ಯುವ ನಾಯಕನಿಗೆ ಧನ್ಯವಾದ ತಿಳಿಸಿದ ಗಡ್ಕರಿ: ಯಾರು ಮತ್ತು ಯಾಕೆ ಗೊತ್ತಾ?
ಯುವ ನಾಯಕನಿಗೆ ಧನ್ಯವಾದ ತಿಳಿಸಿದ ಗಡ್ಕರಿ: ಯಾರು ಮತ್ತು ಯಾಕೆ ಗೊತ್ತಾ?
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ರವರು ಕರ್ನಾಟಕ ರಾಜ್ಯಕ್ಕೆ ಒಂದಲ್ಲ ಒಂದು ಯೋಜನೆಗಳಿಂದ ಸಿಹಿ ಸುದ್ದಿಯನ್ನು ನೀಡುತ್ತಾ ಬಂದಿದ್ದಾರೆ. ನಿನ್ನೆಯಷ್ಟೇ ಹಾಸನ ಜಿಲ್ಲೆಯಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಯೋಜನೆಯ ಪ್ರತಿಷ್ಠಾಪನೆ ಮಾಡಿ, 60 ಸಾವಿರ ಕೋಟಿ ಯೋಜನೆಗೆ ಘೋಷಣೆ ಮಾಡಿ ಕರ್ನಾಟಕದಿಂದ ತೆರಳಿದ್ದರು.
ಆದರೆ ನಿತಿನ್ ಗಡ್ಕರಿ ರವರು ಕರ್ನಾಟಕ ಬಿಟ್ಟು ಹೊರ ಹೋಗುತ್ತಿದ್ದಂತೆ ಟ್ವಿಟರ್ ಮೂಲಕ ಕರ್ನಾಟಕ ರಾಜ್ಯದ ಯುವ ನಾಯಕನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಟ್ವೀಟ್ ನಲ್ಲಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಇತ್ತೀಚಿಗೆ ಉದಯವಾದ ಮತ್ತು ಸಾಕಷ್ಟು ಯುವಕರಿಗೆ ಮಾದರಿಯಾಗಿರುವ ಬಿಜೆಪಿ ಪಕ್ಷದ ಯುವ ನಾಯಕನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಷ್ಟಕ್ಕೂ ಯಾರು ಆ ಯುವ ನಾಯಕ ಮತ್ತು ಧನ್ಯವಾದ ತಿಳಿಸಲು ಕಾರಣವೇನು ಗೊತ್ತೆ?
ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಿ ಶಾಸಕನಾಗಿ ಗೆದ್ದು ಬಂದ ಬಿಜೆಪಿ ಪಕ್ಷದ ಶಾಸಕರಾದ ಪ್ರೀತಮ್ ಗೌಡ ರವರಿಗೆ ಧನ್ಯವಾದವನ್ನು ತಿಳಿಸಿರುವ ನಿತಿನ್ ಗಡ್ಕರಿ ರವರು, ಹಾಸನ ಜಿಲ್ಲೆಯ ಪ್ರಮುಖ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ , ಮಾಜಿ ಪ್ರಧಾನಿಗಳಾದ ದೇವೇಗೌಡರ ಜೊತೆ ಯೋಜನೆಯ ಪ್ರತಿ ಹಂತದಲ್ಲಿಯೂ ಕೇಂದ್ರ ಸರ್ಕಾರವನ್ನು ಬೆನ್ನತ್ತಿ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಕಾರಣಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ನಿತಿನ್ ಗಡ್ಕರಿ ರವರು ಟ್ವೀಟ್ ಮಾಡಿದ್ದಾರೆ.
ಪ್ರೀತಂ ಗೌಡ ರವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಯುವ ನಾಯಕರಾದ ಪ್ರೀತಂ ಗೌಡ ರವರು ಮತ್ತೊಮ್ಮೆ ಯುವಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.