ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಮೊದಲಿನಿಂದಲೂ ನೈಸರ್ಗಿಕವಾಗಿ ಸಿಗುವ ಮತ್ತು ಬಳಕೆಯಾಗುವ ಅಂಶಗಳಿಗೆ ಬಾರಿ ಒತ್ತು ನೀಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಂತೆ ನರೇಂದ್ರ ಮೋದಿ ಅವರು ಮತ್ತೊಂದು ದೊಡ್ಡ ಯೋಜನೆಯನ್ನು ಸಿದ್ಧಪಡಿಸಿದ್ದು ಯೋಜನೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿ ಬಹಳ ಕಡಿಮೆ ಬೆಲೆಗೆ ವಿದ್ಯುತ್ ದೊರಕಲಿದೆ.
ಅಷ್ಟಕ್ಕೂ ಆ ಯೋಜನೆ ಯಾವುದು ಗೊತ್ತಾ?
ಅದುವೇ ನೀರಿನ ಮೇಲೆ ದೊಡ್ಡ ಪ್ರಮಾಣದಲ್ಲಿ ತೇಲುವ ಸೌರ ಸ್ಥಾವರ, ಹೌದು ನೀವು ಹೇಳುತ್ತಿರುವುದು ನಿಜ ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನೀರಿನಲ್ಲಿ ತೇಲುವ ಸೌರ ಸ್ಥಾವರವನ್ನು ಸ್ಥಾಪಿಸಲಾಗುವುದು, ಇದರಿಂದ ವಿದ್ಯುತ್ ಉತ್ಪಾದನೆ ಅಷ್ಟೇ ಅಲ್ಲದೆ ಬರ ಬಿಸಿಲಿನಿಂದ ಆಕಾಶಕ್ಕೆ ಆವಿಯಾಗಿ ಹೋಗುವ ನೀರನ್ನು ಸಹ ತಡೆಗಟ್ಟುವ ಕೆಲಸವನ್ನು ಮೋದಿ ಸರ್ಕಾರ ಮಾಡಲಿದೆ.
ನೀರಿನ ಮೇಲೆ ದೊಡ್ಡ ಪ್ರಮಾಣದಲ್ಲಿ ತೇಲುವ ಸೌರ ಸ್ಥಾವರವನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಡಿಯುದ್ದಕ್ಕೂ ಇರುವ ರಿಹಾಂಡ್ ಅಣೆಕಟ್ಟಿನಲ್ಲಿ ಸ್ಥಾಪಿಸಲು ಮೋದಿ ಸರ್ಕಾರ ಅಸ್ತು ಎಂದಿದ್ದು ದೇಶದ ಅತಿ ದೊಡ್ಡ ಜಲಾಶಯ ಎಂದೇ ಕರೆಸಿಕೊಳ್ಳುವ ರಿಹಾಂಡ್ ಜಲಾಶಯದಲ್ಲಿ ತೇಲುವ ಸೌರ ಸ್ಥಾವರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಕಾಣಸಿಗುತ್ತದೆ.
2 ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು ಆದರೆ ಸೌರಶಕ್ತಿಯ ಮೇಲಿದ್ದ ಅಧಿಕ ಸುಂಕಗಳ ಕಾರಣ ಸರಿಯಾಗಿ ಟೆಂಡರ್ ಗಳ ಮೇಲೆ ಯಾವ ಕಂಪನಿಗಳು ಆಸಕ್ತಿ ತೋರಲಿಲ್ಲ. ಆದರೆ ಈಗ ಸೌರ ಫಲಕ ತಂತ್ರಜ್ಞಾನದಲ್ಲಿನ ಸುಧಾರಣೆಗಳಿಂದ ನಾಟಕೀಯ ರೀತಿಯಲ್ಲಿ ಸುಂಕದ ಮೌಲ್ಯಗಳು ಕುಸಿದಿದ್ದು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತೇಲುವ ಸೌರ ಸ್ಥಾವರವನ್ನು ಸ್ಥಾಪಿಸಲು ಕಂಪನಿಯೊಂದು ಮುಂದೆ ಬಂದಿದೆ.
ಕೇವಲ 3 ರು ನಂತೆ ವಿದ್ಯುತ್ ಅನ್ನು ನೀಡಲು ಸಿದ್ಧರಾಗಿರುವ ಈ ಕಂಪನಿಗಳು ಕೆಲವೇ ಕೆಲವು ದಿನಗಳಲ್ಲಿ ತೇಲುವ ಸೌರ ಸ್ಥಾವರವನ್ನು ಸ್ಥಾಪಿಸಿ ಎರಡು ರಾಜ್ಯಗಳಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತನ್ನು ನೀಡಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಸೌರ ಸಂಸ್ಥೆಯು ಮೋದಿ ರವರ ಈ ಬೃಹತ್ ಪ್ರಮಾಣದ ಯೋಜನೆಯನ್ನು ಎಲ್ಲಾ ಕಡೆ ವಿಸ್ತರಿಸಿದರೆ ಇನ್ನೂ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.