ಸ್ಯಾಂಡಲ್ ವುಡ್ ನಟರ ಆದಾಯದ ಬಗ್ಗೆ ಐಟಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?
ಸ್ಯಾಂಡಲ್ ವುಡ್ ನಟರ ಆದಾಯದ ಬಗ್ಗೆ ಐಟಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?
ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ತೆರಿಗೆ ಅಧಿಕಾರಿಗಳು ಸಿನಿಮಾರಂಗದ ದಿಗ್ಗಜ ನಟರ ಮನೆಗಳ ಮೇಲೆ ದಾಳಿ ಮಾಡಿರುವ ಸುದ್ದಿ. ಇದನ್ನು ಕೆಲವರು ರಾಜಕೀಯ ಪ್ರೇರಿತ ದಾಳಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಈ ವಿಷಯ ತಿಳಿದ ನಂತರ ಎಲ್ಲರೂ ಸುಮ್ಮನೆ ಆಗಬೇಕಾಗುತ್ತದೆ.
ಯಾಕೆಂದರೆ ಅಧಿಕಾರಿಗಳಿಗೆ ಸ್ಯಾಂಡಲ್ ವುಡ್ ನಟರ ಸಂಪೂರ್ಣವಾದ ಆದಾಯದ ವಿವರವನ್ನು ಯಾರು ನೀಡಿದ್ದಾರೆ ಎಂಬ ಅಂಶ ಬಯಲಾಗಿದೆ.. ಸ್ಯಾಂಡಲ್ ವುಡ್ ನಟರ ಮನೆಯ ಮೇಲೆ ಇದ್ದಕ್ಕಿದ್ದ ಹಾಗೆ ಐಟಿ ಅಧಿಕಾರಿಗಳು ಏಕಾಏಕಿ ಮುಗಿ ಬೀಳಲು ಕಾರಣವೇನು ಎಂಬುದು ಬಯಲಾಗಿದೆ.
ಅಷ್ಟಕ್ಕೂ ಕಾರಣವೇನು ಗೊತ್ತಾ??
ಇತ್ತೀಚೆಗೆ ಸ್ಯಾಂಡಲ್ ವುಡ್ನ ಖ್ಯಾತ ನಿರ್ದೇಶಕ ರಾಗಿರುವ ಜಯಣ್ಣ ರವರ ಮನೆ ಮೇಲೆ ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆಯಲ್ಲಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡ ಐಟಿ ಅಧಿಕಾರಿಗಳು ಜಯಣ್ಣ ರವರಿಗೆ ಸಂಬಂಧಿಸಿದ ಹಲವಾರು ಡೈರಿಗಳನ್ನು ಸಹ ವಶಪಡಿಸಿಕೊಂಡಿದ್ದರು.
ಈ ಡೈರಿಗಳಲ್ಲಿ ಕರ್ನಾಟಕ ಚಲನಚಿತ್ರ ರಂಗದ ದೊಡ್ಡ ದೊಡ್ಡ ನಾಯಕ ಹಾಗೂ ನಿರ್ಮಾಪಕರ ಹೆಸರುಗಳು ನಮೂದಾಗಿದೆ ಹಾಗೂ ಅವರ ಆದಾಯದ ಬಗ್ಗೆ ಸಂಪೂರ್ಣ ವಿವರಗಳನ್ನು ಜಯಣ್ಣ ರವರು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಾರೆ. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿರುವ ಐಟಿ ಅಧಿಕಾರಿಗಳು ಚಲನಚಿತ್ರ ರಂಗದ ದೊಡ್ಡ ನಿರ್ಮಾಪಕ ಹಾಗೂ ನಟರ ಮೇಲೆ ದಾಳಿಯನ್ನು ನಡೆಸಿದ್ದಾರೆ.
ಈ ವಿಷಯ ಬಯಲಾಗುತ್ತಿದ್ದಂತೆ ರಾಜಕೀಯ ಪ್ರೇರಿತ ದಾಳಿ ಎಂದು ಬಿಂಬಿಸುತ್ತಿದ್ದ ಹಲವಾರು ಅಭಿಮಾನಿಗಳು ಶಾಂತ ರಾಗಿದ್ದಾರೆ. ಈ ಅಂಶದಿಂದ ಐಟಿ ದಾಳಿ ಗೂ ಹಾಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂಬುದು ಸಾಬೀತಾದಂತಾಗಿದೆ.