ಮೋದಿಗೆ ಆನೆಬಲ: ಬಿಜೆಪಿ ಮೈತ್ರಿಕೂಟಕ್ಕೆ ಮತ್ತೊಂದು ದೊಡ್ಡ ಪಕ್ಷ ಸೇರ್ಪಡೆ !!

ಮೋದಿಗೆ ಆನೆಬಲ: ಬಿಜೆಪಿ ಮೈತ್ರಿಕೂಟಕ್ಕೆ ಮತ್ತೊಂದು ದೊಡ್ಡ ಪಕ್ಷ ಸೇರ್ಪಡೆ !!

0

2019ರ ಲೋಕಸಭಾ ಚುನಾವಣೆ ದೇಶದ ತಿರುವನ್ನು ಬದಲಿಸಲಿದೆ ಎಂಬಂತೆ ಬಿಂಬಿತವಾಗುತ್ತಿರುವ ಚುನಾವಣೆಯಲ್ಲಿ ಮೋದಿ ಅವರನ್ನು ಹೇಗಾದರೂ ಮಾಡಿ ಸೋಲಿಸಿ ಅಧಿಕಾರದ ಗದ್ದುಗೆ ಏರಬೇಕೆಂದು ಎಲ್ಲಾ ಪಕ್ಷಗಳು ಒಟ್ಟಾಗಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಿದ್ಧವಾಗುತ್ತವೆ ಆದರೆ ಬಿಜೆಪಿ ವಿರೋಧಿ ಪಕ್ಷಗಳಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.

ನರೇಂದ್ರ ಮೋದಿ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೋದಿ ಅಲೆಯನ್ನು ಸುನಾಮಿಯಾಗಿ ಬದಲಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆ ಗಳಲ್ಲಿಯೂ ಸಹ ಬಿಜೆಪಿ ಮೈತ್ರಿಕೂಟಕ್ಕೆ ಬರ್ಜರಿ ಗೆಲುವು ಸಿಗಲಿದೆ ಎಂದು ಫಲಿತಾಂಶ ಹೊರಬಿದ್ದಿತ್ತು ಆದರೆ ಇದೀಗ ಬಂದಿರುವ ಸುದ್ದಿಯನ್ನು ಕೇಳಿದರೆ ಮೋದಿ ರವರಿಗೆ ಆನೆಬಲ ಬಂದಂತಾಗಿದೆ ಜೊತೆಗೆ 21 ಲೋಕಸಭಾ ಚುನಾವಣಾ ಸೀಟುಗಳು ಉಡುಗೊರೆಯಾಗಿ ದೊರೆಯುವ ಸಾಧ್ಯತೆಗಳಿವೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಡಿಶಾ ರಾಜ್ಯದಲ್ಲಿ ಸ್ಥಳೀಯ ಪಕ್ಷವಾದ ಬಿಜೆಡಿ ಹವಾ ಯಾರಿಗೆ ತಿಳಿದಿಲ್ಲ ಹೇಳಿ ಬರೋಬ್ಬರಿ 147 ವಿಧಾನಸಭಾ ಕ್ಷೇತ್ರಗಳಲ್ಲಿ 118 ಸ್ಥಾನಗಳನ್ನು ಗಳಿಸಿರುವ ಬಿಜೆಡಿ ಪಕ್ಷವು ಅಧಿಕಾರದ ಗದ್ದುಗೆಯಲ್ಲಿದೆ. ಇನ್ನುಳಿದಂತೆ 21 ಲೋಕಸಭಾ ಕ್ಷೇತ್ರಗಳಲ್ಲಿ 19 ಸ್ಥಾನಗಳನ್ನು ಗಳಿಸಿರುವ ಬಿಜೆಡಿ ಪಕ್ಷವು ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದೆ.

ಇಂತಹ ಬಲಿಷ್ಟ ಪಕ್ಷವು ಈಗ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ನರೇಂದ್ರ ಮೋದಿ ರವರ ಅಧಿಕಾರವನ್ನು ಮೆಚ್ಚಿಕೊಂಡಿರುವ ಬಿಜೆಡಿ ಪಕ್ಷವು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲು ಬಿಜೆಪಿ ಪಕ್ಷವು ಸಿದ್ಧವಾಗುತ್ತದೆ ಎಂದು ಕಾಂಗ್ರೆಸ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಮೈತ್ರಿಯನ್ನು ಮಾಡಿಕೊಳ್ಳಬಾರದು ಇದೊಂದು ಅಪವಿತ್ರ ಮೈತ್ರಿ ಆಗುತ್ತದೆ ಎಂದು ಬಿಜೆಡಿ ಹಾಗೂ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾರು ಏನೇ ಹೇಳಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಬಿಜೆಡಿ ಪಕ್ಷವು ಕೈಜೋಡಿಸಿರುವುದು ಸಂತಸದ ವಿಷಯ. ಒಂದು ವೇಳೆ ಮೋದಿ ರವರ ಹವಾ, ಇದೇ ರೀತಿ ಮುಂದುವರೆದಲ್ಲಿ ಇನ್ನು ಐದು ವರ್ಷಗಳ ಕಾಲ ನರೇಂದ್ರ ಮೋದಿರವರ ಅಧಿಕಾರವನ್ನು ನಾವು ಕಾಣಬಹುದು.