ಸೇತುವೆ ರಸ್ತೆ ನಂತರ ಕರ್ನಾಟಕಕ್ಕೆ ಬಂಪರ್ ಆಫರ್: ರೈತರೇ ಚಿಂತೆ ಬಿಡಿ
ಸೇತುವೆ ರಸ್ತೆ ನಂತರ ಕರ್ನಾಟಕಕ್ಕೆ ಬಂಪರ್ ಆಫರ್: ರೈತರೇ ಚಿಂತೆ ಬಿಡಿ
ಕೇಂದ್ರ ಸರ್ಕಾರವು ಒಂದಲ್ಲ ಒಂದು ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ಬಾರಿ ಬೆಂಬಲಕ್ಕೆ ನಿಂತಿದೆ. ಅದರಲ್ಲಿಯೂ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ರವರು ಹಲವಾರು ಪ್ಯಾಕೇಜ್ ಗಳನ್ನು ಈಗಾಗಲೇ ಕರ್ನಾಟಕಕ್ಕೆ ಘೋಷಿಸಿದ್ದಾರೆ. ಇಂದು ಹಾಸನದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ರವರು 2000 ಕೋಟಿ ಯೋಜನೆಯ ಉದ್ಘಾಟನೆಯ ವೇಳೆ ಕರ್ನಾಟಕಕ್ಕೆ ಮತ್ತೊಂದು ಬಂಪರ್ ಆಫರ್ ನೀಡಿದ್ದಾರೆ.
ಈ ಯೋಜನೆಯಿಂದ ಇಡೀ ಕರ್ನಾಟಕವನ್ನು ಹಸಿರುಮಯ ವಾಗಲಿದೆ, ಇನ್ನು ಯಾವ ರೈತನೂ ನನಗೆ ಬೆಳೆ ಬಂದಿಲ್ಲ ಎಂಬ ಕಾರಣವನ್ನು ಹೇಳಿ ಸರ್ಕಾರದ ಬಳಿ ಸಾಲಮನ್ನ ಮಾಡಿ ಎಂದು ಹೋರಾಟಕ್ಕಿಳಿದು ಗೂಂಡಾಗಳು ಎನಿಸಿ ಕೊಳ್ಳುವ ಅಥವಾ ಲಾಠಿ ರುಚಿ ನೋಡುವ ಅಗತ್ಯವಿರುವುದಿಲ್ಲ. ನಿತಿನ್ ಗಡ್ಕರಿಯವರು ರೈತರು ಸಾಲ ಮನ್ನಾ ಮಾಡುವುದಕ್ಕಿಂತ ರೈತರು ಸಾಲ ಮಾಡದೇ ಇರುವ ಹಾಗೆ ಮಾಡಲು ಹೊರಟಿದ್ದಾರೆ ಎಂದರೆ ತಪ್ಪಾಗಲಾರದು.
ಕರ್ನಾಟಕ ರಾಜ್ಯವು ಮೊದಲಿನಿಂದಲೂ ಅತಿವೃಷ್ಟಿ-ಅನಾವೃಷ್ಟಿ ಯನ್ನು ಎದುರಿಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಒಬ್ಬ ರೈತನು ಬೆಳೆ ಬೆಳೆದು ನಿಶ್ಚಿಂತೆಯಾಗಿ ಮಲಗಿಲ್ಲ ಏನಾದರೂ ಒಂದು ತೊಂದರೆಯಿಂದ ಕಷ್ಟಗಳ ಸರಮಾಲೆಯನ್ನೇ ತನ್ನ ಕುತ್ತಿಗೆಗೆ ಸುತ್ತಿ ಕೊಂಡು ಓಡಾಡುತ್ತಿದ್ದಾನೆ. ಅಂಥವರ ಸಮಸ್ಯೆಗೆ ನಿತಿನ್ ಗಡ್ಕರಿ ರವರು ಶಾಶ್ವತ ಪರಿಹಾರವನ್ನು ನೀಡುವ ಯೋಜನೆಯನ್ನು ಕರ್ನಾಟಕಕ್ಕೆ ಘೋಷಿಸಿದ್ದಾರೆ.
ಈ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಜಲ ವಿವಾದ ಮುಕ್ತಾಯಗೊಳ್ಳಲಿದೆ ಮತ್ತು ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರಿಗೆ ಎಲ್ಲ ರೈತರು ಬೆಳೆ ಬೆಳೆಯುವುದಕ್ಕೆ ಅನುಕೂಲವಾಗುವಂತೆ ನೀರನ್ನು ಒದಗಿಸುವ ಕಾರ್ಯಕ್ಕೆ ನಿತಿನ್ ಗಡ್ಕರಿ ಅವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಚಾಲನೆ ನೀಡಲಿದ್ದಾರೆ.
ಅಷ್ಟಕ್ಕೂ ಆ ಯೋಜನೆ ಯಾವುದು ಗೊತ್ತಾ?
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಂಧ್ರಪ್ರದೇಶದ ತಾಯಿ ಗೋದಾವರಿ ನದಿಯ 11000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಆದರೆ ನಾವು ಮತ್ತು ತಮಿಳುನಾಡಿನ ಜನತೆ ಕೇವಲ 60 ರಿಂದ 70 ಟಿಎಂಸಿ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇದನ್ನು ನೆನಪಿಸಿಕೊಂಡ ನಿತಿನ್ ಗಡ್ಕರಿ ರವರು ಗೋದಾವರಿ ಡ್ಯಾಮ್ ಗೆ ಅಡ್ಡಲಾಗಿ ಪೋಲಾವರಂ ನ ಬಳಿ ಬರೋಬ್ಬರಿ 60 ಸಾವಿರ ಕೋಟಿ ವೆಚ್ಚದಲ್ಲಿ ಅಣೆಕಟ್ಟನ್ನು ನಿರ್ಮಿಸಿ ಆ ಅಣೆಕಟ್ಟಿನ ಹಿನ್ನೀರು ರನ್ನು ಕೃಷ್ಣಾ ನದಿಗೆ ಹರಿಸಿ ಕೃಷ್ಣಾ ನದಿಯಿಂದ ಪೆನ್ನ ನದಿಗೆ ಹರಿಸಿ ನಂತರ ಅದನ್ನು ಕಾವೇರಿಗೆ ಹರಿಸಿ, ತಮಿಳುನಾಡಿಗೆ ಹೋಗುವಂತೆ ಮಾಡಲಿದ್ದಾರೆ.
ಇದರಿಂದ ಆಂಧ್ರ ಪ್ರದೇಶದ , ಕರ್ನಾಟಕ ಹಾಗೂ ತಮಿಳುನಾಡಿನ ಜನತೆಯು ಸಹ ನೀರಿನ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. ಕರ್ನಾಟಕದ ರೈತರಿಗೆ ಬರೋಬ್ಬರಿ 450 ಟಿಎಂಸಿ ನೀರು ದೊರೆಯಲಿದ್ದು ಉಳಿದ ನೀರನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಿಂದ ಎರಡು ರಾಜ್ಯಗಳ ನಡುವೆ ಇರುವ ಜಲ ವಿವಾದ ಬಗೆಹರಿದು ಅಷ್ಟೇ ಅಲ್ಲದೆ ರೈತರ ಸಂಕಷ್ಟ ದಿನಗಳು ದೂರವಾಗಲಿದೆ ಎಂದರೆ ತಪ್ಪಾಗಲಾರದು.