿತ್ತು. ಇದೀಗ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಬಿಗ್ ಸ್ಟಾರ್ ನಟ ಬಿಜೆಪಿಗೆ ಬೆಂಬಲ ಘೋಷಿಸಿ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ತೆಲುಗಿನಲ್ಲಿ ಸ್ಟಾರ್ ನಟರಾಗಿ ಮಿಂಚಿರುವ ನಾಗಾರ್ಜುನ ರವರು ಮೊದಲಿನಿಂದಲೂ ಸಮಾಜ ಸೇವಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ, ಹಲವಾರು ಸಂಘ ಸಂಸ್ಥೆಗಳಿಗೆ ಹಣ ದಾನ ಮಾಡುವ ಇವರು ಹಲವಾರು ಆಶ್ರಮಗಳನ್ನು ಸಹ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಕಾಲೇಜ್ ಫೀಸ್ ಕಟ್ಟುವುದು ಇನ್ನಿತರ ಸಮಾಜ ಸೇವಕ ಕೆಲಸಗಳಿಂದ ಹೆಸರಾಂತ ರಾಗಿದ್ದಾರೆ.
ದಶಕಗಳ ಕಾಲದಿಂದಲೂ ಬಿಗ್ ಸ್ಟಾರ್ ಆಗಿ ಹೊರಹೊಮ್ಮಿರುವ ನಾಗಾರ್ಜುನ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಇವರು ಒಂದು ವೇಳೆ ಬಿಜೆಪಿ ಪಕ್ಷದ ಕಡೆ ಪ್ರಚಾರ ಮಾಡಿದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸೀಟುಗಳನ್ನು ಬಿಜೆಪಿ ಪಕ್ಷವು ಗೆಲ್ಲುವುದು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಮೋದಿ ಅವರ ಕಾರ್ಯವೈಖರಿ ಬಗ್ಗೆ ಮಾತನಾಡಿರುವ ನಾಗಾರ್ಜುನ ರವರು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ, ಮತ್ತು ಗುಜರಾತ್ ರಾಜ್ಯದ ಮಾದರಿಯ ಅಭಿವೃದ್ಧಿಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.