ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ ವಿಜಯೇಂದ್ರ

ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ ವಿಜಯೇಂದ್ರ

0

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರತಿಯೊಂದು ಸೀಟುಗಳು ಬಹಳ ಮುಖ್ಯವಾಗಿರುತ್ತದೆ ಅದರಲ್ಲಿಯೂ ದೇಶದ ರಾಜಕಾರಣದ ಮೇಲೆ ಬಹಳ ಪ್ರಭಾವವನ್ನು ಬೀರುವ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಶಕ್ತಿಮೀರಿ ಶ್ರಮಿಸಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೆಲವೇ ಕೆಲವು ಸೀಟುಗಳಿಂದ ಅಧಿಕಾರವನ್ನು ಬಿಜೆಪಿ ಪಕ್ಷ ಕಳೆದುಕೊಂಡಿತು.

ಹಲವಾರು ಕಡೆ ಬಿಜೆಪಿ ಪಕ್ಷದಲ್ಲಿದ್ದ ಭಿನ್ನಮತ ಗಳೇ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಂತೆಯೇ ಬಿಎಸ್ ಯಡಿಯೂರಪ್ಪನವರ ವರ್ಚಸ್ಸನ್ನು ಹೆಗಲ ಮೇಲೆ ಹೊತ್ತಿರುವ ವಿಜಯೇಂದ್ರ ಅವರಿಗೂ ಸಹ ಟಿಕೆಟ್ ನೀಡದೆ ಇರುವುದು ಪಕ್ಷದಲ್ಲಿ ಭಿನ್ನಮತ ಭುಗಿಲೇಳುವ ವಂತೆ ಮಾಡಿತ್ತು.

ಕೆಲವೇ ಕೆಲವು ತಿಂಗಳುಗಳ ಹಿಂದೆ ರಾಜಕಾರಣಕ್ಕೆ ಕಾಲಿಟ್ಟರೂ ಯಾರೂ ಊಹಿಸದ ರೀತಿಯಲ್ಲಿ ವಿಜಯೇಂದ್ರ ರವರು ಇಂದು ಬೆಳೆದು ನಿಂತಿದ್ದಾರೆ. ಯುವಕರಿಗೆ ಮಾರ್ಗದರ್ಶಿಯಾಗಿ ರುವ ವಿಜಯೇಂದ್ರ ರವರು ಈಗಾಗಲೇ ಯಡಿಯೂರಪ್ಪನವರ ಅಘೋಷಿತ ಉತ್ತರಾಧಿಕಾರಿ ಎಂದರೆ ತಪ್ಪಾಗಲಾರದು. ಇಂತಹ ವರ್ಚಸ್ಸನ್ನು ಹೊಂದಿರುವ ವಿಜಯೇಂದ್ರ ಅವರು ಈಗ ಅಭಿಮಾನಿಗಳಿಗೆ ಭಾರಿ ನಿರಾಸೆಯನ್ನು ಉಂಟು ಮಾಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯದೆ ನಿರಾಸೆ ಅನುಭವಿಸಿದ್ದ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯೇಂದ್ರ ರವರು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಮುಂದಿನ ಲೋಕಸಭಾ ಚುನಾವಣೆಗೆ ಎಷ್ಟೇ ಒತ್ತಡ ಬಂದರೂ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಅಭಿಮಾನಿಗಳು ಕಳೆದರೆ ಚುನಾವಣೆಯ ರೀತಿಯಲ್ಲಿ ಆಗದೆ ಇರೋದನ್ನ ತಡೆಯಲು ವಿಜಯೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ ಆದರೆ ಇಂತಹ ಸಮಯದಲ್ಲಿ ವಿಜಯೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿದ ತಕ್ಷಣ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಉಂಟಾಗಿದೆ.

ರಾಜ್ಯದಿಂದ ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ಆಯ್ಕೆಮಾಡಲು ಶ್ರಮಿಸುತ್ತೇನೆ ಎಂದು ಹೇಳಿರುವ ವಿಜಯೇಂದ್ರ ರವರು ಯಾವ ರಾಜಕೀಯ ಒತ್ತಡಕ್ಕೆ ಮಣಿಯದೆ ನಾನು ಲೋಕಸಭಾ ಚುನಾವಣೆಯಿಂದ ದೂರ ಇರುತ್ತೇನೆ ಹಾಗೂ ಕೇವಲ ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಈಗಿನ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ ಯುವಕರು ಮುಂದೆ ಬರಬೇಕು ಎಂಬುದು ಎಲ್ಲರ ಅಭಿಪ್ರಾಯ ವಾಗಿದೆ ಆದರೆ ವಿಜಯೇಂದ್ರ ಅವರ ಈ ನಡೆ ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ.