ನಾಯ್ಡು ಗೆ ಮರ್ಮಾಘಾತ, ಮೋದಿ ಮಯವಾಗಲಿದೆ ಆಂಧ್ರಪ್ರದೇಶ

ನಾಯ್ಡು ಗೆ ಮರ್ಮಾಘಾತ, ಮೋದಿ ಮಯವಾಗಲಿದೆ ಆಂಧ್ರಪ್ರದೇಶ

0

ಆಂಧ್ರಪ್ರದೇಶದ ಇಂದಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ರವರು ಬಿಜೆಪಿ ವಿರುದ್ಧ ಪಕ್ಷಗಳನ್ನು ಎತ್ತು ಕಟ್ಟಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ತಪ್ಪಿಸಲು ಪ್ರಯತ್ನ ಪಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಉದ್ದೇಶದಿಂದ ಕಳೆದ ಕೆಲವು ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿಗಳಾದ ದೇವೇಗೌಡ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.

[do_widget id=et_ads-2]

ಆಂಧ್ರಪ್ರದೇಶದಲ್ಲಿ ಜನ ವಿರೋಧಿ ಅಲೆಯನ್ನು ಕಟ್ಟಿಕೊಂಡಿರುವ ಚಂದ್ರಬಾಬು ನಾಯ್ಡು ರವರು ತಾವು ಮಾಡಿದ ತಪ್ಪುಗಳಿಗೆ ಮೋದಿ ರವರನ್ನು ದೂಷಿಸುವ ಉದ್ದೇಶದಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಲಿಲ್ಲ ಎಂಬ ಕಾರಣಗಳನ್ನು ಕೊಟ್ಟು ಮೋದಿ ರವರ ಜೊತೆ ಮೈತ್ರಿ ತೊರೆದು ಕೊಳ್ಳು ವುದಾಗಿ ಘೋಷಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಚಂದ್ರಬಾಬು ನಾಯ್ಡು ಅವರು ಮೋದಿ ರವರ ವಿರುದ್ಧ ಇತರ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು ಎಲ್ಲರಿಗೂ ತಿಳಿದಿರುವ ವಿಷಯ.

[do_widget id=et_ads-3]

ಹೇಗಾದರೂ ಮಾಡಿ ಮೋದಿ ಅಲೆಯನ್ನು ತಡೆಯಬೇಕು ಎಂದು ಪ್ರಯತ್ನ ಪಟ್ಟಿದ್ದ ನಾಯ್ಡುರವರು ಕಾಂಗ್ರೆಸ್ ಪಕ್ಷವನ್ನು ಜೊತೆಗೆ ಸೇರಿಸಿಕೊಂಡು ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ, ಆದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಲಗಿಸಬೇಕು ಎಂಬ ಉದ್ದೇಶದಿಂದಲೇ ತೆಲುಗು ದೇಶಂ ಪಾರ್ಟಿ ಪ್ರಾರಂಭವಾಗಿತ್ತು. ಈ ಪ್ರಮುಖ ಸಿದ್ಧಾಂತ ದಿಂದಲೇ ಚಂದ್ರಬಾಬು ನಾಯ್ಡು ರವರ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

[do_widget id=et_ads-4]

ಆದರೆ ಇಂದು ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿರುವುದು ತೆಲುಗು ಚಿತ್ರರಂಗದ ಖ್ಯಾತ ನಟರಾದ ಚಿರಂಜೀವಿ ಅವರಿಗೆ ಇರುಸುಮುರುಸು ಉಂಟಾಗಿದೆ. ನಾನು ಕಾಂಗ್ರೆಸ್ ಪಕ್ಷವನ್ನು ಮುಗಿಸಲೆಂದು ಪಕ್ಷವನ್ನು ಕಟ್ಟಿ ನಂತರ ಆ ಪಕ್ಷವನ್ನು ತೆಲುಗು ದೇಶಂ ಪಾರ್ಟಿ ಒಳಗಡೆ ವಿಸರ್ಜಿಸಿದ್ದೇ, ಆದರೆ ತೆಲುಗು ದೇಶಂ ಪಾರ್ಟಿ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿರುವುದು ನನಗೆ ಇಷ್ಟವಾಗುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ನಿರ್ಧಾರದಿಂದ ಪಕ್ಷವನ್ನು ತೊರೆಯಲು ಚಿರಂಜೀವಿ ರವರು ನಿರ್ಧರಿಸಿದ್ದಾರೆ.

[do_widget id=et_ads-5]

ಇನ್ನು ಚಿರಂಜೀವಿ ರವರು ತಮ್ಮ ಸಹೋದರನಾದ ಪವನ್ ಕಲ್ಯಾಣ್ ರವರ ಪಾರ್ಟಿಗೆ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಇಷ್ಟಕ್ಕೆ ಸುಮ್ಮನಾಗದ ಚಿರಂಜೀವಿ ರವರು ಪವನ್ ಕಲ್ಯಾಣ್ ಅವರನ್ನು ಮನವೊಲಿಸಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು 2019ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

[do_widget id=et_ads-6]

ಒಂದು ವೇಳೆ ಇದೇ ನಡೆದಲ್ಲಿ ಮೋದಿ ಅವರ ವರ್ಚಸ್ಸಿನ ಜೊತೆಗೆ ಪವನ್ ಕಲ್ಯಾಣ್ ಅವರ ಕೋಟ್ಯಾಂತರ ಅಭಿಮಾನಿಗಳು ಮತ್ತು ಚಿರಂಜೀವಿ ರವರ ಅಭಿಮಾನಿಗಳು ಎಲ್ಲರೂ ಸೇರಿ ಆಂಧ್ರಪ್ರದೇಶವನ್ನು ಗೆದ್ದು ನರೇಂದ್ರ ಮೋದಿರವರ ಪ್ರಧಾನಿ ಹುದ್ದೆಗೆ ಕನಿಷ್ಠ 15ರಿಂದ 20 ಸೀಟುಗಳನ್ನು ಉಡುಗೊರೆಯಾಗಿ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

[do_widget id=et_ads-7]