ಸಚಿವ ಗೋಯಲ್ ನಡೆಸಿದ ಸಮೀಕ್ಷೆ ಬಯಲು ಪ್ರಧಾನಿ ಪಟ್ಟ ಯಾರಿಗೆ ಗೊತ್ತಾ?

ಸಚಿವ ಗೋಯಲ್ ನಡೆಸಿದ ಸಮೀಕ್ಷೆ ಬಯಲು ಪ್ರಧಾನಿ ಪಟ್ಟ ಯಾರಿಗೆ ಗೊತ್ತಾ?

0

ಕಳೆದ ಬಾರಿ 2014ರ ಚುನಾವಣೆಯಲ್ಲಿ ಇಂದಿನ ಕೇಂದ್ರ ಸಚಿವರು ಆಗಿರುವ ಪಿಯುಷ್ ಗೊಯಲ್ ರವರು ಬೃಹತ್ ಸಮೀಕ್ಷೆಯೊಂದನ್ನು ನಡೆಸಿದ್ದರು. ಆ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ ಎಂದು ಹೇಳಿದ್ದರು . ಅದೇ ರೀತಿ ಸಮೀಕ್ಷೆಯು ನಿಜವಾಗಿತ್ತು ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆಯೇರುವಲ್ಲಿ ಯಶಸ್ವಿಯಾಗಿತ್ತು.

[do_widget id=et_ads-2]

2014ರಲ್ಲಿ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ಸಚಿವ ಪಿಯುಷ್ ಗೊಯಲ್ ರವರ ಸಮೀಕ್ಷೆ ಹೇಳಿದ್ದು ಅದರಂತೆ ಈ ಬಾರಿಯೂ ಸಚಿವ ಗೋಯಲ್ ರವರು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದಾರೆ ಈ ಸಮೀಕ್ಷೆ ಹೊರಬಿದ್ದಿದ್ದು ಭಾರೀ ಕುತೂಹಲವನ್ನು ಕೆರಳಿಸಿದೆ.

[do_widget id=et_ads-4]

ಖಾಸಗಿ ಸಂಸ್ಥೆಗಳನ್ನು ಬಳಸಿಕೊಂಡು ನಡೆಸಿರುವ ಈ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು  297 ರಿಂದ 303 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲಿದೆ ಎಂಬ ಅಂಶ ಫಲಿತಾಂಶದಿಂದ ಹೊರಬಿದ್ದಿದೆ. ಇನ್ನು ಎನ್ಡಿಎ ಮೈತ್ರಿಕೂಟದ ಪಕ್ಷಗಳ ಫಲಿತಾಂಶವನ್ನು ಸೇರಿಸಿಕೊಂಡರೆ ಬಿಜೆಪಿ ಪಕ್ಷವು ಒಟ್ಟು 350ಕ್ಕೂ ಹೆಚ್ಚು ಸೀಟುಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲಿ ದೆ ಎಂದು ಸಮೀಕ್ಷೆಯು ತಿಳಿಸಿದೆ

[do_widget id=et_ads-3]