ರೇವಣ್ಣ ಪುತ್ರನಿಗೆ ಬಾರಿ ಸಂಕಷ್ಟ !! ಬಿಸಿ ಮುಟ್ಟಿಸಿದ್ದಾರೆಯೇ ಡಿಸಿ??

ರೇವಣ್ಣ ಪುತ್ರನಿಗೆ ಬಾರಿ ಸಂಕಷ್ಟ !! ಬಿಸಿ ಮುಟ್ಟಿಸಿದ್ದಾರೆಯೇ ಡಿಸಿ??

0

ರಾಜ್ಯದಲ್ಲಿ ಎತ್ತ ನೋಡಿದರು ಈಗ ಕುಮಾರಸ್ವಾಮಿ ರವರ ಕುಟುಂಬದ ಮೇಲೆ ಆರೋಪಗಳ ಮೇಲೆ ಆರೋಪಗಳು ಕೇಳಿಬರುತ್ತಿವೆ ಕೇವಲ ಕೆಲವು ತಿಂಗಳುಗಳ ಹಿಂದಷ್ಟೇ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡು ಮುಖ್ಯಮಂತ್ರಿಗಳಾಗಿದ್ದರು ತದನಂತರ ಅವರ ಅದೃಷ್ಟ ಚೆನ್ನಾಗ್ ಇದ್ದಂತೆ. ಹಲವಾರು ಆರೋಪಗಳು ಕುಮಾರಸ್ವಾಮಿ ಅವರ ಮೇಲೆ ಕೇಳಿ ಬರುತ್ತಿವೆ ಅಷ್ಟೇ ಅಲ್ಲದೆ ಅವರ ಸಹೋದರರಾದ ಸಚಿವ ರೇವಣ್ಣ ಅವರ ಮೇಲೆ ವಿರೋಧ ಪಕ್ಷದವರು ಹಾಗೂ ಸ್ವ ಪಕ್ಷ ನಾಯಕರು ಸಹ ಸಿಡಿದೆದ್ದಿದ್ದಾರೆ.

ಈಗ ಈ ಆರೋಪಗಳ ಮೇಲೆ ಮತ್ತೊಂದು ಆರೋಪ ಸೇರಿಕೊಂಡಿದ್ದು ನೇರವಾಗಿ ರೇವಣ್ಣ ಕುಟುಂಬದವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಕೆಲವೇ ಕೆಲವು ದಿನಗಳ ಹಿಂದಷ್ಟೇ ಜೆಡಿಎಸ್ ಯುವ ನಾಯಕರಾದ, ಸಚಿವ ರೇವಣ್ಣ ಮಗನಾದ ಪ್ರಜ್ವಲ್ ರೇವಣ್ಣ ಅವರ ಮೇಲೆ ಭೂ ಕಬಳಿಕೆ ಆರೋಪ ಕೇಳಿ ಬಂದಿತ್ತು. ಮೈತ್ರಿ ಸರ್ಕಾರದ ಕಾಂಗ್ರೆಸ್ ನಾಯಕರಾದ ಎ ಮಂಜುರವರು ನ್ಯಾಯಾಲಯದ ಮೊರೆ ಹೋಗಿದ್ದರು.

ಬರೋಬ್ಬರಿ 69 ಎಕರೆ ಭೂ ಒತ್ತುವರಿ ಮಾಡಿದ್ದಾರೆ ಎಂದು ಮಂಜುರವರು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಈ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಾಲಯವು ರೇವಣ್ಣ ಪುತ್ರ ರವರ ಮೇಲೆ ತನಿಖೆಗೆ ಆದೇಶಿಸಿದ್ದು , ಹಾಸನದ ಜಿಲ್ಲಾಧಿಕಾರಿಯಾದ ರೋಹಿಣಿ ರವರಿಗೆ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ ಹಾಗೂ ಈ ಕೂಡಲೇ ಈ ಜಮೀನಿನ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದೆ.

ಮೊದಲಿನಿಂದಲೂ ಸರ್ಕಾರಿ ಕೆಲಸವನ್ನು ಅಚ್ಚುಕಟ್ಟಾಗಿ ಡಿಸಿ ರೋಹಿಣಿ ಅವರು ನಿರ್ವಹಿಸುತ್ತಾ ಬಂದಿದ್ದಾರೆ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೆ ಅಧಿಕಾರ ನಿರ್ವಹಿಸುತ್ತಿರುವ ಇವರೂ ಜೆಡಿಎಸ್ ಯುವ ನಾಯಕರಾದ ಪ್ರಜ್ವಲ್ ರೇವಣ್ಣ ಅವರಿಗೆ ಬಿಸಿ ಮುಟ್ಟಿಸಲು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.